ಬಯಲು ಆಲಯದೊಳಗೊ ಆಲಯವು ಬಯಲೊಳಗೊ

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಮುಖ ಹೊತ್ತಿಗೆಯ ಬಹುತೇಕ ಓದುಗರಿಗೆ ಈಗಾಗಲೇ ಒಂದು ವಿಷಯ ಗಮನಕ್ಕೆ ಬಂದಿರಬಹುದು. ಈಗ 65 ರಿಂದ 75 ವಯಸ್ಸಿನವರೆಲ್ಲರ ಬಾಲ್ಯವೂ ಏಕರೂಪವಾಗಿತ್ತು ಎಂದು ಗೊತ್ತಿಲ್ಲದವರು ಆ ವಯಸ್ಸಿನವರ ಪೋಸ್ಟ್ಗಳನ್ನು ಹಾಗೂ ಕಮೆಂಟ್ಸ್ ಗಳನ್ನು ಗಮನಿಸಿದರೆ ಒಂದು ಸಾಮ್ಯ ಎದ್ದು ಕಾಣುತ್ತದೆ. ಎಲ್ಲರೂ ಆದಷ್ಟು ಮನೆಯಿಂದ ಹೊರಗೆ ಆಟವಾಡುತ್ತಿದ್ದುದು ಇದ್ದವರು, ಇರದವರ ನಡುವೆ ಯಾವುದೊಂದು ಅಂತರ ಕಾಣಿಸದೇ ಇರುವುದು, ಮತ್ತೆ ಆದಷ್ಟು ಪ್ರಕೃತಿಯಲ್ಲಿ ಲಭ್ಯವಿದ್ದ ವಸ್ತುಗಳೆಲ್ಲವನ್ನೂ ಆಟಕ್ಕೆ ಬಳಸುವುದು ಮಾಡಲು ಬೇಕಾದ ಸಾಮಾನುಗಳು ಪೇಟೆಯಲ್ಲಿಯ ದೊರೆಯಬಹುದೆಂಬ ಸಾಮಾನ್ಯ ಜ್ಞಾನಕ್ಕೂ ಹೊರತಾದ ಬಾಲ್ಯ, ಮಣ್ಣು, ಕಲ್ಲು, ದಂಟು, ಹುಣಿಸೆ ಬೇವಿನ ಬೀಜ, ಗಜುಗ ಒಡೆದ ಬಳೆಚೂರುಗಳು ಶೇಂಗಾ ಸಿಪ್ಪೆ, ಕಪ್ಪೆ ಚಿಪ್ಪು ಏನೆಲ್ಲಾ ಸಿಗುತ್ತಿತ್ತೋ ಎಲ್ಲವನ್ನು ಬಳಸಿದ ಜಾತಿ ನಮ್ಮದು ಏನೂ ಆಟಿಕೆಗಳ ಅವಶ್ಯಕತೆಯೇ ಇಲ್ಲದ ಆಟಗಳಿಗೂ ಕಡಿಮೆ ಇರಲಿಲ್ಲ. ಗಿಡ ಮರ ಹತ್ತಿ ಗಿಡ ಮಂಗನಾಟ ,ಇಳಿಬಿದ್ದ ಇಳಿಬಿದ್ದ ಟೊಂಗೆಗಳ ಹಿಡಿದು ಜೋಕಾಲಿ, ಬಳಸಿ ಒಗೆದ ಸೈಕಲ್ ಗಾಲಿಗೆ ಅಡ್ಡ ಕೋಲು ಜೋಡಿಸುವುದು, ಗಾಳಿಗೆ ಬಿದ್ದ ತೆಂಗಿನ ಗರಿಯ ಮೇಲೆ ಮಕ್ಕಳನ್ನು ಕೂಡಿಸಿ ಎಳೆಯುವುದು ಅಬ್ಬಾ! ಏನೆಲ್ಲಾ ಮೇಧಾವಿ ತಲೆಗಳು ಒಂದು ಕಲ್ಲಿನಾಟದಲ್ಲೂ ಹಲವಾರು ಬಗೆಯ ಆಟಗಳ ಶೋಧ ಬಿಳಿದಾಗಿ ಗುಂಡಗಿರುವ ಕಲ್ಲುಗಳನ್ನು ಕಡೆದು ಆಣಿಕಲ್ಲು ಆಡುವುದು ಅತಿ ಚಿಕ್ಕ ಕಲ್ಲುಗಳನ್ನು ಹುಲಿಮನೆ ಚೌಕಾಭಾರಕ್ಕೆ ಬಳಸುವುದು ಚಪ್ಪಟ್ಟೆ ಕಲ್ಲುಗಳಿಂದ ಕುಂಟಲಪಿ, ಆಕಾರವೇ ಇಲ್ಲದ ಕಲ್ಲುಗಳ ಸಂಗ್ರಹಿಸಿ ಒಂದರ ಮೇಲೊಂದು ಇಟ್ಟು ಬೇರೆ ಕಲ್ಲಿನಿಂದ ಹೊಡೆದುರುಳಿಸುವ ಲಗೋರಿ, ಒಂದೇ ಎರಡೇ ನೆನೆಸಿದರೆ ಆಡಿದ ನಮಗೆ ಅಚ್ಚರಿ ಆಗಬೇಕು ನಿಸರ್ಗದ ಮಧ್ಯದ ವಸ್ತುಗಳಿಂದ ಸಿಕ್ಕ ಆನಂದವು ಪಕ್ಕಾ ನೈಸರ್ಗಿಕ. ಏನಾದರೂ ಬಿದ್ದು ಗಾಯವಾದರೆ ವಿಳ್ಳೆದೆಲೆ ಅಂತ ಯಾವುದೋ ಔಷಧೀಯ ಗುಣವಿರುವ ಎಲೆಗಳನ್ನು ತಿಕ್ಕಿದರೆ ಗಾಯಕ್ಕೆ ಹಾಕಿದರೆ ಎರಡು ದಿನಗಳಲ್ಲಿಯೇ ಗಾಯ ಮಾಯ ಇನ್ನೂ ಆಟಿಗೆ ಸಾಮಾನುಗಳನ್ನು ಸಂಗ್ರಹಿಸುವ, ಕಳೆದುಕೊಳ್ಳುವ, ಜೋಪಾನವಾಗಿ ಮನೆಗೆ ತರುವ ಗೋಜೇ ಇಲ್ಲ ಎಲ್ಲಿ ಬೇಕೆಂದಲ್ಲಿ ಯಾವಾಗೆಂದರೆ ಆವಾಗ ಎಷ್ಟು ಬೇಕಾದಷ್ಟು ಲಭ್ಯ.. ಅನಂತವಾಗಿ ಅನಾಯಾಸವಾಗಿ ಅಕ್ಷಯವಾಗಿ ದೊರೆಯುತ್ತಿದ್ದ ಸರಕುಗಳೇ ಎಲ್ಲವೂ. ಬಹುತೇಕ ಆಟಗಳು ಔಟ್ ಡೋರ್ ಗೇಮ್ಸ್ ಗಳೆ ಆಗಿನ್ನೂ ನರ್ಸರಿ ಮಾಂಟೇಸರಿ, ಡೇ ಕೇರ್ ಗಳಂತ ಮಕ್ಕಳ ಜೈಲುಗಳು ಹುಟ್ಟಿರಲಿಲ್ಲ 6 ವರ್ಷಗಳಿಗೆ ಶಾಲಾ ಜೀವನ ಪ್ರಾರಂಭ ಆದರೆ ಸುಲಲಿತವಾಗಿ ನಡೆಯಲು ಬಂತೋ, ಯಾವ ಮಗುವೂ ಮನೆಯಲ್ಲಿ ಉಳಿಯುತ್ತಿರಲಿಲ್ಲ ಅಣ್ಣನೋ ಅಕ್ಕನೋ ಹೊರಟರೆ ಗಾಳಿಪಟದ ಬಾಲಂಗೋಚಿಯಾಗಿ ರಸ್ತೆಗೆ ಬಂದೆ ಬಿಡುವುದು. ಅಂತ ಮಕ್ಕಳು ಆಡಲು ಹಠ ಮಾಡಿದರೆ ಒಂದು ವಿಶೇಷ ಹೆಸರು ಅವಕ್ಕೆ ‘ಎಣ್ಣೆ ಗುಂಡಿ’. ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬುದರ ಬಳಕೆ ಆಗಲೇ ಬಂದಿರಬೇಕು, ದೊಡ್ಡ ಹುಡುಗರು ಪರಸ್ಪರ ಕಣ್ಣುಹೊಡೆದು ಹುಡುಗನ ಆಟ ಲೆಕ್ಕಕ್ಕಿಲ್ಲ ಎಂಬ ನಿರ್ಣಯಕ್ಕೆ ಬರುತ್ತಿದ್ದರು. ಆಯಿತು ನಂಟರು ಉಂಡರೂ ಅಕ್ಕಿಯೂ ಉಳಿಯಿತು. ಎಂಬ ಲೆಕ್ಕ ಯಾವ ನಿಯಮಗಳಿಲ್ಲದ ಸ್ಪರ್ಧೆಗಳಿಂದ ಪ್ರಶಸ್ತಿ ಅಷ್ಟೇಕೆ ಯಾವ ಬಿಗುಮಾನವೂ ಇಲ್ಲದ, ರೊಕ್ಕ ಅಂತಸ್ತುಗಳು ಅಡ್ಡ ಬರದ ಆಟಕ್ಕಾಗಿ ಆಟ, ಶುದ್ಧ ಮನರಂಜನೆಗಾಗಿ ಆಟ, ದೇಹದ ಆರೋಗ್ಯಕ್ಕಾಗಿ ಆಟ, ಸಮಾಜದ ಭಾಗವಾಗಿ ಮಕ್ಕಳನ್ನು ಬೆಳೆಸುವ ಆಟಗಳಿಗ ನೋಡಲೂ ಸಿಗುವುದಿಲ್ಲ.
ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವ ಹಾದಿಯಲ್ಲಿ ಒಂದು ಜೈನ್ ಫರ್ಮ್ ರೆಸೋರ್ಟ್ ಅಂತಿದೆ ಒಂದು ದಿನದ ವಾಸ್ತವ್ಯಕ್ಕೆ ಒಬ್ಬರಿಗೆ ರೂ 3,000 ಅಲ್ಲಿ ವೆಲ್ಕಮ್ ಡ್ರಿಂಕ್ ಇಂಗು ಮಜ್ಜಿಗೆ ರೂಮ್ ಹುಲ್ಲು ಹೊದಿಕೆಯ ಗುಡಿಸಲು ..ಬೆಳಕು ಲಾಟೀನಿನದು, ಒಂದು ರೌಂಡ್ ಚಕ್ಕಡಿ ಸವಾರಿಗೆ 25/- ಅಲ್ಲಲ್ಲಿ ಬಯಲುಗಳಲ್ಲಿ ಕಲ್ಲು ಹಾಗಸುಗಳು, ಮೇಲೆ ತೆಂಗಿನ ಗರಿಗಳ ಥಾಟು.. ನಡುನಡುವೆ ಬಾಯಾಡಿಸಲು ಕುರುತಿನಸುಗಳು, ಮಣ್ಣಿನ ಗಡಿಗೆಯಲ್ಲಿ ಅಂತಿಂತ ಕುರುತಿನಸುಗಳು… ರಾತ್ರಿ ಜಾನಪದ ಕಾರ್ಯಕ್ರಮ, ಕೋಲಾಟ, ಮುಂತಾದ ಜಾತಕ / ಭವಿಷ್ಯ ಹೇಳುವವರು ಮದರಂಗಿ ಬರೆಯುವವರು, ಮೂಗು ಕಿವಿ ಚುಚ್ಚುವವರು ಎಲ್ಲರೂ.. ಇದ್ದುದ್ದನ್ನು ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬ ಮಾತು ನೂರಕ್ಕೆ ನೂರು ನಿಜ, ಸುಗ್ರಾಸ ಉನ್ನುವಷ್ಟು ಗಳಿಸಿ ರಸ್ತೆ ತಿಂಡಿಗಳನ್ನು ತಿನ್ನುವುದು, ಮನೆಯಲ್ಲಿ ಎರಡೆರಡು ಕಾರುಗಳಿದ್ದೂ ರೂಮಿನಲ್ಲಿ gadgets ಗಳೊಂದಿಗೆ ಬಲಿಯಾಗುವುದು ,4/ 5 bedrooms ಗಳ ಮನೆಯನ್ನು ಕಟ್ಟಿಕೊಂಡು ಅವುಗಳು ಹೆಚ್ಚಾಗಿ maids ಗಳಿಗೆ ಬಳಕೆಯಾಗುವ ಅನಿವಾರ್ಯತೆ, ಕ್ರಿಕೆಟ್ ಫುಟ್ಬಾಲ್ ನಂಥ ಆಟಗಳನ್ನು ರಿಮೋಟ್ ಆಧಾರಿತ ಕಂಪ್ಯೂಟರ ಗೇಮ್ಗ ಳನ್ನಾಗಿ ಮಾಡಿರುವುದು ನೋಡಿದಾಗ ಮೇಲಿಂದ ಮೇಲೆ ಜಾರಿಬಿದ್ದು ದವಾಖಾನೆಗೆ ಹೋಗುವುದು ಸರಿಯಾಗಿ ಏನನ್ನು ತಿನ್ನಲಾಗದು ಎಂಬ ಪರಿಸ್ಥಿತಿ ಬರುವುದರ ಕಾರಣ ಸ್ಪಷ್ಟ ಚಿಕ್ಕಾಸು ಖರ್ಚಾಗದ ಹೆಚ್ಚು ಕಾಳಜಿ ವಹಿಸುವ ಕಾರಣವಿಲ್ಲದ, ಸಾಮಾಜಿಕ ಜೀವನದ ಭದ್ರ ಬುನಾದಿಯಾಗಿದೆ ಮಗುವನ್ನು ತರಬೇತಿಗೊಳಿಸುತ್ತಿದ್ದ ಬಡವ-ಬಲ್ಲಿದ ಬೇದ ತಲೆಗೆ ಬಿಲ್ಕುಲ್ ತಿಳಿಯದ ಪರಿಶುದ್ಧ ನಿಷ್ಕಳಂಕ ಆನಂದಮಯ ನಿಜವಾದ ಅರ್ಥದಲ್ಲಿ ಮಗು ಮನಸ್ಸಿನ ಅಂದಿನ ಜೀವನದಿಂದ ಪಡೆದ ಸಂತೋಷ ಈಗಿನ ಮಕ್ಕಳಿಗೆ ಸಿಗದ ಬಗ್ಗೆ ನನಗೆ ಯಾವಾಗಲೂ ಒಂದು ಬಗೆಯ ಕನಿಕರ….

Leave a Reply