Your Cart

Need help? Call +91 9535015489

📖 Print books shipping available only in India. ✈ Flat rate shipping

ಗತ ಗತಿ

Premshekar
$1.20

Product details

Book Format

Printbook

Author

Premshekar

Category

Articles

Language

Kannada

Publisher

Sahitya Prakashana

ಅವರು ತಮ್ಮ ರಾಕೆಟ್ ಗಳಲ್ಲಿ ಇಲ್ಲಿಗೆ ನಮ್ಮ ಭೂಮಿಗೆ ಬರ್ತಾ ಇದ್ರು. ನಮ್ಮ ನೀಲ್ ಆರ್ಮ್ ಸ್ಟ್ರಾಂಗ್, ಆಲ್ಡ್ರಿನ್‌ ಚಂದ್ರಲೋಕಕ್ಕೆ ಹೋಗಿದ್ರಲ್ಲಾ ಹಂಗೆ. ಆ ಜನ ಭೂಮಿ ಮೇಲಿನ ಅನಾಗರಿಕರಿಗೆ ತಂತ್ರಜ್ಞಾನವನ್ನು ಹೇಳಿಕೊಟ್ರು. ಅವರ ರಾಕೆಟ್ಟು, ಅವರ ಹತ್ರ ಇದ್ದ ಹಲವಾರು ವೈಜ್ಞಾನಿಕ ಉಪಕರಣಗಳು, ಅವುಗಳಿಂದ ಅವರು ಮಾಡ್ತಾ ಇದ್ದ ಕೆಲಸಗಳು ಎಲ್ಲಾನೂ ನಮ್ಮ ಪೂರ್ವಜರಿಗೆ ಅದ್ಭುತವಾಗಿ ಕಂಡಿದೆ. ಹೀಗಾಗಿ ಅವರನ್ನ ದೇವರು ಅಂತ ಪೂಜೆ ಮಾಡೋಕೆ ಶುರು ಮಾಡಿರಬೋದು. ಈ ವಾದವನ್ನು ಭಾಳಾ ದೊಡ್ಡದಾಗಿ ಮಂಡಿಸಿ ಸುದ್ದಿ ಮಾಡಿದ್ದು ಎರಿಕ್ ವಾನ್ ಡ್ಯಾನಿಕೆನ್ ಅನ್ನೋ ಸ್ವಿಸ್ ವಿದ್ವಾಂಸ, ತನ್ನ ‘ಚಾರಿಯಟ್ಸ್ ಆಫ್ ದ ಗಾಡ್ಸ್?’ ಅನ್ನೋ ಕೃತಿನಲ್ಲಿ. ಆದರೆ ಅವನ ಮಾತುಗಳನ್ನ ಸಂಪೂರ್ಣವಾಗಿ ಒಪ್ಪೋಕಾಗಲ್ಲ. ಯಾಕಂದ್ರೆ ಅವನು ಆ ಪುಸ್ತಕದಲ್ಲಿ ಎಲ್ಲಾನೂ ತುಂಬಾ ಉತ್ಪ್ರೇಕ್ಷೆ ಮಾಡಿ ಹೇಳಿದ್ದಾನೆ, ಹಲವಾರು ಅಸತ್ಯಗಳನ್ನೂ ನಿಜದ ತಲೆ ಮೇಲೆ ಹೊಡೆದ ಹಾಗೆ ಹೇಳಿದ್ದಾನೆ. ಅಷ್ಟೇ ಅಲ್ಲ, ತನ್ನ ‘ಗೋಲ್ಡ್ ಆಫ್ ದ ಗಾಡ್ಸ್’ ಅನ್ನೋ ಪುಸ್ತಕದಲ್ಲಿ ಸುಳ್ಳುಗಳನ್ನ, ಉದ್ದೇಶಪೂರ್ವಕ ಕಲ್ಪನೆಗಳನ್ನ ರಾಜಾರೋಷವಾಗಿ ಹೇಳ್ತಾನೆ. ಹೀಗಾಗಿ ಅವನನ್ನ, ಅವನ ಮಾತುಗಳನ್ನ ಈಗ ಯಾರು ಸೀರಿಯಸ್ ಆಗಿ ತಗೋಳ್ಳೋದಿಲ್ಲ. ಆದರೆ ಅನಂತರ ಬಂದ ಚಾರ್ಲಸ್ ಬರ್ಲಿಟ್ಜ್, ಗ್ರಹಾಂ ಹ್ಯಾನ್ ಕಾಕ್, ಝಕಾರಿಯ ಸಿಚಿನ್ ಇನ್ನೂ ಹಲವಾರು ವಿದ್ವಾಂಸರು ಈ ವಿಷಯಗಳನ್ನ ಸತ್ಯಕ್ಕೆ ಅಪಚಾರ ಆಗದ ಹಾಗೆ ಹೇಳ್ತಾರೆ. ಅವರ ಮಾತುಗಳನ್ನ ನಂಬಬೋದು.”