ತ್ಯಾಜ್ಯದಿಂದ  ಅಲಂಕಾರ….!

ತ್ಯಾಜ್ಯದಿಂದ  ಅಲಂಕಾರ….!

ಒಬ್ಬೊಬ್ಬರಿಗೆ ಒದೊಂದು ಹವ್ಯಾಸ, ಆಸಕ್ತಿ, ಅಭಿರುಚಿಗೆ ತಕ್ಕಂತೆ ವಿವಿಧ ಜನರು ಹವ್ಯಾಸಗಳಲ್ಲಿ ತೊಡಗಿಕೊಂಡಿರುತ್ತಾರೆ. ವಿರಾಮದ ವೇಳೆಯನ್ನು ತಮ್ಮ ಕ್ರಿಯಾಶೀಲತೆಗಾಗಿ ಬಳಸಿಕೊಂಡು ತಮ್ಮದೇ ಶೈಲಿಯಲ್ಲಿ ವೈವಿಧ್ಯಮಯ ವಿನ್ಯಾಸದ ಆಕರ್ಷಕ  ಕಲಾಕೃತಿಗಳನ್ನು ತಯಾರಿಸಿ ಗಮನ ಸೆಳೆಯುವವರಲ್ಲಿ ಬೆಂಗಳೂರಿನ ಚಂದ್ರಾಲೇಔಟ್ ನಿವಾಸಿ ಹೇಮಾವತಿಯವರೂ ಒಬ್ಬರು. ಖಾಲಿ ವಾಟರ್ ಬಾಟಲ್, ಪ್ಲಾಸ್ಟಿಕ್ ಕವರ್, ಉಲನ್ ದಾರ, ಪ್ಲಾಸ್ಟಿಕ್ ಚೀಲದ ದಾರಗಳಿಂದ ಇವರು ಅನೇಕ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಶಿಕ್ಷಕಿಯಾಗಿರುವ  ಇವರು ತ್ಯಾಜ್ಯವಸ್ತುಗಳನ್ನು ಬಳಸಿ ಶಾಲೆಗಳಲ್ಲಿ ಮಕ್ಕಳಿಂದಲೇ ಸುಲಭವಾಗಿ ವಿವಿಧ ರೀತಿಯ ಗೃಹಾಲಂಕಾರದ ವಸ್ತುಗಳನ್ನು ,ಮಾಡಿಸುವ ಮೂಲಕ  ಅವರಲ್ಲಿ  ಕ್ರಿಯಾಶೀಲತೆಯನ್ನು ತುಂಬುವುದರ ಜೊತೆಗೆ ಮಕ್ಕಳ ಮನಸ್ಸನ್ನು ರಂಜಿಸುತ್ತಾ, ಮಾನಸಿಕತೆಯನ್ನು ರೂಪಿಸುವ  ಅತ್ಯಂತ ಯಶಸ್ವಿ ಕಾರ್ಯಯೋಜನೆಯನ್ನೂ ಹಮ್ಮಿಕೊಂಡಿದ್ದಾರೆ. ಎಳೆಯ ಮನಸ್ಸುಗಳು ಕೇಳಿ ಕಲಿಯುವುದಕ್ಕಿಂತಲೂ ಮಾಡಿ ತಿಳಿಯುವುದು ಹೆಚ್ಚು ಮನಸ್ಸಿಗೆ ಮುಟ್ಟುತ್ತದೆ ಎನ್ನುವ  ಅಭಿಪ್ರಾಯದ  ಇವರು ಮನೆಯಲ್ಲೇ ಸುಲಭವಾಗಿ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ಬ್ಯೂಟಿಫುಲ್ ಡೆಕೋರೇಟಿವ್ ಐಟಂ ತಯಾರಿಸಿದ್ದಾರೆ.

ಹೊಸ್ಮನೆ ಮುತ್ತು

Leave a Reply