ಯಾರಿಟ್ಟರೀ ಚುಕ್ಕಿ…..!
ರಂಗೋಲಿಯಂತೆ, ಮುತ್ತಿನ ಲೋಲಕದಂತೆ ಕಾಣುವ, ನೋಡಲು ಕುತೂಹಲಕಾರಿಯಾಗಿರುವ ಈ ಮೊಟ್ಟೆಗಳು ಸೌಂದರ್ಯಕ್ಕೆ ಹೆಸರಾಗಿರುವ ಚಿಟ್ಟೆಯದ್ದು (butterfly). ತೆಳು ಹಳದಿ ಮಿಶ್ರಿತ ಬಿಳಿ ಬಣ್ಣದ, ಸಾಸುವೆ ಗಾತ್ರದ ಪಾರದರ್ಶಕವಾದ ಈ ಮೊಟ್ಟೆಗಳು ಒಂದಕ್ಕೊಂದು ಬಿಗಿಯಾಗಿ ಅಂಟಿಕೊಂಡಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಪಾರದರ್ಶಕವಾದ ಈ ಮೊಟ್ಟೆಯೊಳಗೆ ಬೆಳೆಯುತ್ತಿರುವ ಚಿಕ್ಕ ಕಂಬಳಿಹುಳುವನ್ನು (Tiny caterpillar) ಕಾಣಬಹುದು. ಮೊಟ್ಟೆ ಒಡೆದು ಬಂದ ಮರಿಯು ಮೊಟ್ಟೆಯ ಕವಚವನ್ನೇ ತಿನ್ನುತ್ತದೆ. ಅದರಲ್ಲಿರುವ ಪೌಷ್ಟಿಕಾಂಶ ಅದರ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ “ಮೆಟಾಮಾರ್ಫಾಸಿಸ್” ಎಂಬ ಪ್ರಕ್ರಿಯೆಗೆ ಒಳಗಾಗಿ ಸುಂದರ ಚಿಟ್ಟೆಯಾಗಿ ಬದಲಾಗುತ್ತದೆ. ಈ ಆಕರ್ಷಕವಾದ ಮೊಟ್ಟೆಗಳು ನಮ್ಮ ಮನೆಯ ಹಿತ್ತಲಲ್ಲಿ ಕಾಣಸಿಕ್ಕವು. ಇದು ಎನ್ ಲಾರ್ಜ್ ಮಾಡಲಾದ ಚಿತ್ರ.
ಹೊಸ್ಮನೆ ಮುತ್ತು
You must log in to post a comment.