Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾಮ್ರೇಡ್ ಡಾಂಗೆಯವರ ಭಾಷಣಗಳು

Shreepad Amrut Dange
$0.98

Product details

Category

Articles

Author

Shreepad Amrut Dange

Publisher

Nava Karnataka

Book Format

Ebook

Pages

112

Language

Kannada

Year Published

2021

Translator

Chandrakanth Pookale

ಕಾಮ್ರೇಡ್ ಡಾಂಗೆಯವರ ಭಾಷಣಗಳು

ಕಾಮ್ರೇಡ್ ಶ್ರೀಪಾದ ಅಮೃತ ಡಾಂಗೆಯವರ ಆಯ್ದ ಭಾಷಣಗಳ ಸಂಕಲನವಿದು. “ಲೋಕಮಾನ್ಯ ತಿಲಕರ ನಂತರ ಭಾರತದ ರಾಜಕಾರಣದ ಮೇಲೆ ತಮ್ಮ ಛಾಪು ಬೀರುವ  ನಾಯಕ ಕಾ|| ಡಾಂಗೆ ಬಿ‍ಟ್ಟರೆ ಬೇರೊಬ್ಬರಿಲ್ಲ”  ಎಂದು ಮಾಡಖೋಲ್ಕರ್ ರಂತಹ ಅನುಭವಿ ಪತ್ರಕರ್ತರು ಮತ್ತು ಶ್ರೇಷ್ಠ ಸಾಹಿತಿಗಳು ಅವರ ಬಗ್ಗೆ ಪ್ರಶಂಸಿದ್ದಾರೆ. “ಭಾಷಣದಿಂದ ನಾಯಕತ್ವ ಮತ್ತು ನಾಯಕತ್ವದಿಂದ ಭಾಷಣ. ಇವುಗಳ ಸಮತೋಲನವನ್ನು  ಸಾಧಿಸಿ ಕಾ||ಡಾಂಗೆಯಂತಹ ಸವ್ಯ ಸಾಚಿ ನಾಯಕ ಭಾರತದಲ್ಲಿ ಸಿಗುವುದು ಅಪರೂಪ” ಇವರು ತಮ್ಮ ೧೬ನೇ ವಯಸ್ಸಿನಿಂದ ಆರಂಭಿಸಿ ಅಕ್ಷರಶಃ  ಸಾವಿರಾರು ಸಭೆ-ಸಮ್ಮೇಳನ ಮೈದಾನಗಳಲ್ಲಿ ಮಾಡಿದ ಭಾಷಣಗಳು ಅಪೂರ್ವವಾದವು. ರಾಜಕಾರಣ, ಕಾರ್ಮಿಕ ಚಳುವಳಿ, ಅರ್ಥಶಾಸ್ತ್ರ ಚರಿತ್ರೆ, ಸಾಹಿತ್ಯ, ತತ್ವಜ್ಞಾನ ಯಾವುದೇ ವಿಷಯವೂ ಇವರಿಂದ ದೂರವಾಗಿರಲಿಲ್ಲ ಅವರ ವಿಚಾರಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಮುಂದೆ ಸಿಪಿಐ ಪಕ್ಷವು ಸಿಪಿಎಂ ಎಂದು ವಿಭಜನೆಯಾದ ನಂತರವೂ ಅವರು 1978ರವರೆಗೆ ಸಿಪಿಐ ಪಕ್ಷದ ಸೂತ್ರ ಹಿಡಿದಿದ್ದರು. ಭಾಷಾವಾರು ಪ್ರಾಂತ್ಯಗಳ ವಿಭಜನೆ ಸಮಯದಲ್ಲೂ ಡಾಂಗೆ ಅವರು ಮಹಾರಾಷ್ಟ್ರ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.  ಡಾಂಗೆ ಅವರ ಭಾಷಣಗಳು ಕಾರ್ಮಿಕರ ಮೇಲೆ ತುಂಬಾ ಪ್ರಭಾವ ಬೀರುತ್ತಿದ್ದು, ದೇಶದಲ್ಲಿ ಕಮ್ಯೂನಿಸ್ಟ್ ಚಳವಳಿ ತೀವ್ರಗೊಂಡು ಜನಮನದಲ್ಲಿ ಪಕ್ಷದ ಧ್ಯೇಯ-ಧೋರಣೆಗಳು ನೆಲೆಗೊಳ್ಳುವಂತೆ ಮಾಡಿದ್ದನ್ನು ಮರೆಯುವಂತಿಲ್ಲ. ಅವರ ಏಳು ಭಾಷಣಗಳನ್ನು ಇಲ್ಲಿ ಭಾಷಾಂತರಿಸಲಾಗಿದೆ. 22 ಮೇ 1991 ರಂದು ಕಾಮ್ರೇಡ್ ಡಾಂಗೆ ಅವರು ನಿಧನರಾದರು.