Your Cart

Need help? Call +91 9535015489

📖 Print books shipping available only in India. ✈ Flat rate shipping

ಯಹಾ ಕಲ್ ಕ್ಯಾ ಹೋ… ಕಿಸ್ನೇ ಜಾನಾ…

ಯಹಾ ಕಲ್ ಕ್ಯಾ ಹೋ… ಕಿಸ್ನೇ ಜಾನಾ…

ಒಬ್ಬ ಅತ್ಯಂತ ಮೇಧಾವಿ ವಿದ್ಯಾರ್ಥಿ ಇದ್ದ. ವಿಜ್ಞಾನ ವಿಷಯದಲ್ಲಿ ಯಾವಾಗಲೂ ನೂರಕ್ಕೆ ನೂರು. IIT ಮದ್ರಾಸ್ಗೆ ಆಯ್ಕೆಯಾಗಿ ಅಲ್ಲಿಯೂ ಅತಿ ಹೆಚ್ಚು ಸಾಧನೆ ಮಾಡಿ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಅಲ್ಲಿಯೂ ಅತಿ ಹೆಚ್ಚು ಸಾಧನೆ ಮಾಡಿ ಕ್ಯಾಲಿಫೊರ್ನಿಯಾ ವಿಶ್ವ ವಿದ್ಯಾಲಯದಲ್ಲಿ MBA ಮುಗಿಸಿ ಅತಿ ಹೆಚ್ಚು ವೇತನದ ನೌಕರಿ ದೊರೆತು ಅಲ್ಲಿಯೇ ನೆಲೆಸಿದ. ಬೇಕೆಂದವಳೊಂದಿಗೆ ಮದುವೆ, ಈದು bedrooms ಇರುವದೊಂದು ಬಂಗ್ಲೆ, ಐಷಾರಾಮೀ ಕಾರುಗಳು, ಹೀಗೆ ಬೇಕೆಂದದ್ದೆಲ್ಲಾ ಅಂಗೈಯಲ್ಲಿ….
ಇಂಥವನು ಕೆಲ ತಿಂಗಳುಗಳ ಹಿಂದೆ, ತನ್ನ ಹೆಂಡತಿ, ಮಕ್ಕಳಿಗೆ ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಎಂದರೆ ನೀವು ನಂಬಲೇಬೇಕು.
ಆದದ್ದಿಷ್ಟೇ….
ಅಮೇರಿಕಾದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಭಾರೀ ವೇತನದ ಅವನ ನೌಕರಿ ಹೋಯಿತು. ಕಡಿಮೆ ವೇತನಕ್ಕೆ ದುಡಿಯಲು ಕೊನೆಗೆ ತಯಾರಾದರೂ ಈ ಬಿಳಿ ಆನೆ ಸಾಕುವ ಧೈರ್ಯ ಯಾರೂ ಮಾಡಲೇಯಿಲ್ಲ.
ದುಬಾರಿ ಮನೆಯ ಕಂತು ಕಟ್ಟಲಾಗದೇ ಅದೂ ಕೈ ಬಿಟ್ಟು ಹೋಯಿತು. ಅಳಿದುಳಿದ ಹಣದಲ್ಲಿ ಹಾಗೂ ಹೀಗೂ ಸುಧಾರಿಸಿಕೊಂಡರೂ ಅದು ಬಹಳದಿನ ನಡೆಯಲಿಲ್ಲ. ಹೂವು ಮಾರಿದಲ್ಲಿ ಹುಲ್ಲು ಮಾರಬೇಕಾದ ಅನಿವಾರ್ಯತೆಗೆ ಒಗ್ಗಿಕೊಳ್ಳಲು ಸಾಧ್ಯವಾಗದ ಕಾರಣ ದಂಪತಿಗಳು ಆತ್ಮಹತ್ಯಯ ಮೊರೆ ಹೊಕ್ಕರು.
ಕ್ಯಾಲಿಫೋರ್ನಿಯಾ ಇನ್ಸ್ಟಿ ಟ್ಯೂಟ್ ಆಫ್ ಸೈಕಾಲಜಿ ಈ ಘಟನೆಯ ಸಂಪೂರ್ಣ ಅಭ್ಯಾಸ ಮಾಡಿ ಕಾರಣ ಕಂಡು ಹಿಡಿಯಿತು… ಅವನ ಕುಟುಂಬದವರ, ಹಾಗೂ ಸ್ನೇಹಿತರ ಜೊತೆ ಚರ್ಚಿಸಿದಾಗ ಹೊರಬಂದ ಸತ್ಯವಿದು.
ಯಾವುದೇ ವ್ಯಕ್ತಿ ಸದಾ ಯಶಸ್ಸಿಗೆ ಮಾತ್ರ ಸಿದ್ದಗೊಳಿಸಲ್ಪಟ್ಟಾಗ ಅಕಸ್ಮಾತ್ತಾಗಿ ಎದುರಾಗಬಹುದಾದಾ ಅಪಯಶಸ್ಸನ್ನು ಎದುರಿಸುವ ಮನಸ್ಥೈರ್ಯ ಹೊಂದಿರುವದೇಯಿಲ್ಲ. ಅಂಥವರಿಗೆ ಬದುಕಿನಲ್ಲಿ ಸಾಧಿಸಬಹುದಾದ ಎತ್ತರದ ಬಗ್ಗೆ ಪಾಠಗಳಾಗಿರುತ್ತವೆಯೇ ಹೊರತು’ಅಪಯಶಸ್ಸು’ ಎಂಬ ಶಬ್ದ ಕಿವಿಗೆ ಬೀಳುವದನ್ನೂ ಅವರು ಸಹಿಸುವುದಿಲ್ಲ. ಅಂಥವರಿಗೆ ಸಾಧನೆ ಸುಲಭವಾಗಿರಬಹುದು. ಆದರೆ failure ಆಗಲು ಸಾಧ್ಯವೇಯಿಲ್ಲ ಎಂಬ ಗ್ಯಾರಂಟಿಯನ್ನು ಯಾರೂ ಕೊಡಲಾರರು. ಈ ಜಗತ್ತಿನಲ್ಲಿ ಯಾವಾಗ, ಯಾವ ಗಂಡಾಂತರ ಯಾವ ರೀತಿಯಲ್ಲಿ ಬರಬಹುದು ಎಂಬ ಅಂದಾಜು ಕಟ್ಟುವುದು ಸಾಧ್ಯವಾಗದ ಮಾತು. ಎಲ್ಲದಕ್ಕೂ ಸಿದ್ದ ವಿರಲೇಬೇಕಾದ ಅನಿವಾರ್ಯತೆ ಎಂಬುದೂ ಒಂದಿದೆ ಎಂಬುವುದನ್ನು ಈ ತಲೆಮಾರಿಗೆ ತಿಳಿಸಿಕೊಡಬೇಕಾಗಿದೆ.
ಹೆಚ್ಚು ಓದಿ ಹೆಚ್ಚು marks ಪಡೆದು ಉತ್ತಮು ಸಾಧನೆಮಾಡಿದ್ದು ಬದುಕನ್ನು ಶ್ರೀಮಂತವಾಗಿಸುತ್ತದೆ. ಎಂಬುದು ಎಷ್ಟು ನಿಜವೋ, ಬದುಕಿನ ಧಿಢೀರ್ ಸಮಸ್ಯೆಗಳನ್ನು ಎದುರಿಸುವ ತಯಾರಿ ಕೂಡ ಅಷ್ಟೇ ಅನಿವಾರ್ಯ ಎಂಬುವ ಅರಿವು ಇರಲೇಬೇಕು.
ದುಡ್ಡು ಹೇಗೆ ಕೆಲಸ ಮಾಡುತ್ತದೆ ಎಂಬುದರ ಜೊತೆ ಜೊತೆಗೆ ಕೇವಲ ದುಡ್ಡಿಗಾಗಿಯೇ ಕೆಲಸ ಮಾಡುವದು ಖಂಡಿತಕ್ಕೂ ಅಪಾಯಕಾರಿ ಎಂಬ ತಿಳಿವಳಿಕೆ ಅತಿ ಮುಖ್ಯ. ಎಂಬುದನ್ನು ಮರೆಯುವಷ್ಟು ಬದುಕಿನಲ್ಲಿ ಮೈ ಮರೆಯಬಾರದು.
ಯಾರಿಗೆ ಗೊತ್ತು. ಯಾವ ಹುತ್ತದಲ್ಲಿ ಯಾವ ಹಾವು ಭುಸುಗುಡುತ್ತಿದೆಯೋ!
(ಆಧಾರ: ಇಂಗ್ಲೀಷ- ಮೂಲ)

Leave a Reply