Sale!

ಗಾಂಧೀಗೀತ ( Printbook )

N.K Kulkarni
$1.85

‘ಗಾಂಧಿಗೀತ’ಗಳು ಪ್ರಸಾರವಾಗುವಾಗ ನಾನು ಧಾರವಾಡ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಗಾಂಧಿಗೀತದ ಯಜ್ಞದ ಸಂಭ್ರಮದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಪ್ರತಿವಾರ ಎನ್ಕೆ ಅವರು ಬರೆದ ಕೊಡುತ್ತಿದ್ದ ಹಾಡು, ಈಗ ಬಂತು… ಬಂತು… ಎಂಬ ಸುದ್ದಿ… ಅದನ್ನು ಅನುರಾಧಾ ಹಾಡುವುದು… ಎಲ್ಲ ಇನ್ನೂ ಹಸಿರಾಗಿದೆ. ಆಗ ತುಂಬ ಜನಪ್ರಿಯ ಕಾರ್ಯಕ್ರಮ ‘ಗಾಂಧಿಗೀತ’.

  • Book Format: Printbook
  • Author: N.K Kulkarni
  • Category: Articles
  • Language: Kannada
  • Publisher: Sahitya Prakashana

ಉಭಯ ಕುಶಲೋಪರಿಯಲ್ಲಿ ನಾನು ನಂದಕ್ಕಳಾಗಿ, ಎನ್ಕೆ ಚಂದಣ್ಣನಾಗಿ ಭಾಗವಹಿಸಿ ಶ್ರೋತೃಗಳ ಪಾತ್ರಗಳಿಗೆ ಉತ್ತರಿಸುತ್ತಿದ್ದೆವು. ಪ್ರತಿವಾರ ನೂರಾರು ಪಾತ್ರಗಳ ‘ಗಾಂಧಿಗೀತ’ ಮೆಚ್ಚಿ ಬರುತ್ತಿದ್ದೆವು. ಇಂತಹ ಅತಿ ಮೆಚ್ಚುಗೆಗೆ, ಗೌರವಕ್ಕೆ ಅರ್ಹರು ನಮ್ಮ ಎನ್ಕೆ ಆಗಿದ್ದರು. ನನ್ನದು ಇಂಗ್ಲಿಷ್ ಮೀಡಿಯಂ ಕಲಿಕೆಯಾಗಿದ್ದಾರಿಂದ ನನಗೆ ನಿಜವಾದ ಕನ್ನಡ ಕಲಿಸಿದವರು ಎನ್ಕೆ ಅವರೇ. ನಾನು ಹಳೆಗನ್ನಡದ ನಾಟಕಗಳನ್ನು ಪ್ರಸ್ತುತಪಡಿಸುವಷ್ಟರ ಮಟ್ಟಿಗೆ ನನಗೆ ತರಬೇತಿ ನೀಡಿದರು. ಬೆಂಗಳೂರಿನಲ್ಲೂ ಕೂಡ ಪತ್ರೋತ್ತರದಲ್ಲಿ ನಾನು ‘ಸುಹಾಸಿನಿ’ಯಾಗಿ ಎನ್ಕೆ ‘ವಿನೋದ’ರಾಗಿ ಕಾರ್ಯಕ್ರಮ ನಡೆಸುತ್ತಿದ್ದೆವು. ನನ್ನನ್ನು ನಾಟಕ ಬರೆಯಲು ಪ್ರೇರೇಪಿಸಿದ್ದಲ್ಲದೆ, ನನಗೆ ‘ಯಾಮಿನಿ’ ಎಂಬ ಕಾವ್ಯನಾಮವನ್ನು ನೀಡಿದವರು ಎನ್ಕೆ ಕಾಕಾ ಅವರೇ. ‘ಪ್ರಾಣ ತುಂಬಿದ ಪಾತ್ರ’ ನಾಟಕ ಮಾಡಿದಾಗ ಮೊದಲ ಸಾರಿ ‘ಯಾಮಿನಿ’ ಎಂದು ಘೋಷಿಸಿದರು. ‘ಕಸಿ ಹೃದಯ ಕಣ್ತೆರೆದಿತ್ತು’. ನಾಟಕ ರಚನೆ ಎನ್ಕೆ ಅವರದಾದರೆ, ನೆರವು ‘ಯಾಮಿನಿ’ ಎಂದಿತ್ತು. ನಂತರ ನಾನು ‘ಯಾಮಿನಿ’ ಎಂದು ಪ್ರಸಿದ್ಧವಾಗುವಲ್ಲಿ ಎನ್ಕೆ ಅವರ ಆಶೀರ್ವಾದ ಬಹಳಷ್ಟಿದೆ. ಇಂತಹ ಗುರು ಎನ್ಕೆ ಅವರ “ಗಾಂಧೀಗೀತ”ವು ನನ್ನ ಆಕಾಶವಾಣಿ ಸೋದರ ಡಾ. ಶಶಿಧರ ನರೇಂದ್ರರ ಮುಖಾಂತರ ಪ್ರಕಟವಾಗುತ್ತಿರುವುದು ಸಂತಸದ ಸಂಗತಿ. ಆ ಎನ್ಕೆ ಗುರುವಿಗೆ ನನ್ನ ಹೃದಯಪೂರ್ವಕ ನಮನಗಳು.

Reviews

There are no reviews yet.

Only logged in customers who have purchased this product may leave a review.