
ಬಾಳಿಗೊಂದು ನಂಬಿಕೆ
DVG$0.97 $0.87
Product details
Book Format | Printbook |
---|---|
Author | DVG |
Category | Articles |
Language | Kannada |
Publisher | Sahitya Prakashana |
ಬಾಳಿಗೊಂದು ನಂಬಿಕೆ:
ನನ್ನ ಅವರ ಸ್ವಂತ ನಂಬಿಕೆಯನ್ನು ಒಂದು ಪ್ರಬಂಧದಲ್ಲಿ ಸಮಗ್ರವಾಗಿಯೂ ಕಾರಣ ವಿವರಣಿಯೊಡನೆಯೂ ರೂಪಗೊಳಿಸಬೇಕೆಂಬ ಆಲೋಚನಿ ಬಹುದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆ ಕೆಲಸವನ್ನು ಈ ಸಣ್ಣ ಪುಸ್ತಕದಲ್ಲಿ ತಕ್ಕಮಟ್ಟಿಗೆ ಪ್ರಯತ್ನಿಸಿದೆ.
ನಮ್ಮ ಬದುಕು ಚೆನ್ನಾಗಿ ಸಾಗಿ, ಸಾರ್ಥಕವಾಗಬೇಕಾದರೆ ನಮಗೆ ಒಂದು ಒಳ್ಳೆಯ ಗುರಿಯ ತಿಳಿವಳಿಕೆಯೂ, ಆ ಗುರಿಯನ್ನು ಮುಟ್ಟಿಸಬಲ್ಲ ದಾರಿಯ ತಿಳಿವಳಿಕೆಯೂ ಇರಬೇಕು. ಅಂಥ ಜೀವನಯಾತ್ರೆಯ ನಕಾಶೆಯೊಂದನ್ನು ಗುರುತು ಮಾಡಲು ಈ ಲೇಖನದಲ್ಲಿ ಯತ್ನಿಸಿದೆ.
ಅದು ಸುಲಭಸಾಧ್ಯವಾದ ಯೋಚನೆಯಲ್ಲ; ನಮ್ಮ ಪುರಾತನ ಮಹನೀಯರು ನಮಗೆ ತಕ್ಕ ಗುರಿಗೊತ್ತುಗಳನ್ನು ತಿಳಿಸಿಕೊಟ್ಟಿದ್ದಾರೆ ಎಂಬುದು ದಿಟ. ಆದರೆ ಈ ಹೊತ್ತು ಲೋಕ ಹೇಗಿದೆ? ಹತ್ತಾರು ಹೊಸಹೊಸ ಶಾಸ್ತ್ರಗಳೂ, ಹೊಸಹೊಸ ಮತಗಳೂ ತಲೆಯೆತ್ತಿ, ಹತ್ತಾರು ದಿಕ್ಕುಗಳಿಗೆ ನಮ್ಮ ಬುದ್ಧಿ ಮನಸ್ಸುಗಳನ್ನು ಸೆಳೆದಾಡಿ, ಹಳೆಯ ನಿಶ್ಚಯವನ್ನು ಹೋಗಲಾಡಿಸಿ, ಹೊಸ ಸಂದೇಹ ಸಂಕ್ಷೋಭೆಗಳನ್ನು ಹರಡಿವೆ. ಈ ಹೊಸ ವಿಜ್ಞಾನ ವಿಕ್ಷಿಪ್ತವಾದ ವಾತಾವರಣದಲ್ಲಿ ನಾವು ನಮ್ಮ ಜೀವನ ಸಮಸ್ಯೆಗಳನ್ನು ಪುನಾರ್ವೆಚಾರದಿಂದ ವಿಮರ್ಶೆ ಮಾಡಬೇಕಾಗಿದೆ.
ಇದು ಪಂಡಿತರಾಗಿ ಬರೆದ ಗ್ರಂಥವಲ್ಲ. ದೇಶದಲ್ಲಿ ಬಹುಮಂದಿಯಾಗಿ ಅತಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆದ ಬರೆವಣಿಗೆ ಇದು. ಇದನ್ನೋದುವವರಿಗೆ ಅಲ್ಲಲ್ಲಿ ಪ್ರಶ್ನೆಗಳೂ ಸಂದೇಹಗಳೂ ತೋರಬಹುದು. ಅಂಥವರು ಈ ಪುಸ್ತಕವನ್ನು ಕಡೆಯವರೆಗೂ ಓದಿದ ಬಳಿಕ ವಿಮರ್ಶೆಗೆ ಹೊರಾಡಬಹುದೆಂದು ಲೇಖಕನ ವಿಜ್ಞಾಪನೆ.
Customers also liked...
-
V K Gokak
$0.36$0.22 -
K.S. Narayanacharya
$1.81$1.09 -
N. Chinnaswamy Sosale
$1.21$0.73 -
Purushottama Bilimale
$2.42$1.45 -
Krishna Katti
$1.93$1.16 -
Sarjoo Katkar
$0.73$0.44