ಒಬ್ಬ ಹಿರಿಯ ಕವಿಯ ಬಗ್ಗೆ ,ಅವರ ಕವನಗಳ ಬಗ್ಗೆ ಇಂದಿನ ಜನಾಂಗಕ್ಕೆ ತಿಳಿಸುವದು ಒಂದು ಪುಣ್ಯದ ಕೆಲಸ. ವೇಗವಾಗಿ ಓಡುತ್ತಿರುವ ಇಂದಿನ ಯುವಜನತೆಗೆ ಅತ್ಯಂತ ಕಡಿಮೆ ಸಮಯದಲ್ಲಿ ಎಲ್ಲವು ತಿಳಿಯಬೇಕು ಅನ್ನೋ ಮನೋಭಾವ. ಆ ಕೆಲಸವನ್ನ ಅತ್ಯಂತ ಮನಸ್ಸಿನಿಂದ ಮಾಡುತ್ತಿರುವವರು ಲೇಖಕ ಡುಂಡಿರಾಜರು ಮತ್ತು ಈ ಪುಸ್ತಕದ ಸಂಪಾದಕರು. ಸಮಾಜದ ಓರೆ-ಕೋರೆಗಳನ್ನು ಚುಟುಕಿನಲ್ಲಿ ಇಳಿಸಿ ತಿಳಿಸುವುದು ಸರಳವಾದ ಕೆಲಸವಲ್ಲ. ಬರೆಯುವದು ಚುಟುಕುರೂಪದಲ್ಲಾದರೂ ಅದಕ್ಕೆಗಹನವಾದ ಅಧ್ಯಯನ ಬೇಕು. ಡುಂಡಿರಾಜರಿಗೆ ಗಹನವಾಗಿ ಓದುವ ಹವ್ಯಾಸವು ಇದೆ ಮತ್ತು ಅವರು ಬೆಳೆದಿರುವಂತಹ ವಾತಾವರಣಕೂಡ ಅಂತಹುದೆ ಉಡುಪಿ ಜಿಲ್ಲೆಯ ಹಟ್ಟಿಕುದ್ರಿಯಲ್ಲಿ ಜನಿಸಿದ ಇವರು , ಅಲ್ಲಿಯೆ 16 ವರುಷ ಕಳೆದಿದ್ದಾರೆ. ರಾಮಾಯಣ, ಮಹಾಭಾರತ , ಜಾನಪದ ಹಾಡುಗಳು ಮತ್ತು ದೇವಸ್ಥಾನಗಳಲ್ಲಿ ಮಾಡುವ ಭಜನೆಗಳು ಇವೆಲ್ಲವೂ ಇವರು ಆಸ್ತಿಯೆಂದೆ ಹೇಳಬಹುದು. ಅದೇ ಅವರ ಸಾಹಿತ್ಯದಲ್ಲಿ ಇಳಿದಿದೆ. ಇವರು ಅನೇಕ ನಾಟಕ, ಕವನಗಳನ್ನು ಬರೆದಿದ್ದರೂ ಜನರಿವರನ್ನು ಗುರುತಿಸುವುದು ‘ಹನಿಗವನಗಳ ಸಾಮ್ರಾಟರೆಂದೇʼ.

ಡುಂಡಿರಾಜರ ಕವನಗಳಿಗೆ ಸ್ಪೂರ್ತಿಯೆಂದರೆ ಅವರ ಧರ್ಮಪತ್ನಿ. ಪತಿಯ ಎಲ್ಲ ವಿಷಯದಲ್ಲೂ ಸಾಥ್ ನೀಡಿದ್ದಾರೆ. ಡುಂಡಿರಾಜರ ವೃತ್ತಿ ಕಾರ್ಪೋರೇಶನ್ ಬ್ಯಾಂಕಲ್ಲಿ ಉಪ ಮಹಾಪ್ರಬಂಧಕಾರರು, ಪ್ರವೃತ್ತಿಯಲ್ಲಿ ಸಾಹಿತ್ಯದ ಸವಿಯನ್ನು ಉಣಬಡಿಸೋದು. ಇಲ್ಲಿಯವರೆಗು ನಾಲ್ಕು ಸಾವಿರಕ್ಕೂ ಹೆಚ್ಚು ಹನಿಗವನಳನ್ನು ಬರೆದುದಲ್ಲದೆ ಅನೇಕ ಅಂಥಾಲಜಿಗಳಲ್ಲಿ, ಸಂಕಲನ-ಅಂಕಣಗಳಲ್ಲಿ ಇವರ ಹನಿಗವನಗಳನ್ನು ಕಾಣಬಹುದು. ಲೇಖಕರು ಮುದ್ದಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Additional information

Editor

H.S. Sathyanarayana, N. Ramanath

Publisher

Book Format

Ebook

Language

Kannada

Pages

364

Year Published

2020

Category

Reviews

There are no reviews yet.

Only logged in customers who have purchased this product may leave a review.