‘ವಾಕಿಂಗ್ ಸ್ಟಿಕ್’

‘ವಾಕಿಂಗ್ ಸ್ಟಿಕ್’

ಮೇಲು ನೋಟಕ್ಕೆ ಹುಲ್ಲು ಕಡ್ಡಿಯಂತೆ ಕಾಣುವ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗಷ್ಟೇ ಗೊತ್ತಾಗುವುದು ಇದು ಬರೀ ಒಣಹುಲ್ಲು ಕಡ್ಡಿಯಲ್ಲವೆಂದು. ‘ವಾಕಿಂಗ್ ಸ್ಟಿಕ್’ ಎನ್ನುವ ಈ ಕೀಟ ಚಲಿಸಿದಾಗಷ್ಟೇ ಜೀವವಿದೆಯೆಂದು ಗೊತ್ತಾಗುತ್ತದೆ. ಕದಲದೇ ನಿಂತಾಗ ಇದು ಒಣಹುಲ್ಲೇ ಸರಿ. ಮೂರು ಜೋಡಿ ಕಾಲುಗಳು, ಸಂಯುಕ್ತ ಕಣ್ಣುಗಳು ಮತ್ತು ಒಂದು ಜೋಡಿ ಆಂಟೆನಾ ಹೊಂದಿರುವ ಈ ಕಡ್ಡಿಕೀಟ ಹಸಿರಿನೊಂದಿಗೆ ಹಸಿರಾಗಿ, ಒಣಹುಲ್ಲಿನೊಂದಿಗೆ ಒಣಹುಲ್ಲಾಗಿ ಬಿಡುವ ರಕ್ಷಣಾ ತಂತ್ರ ಅನುಸರಿಸುವುದು ನಿಜಕ್ಕೂ ಅಚ್ಚರಿ. ಹಲವು ಜೀವ ಸಂಕುಲದ ನೆಲೆಬೀಡಾಗಿರುವ ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಈ ಕಡ್ಡಿ ಕೀಟಗಳ ಜೀವಜಾಲ ಸದ್ದು-ಗದ್ದಲದ ಕಾಂಕ್ರೀಟ್ ಕಾಡಾದ ಬೆಂಗಳೂರಿನಲ್ಲಿಯೂ ತನ್ನ ನೆಲೆ ಕಂಡು ಕೊಂಡಿರುವುದು ನೋಡಿದರೆ ನನ್ನ ಪುಟ್ಟ ಕೈತೋಟ ಕೀಟ ಸ್ನೇಹಿ ಕೈ ತೋಟವಾಗಿದೆ ಅಂತ ಖುಷಿಯಾಗುತ್ತದೆ.

Leave a Reply