`ಗೆಲ್ಲುವ ದಾರಿಯೊಂದು ತಿಳಿದುಬಿಟ್ಟಿದ್ದರೆ ಈ ಬದುಕಿನಲ್ಲಿ ನನ್ನನ್ನು ಹಿಡಿಯುವವರೇ ಇರುತ್ತಿರಲಿಲ್ಲ…’ ಹೀಗೆಂದು ಹೇಳುತ್ತಿರುವ ಗೆಳೆಯ – ಗೆಳತಿಯ ಮಾತಿನಲ್ಲಿ ಅಥವಾ ನಮ್ಮದೇ ಯೋಚನೆಯಲ್ಲಿ ಗೆಲ್ಲುವ ಗುಟ್ಟು ತಿಳಿಯದೇ ಹೋಯಿತಲ್ಲ ಎನ್ನುವ ವ್ಯಥೆ ಇರುತ್ತದೆ.
ಹಾಗಿದ್ದರೆ ಈ ಗೆಲುವಿನ ಗುಟ್ಟೇನು?
ಈ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ನಾವು ನಮ್ಮ ಬದುಕಿನ ಹೆಚ್ಚಿನ ಅವಧಿಯನ್ನು ಕಳೆದುಬಿಟ್ಟಿರುತ್ತೇವೆ. ಯಾಕೆಂದರೆ ನಮಗೆ ಗೆಲುವೆಂದರೇನೆಂದು ಗೊತ್ತಿರುತ್ತದೆಯೇ ಹೊರತು, ಆ ಗೆಲುವನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ ಎನ್ನುವ ಸಂಗತಿ ಗೊತ್ತಿರುವುದಿಲ್ಲ. ಹಾಗಿದ್ದರೆ ಈ ಸಂಗತಿಗಳೇನು? ಇದನ್ನು ಹುಡುಕುವ ಪ್ರಯತ್ನದಲ್ಲೇ ನಾನೊಂದಿಷ್ಟು ಬರಹಗಳನ್ನು ಬರೆಯಲಾರಂಭಿಸಿದೆ. ಗೆಲುವು ಏನನ್ನು ಬೇಡುತ್ತದೆ, ಗೆಲುವನ್ನು ಸುಲಭವಾಗಿಸಿಕೊಳ್ಳಲು ನಾವೆಷ್ಟು ಬದಲಾಗಬೇಕು, ಒಮ್ಮೆ ನಮ್ಮನ್ನು ಸಮೀಪಿಸಿದ ಗೆಲುವನ್ನು ನಮ್ಮ ಬಳಿಯೇ ಇರಿಸಿಕೊಳ್ಳುವುದು ಹೇಗೆ, ಒಂದು ಸೋಲು ಮೂಲೆ ಸೇರಿಸಿದ ಬದುಕನ್ನು ಹೇಗೆ ಎತ್ತರಕ್ಕೆ ಕರೆದೊಯ್ಯಬೇಕು… ಹೀಗೆ ಬದುಕಿನ ಬಹುದೊಡ್ಡ ಗೆಲುವಿಗೆ ಕಾರಣವಾಗುವ ಹಲವು ವಿಷಯಗಳ ಕುರಿತು ಲೇಖನ ಬರೆಯಲಾರಂಭಿಸಿದೆ. ಈ ಲೇಖನಗಳ ಒಟ್ಟು ಮೊತ್ತ ಗೆಲುವಿನ ಗುಟ್ಟನ್ನು ಯಾರಿಗೇ ಆದರೂ ತಿಳಿಸಿಕೊಡಬೇಕು ಎನ್ನುವುದೂ ನನ್ನ ಉದ್ದೇಶವಾಗಿತ್ತು. ಅದು ಪೂರ್ತಿಯಾಗಿ ಈಡೇರಿಲ್ಲ ಎನ್ನುವ ಅರಿವಿದೆ. ಯಾಕೆಂದರೆ ಈ ಗುಟ್ಟುಗಳನ್ನೆಲ್ಲ ಅಷ್ಟು ಸುಲಭಕ್ಕೆ ಯಾರಿಂದಲೂ ರಟ್ಟು ಮಾಡಲಿಕ್ಕಾಗುವುದಿಲ್ಲ. ಆದರೂ ಈವರೆಗೆ `ನಿಮ್ಮೆಲ್ಲರ ಮಾನಸ’ ಪತ್ರಿಕೆಯಲ್ಲಿ ಪ್ರಕಟವಾದ ಈ ವಿಷಯದ ಕುರಿತಾದ ಕೆಲವೇ ಕೆಲವು ಲೇಖನಗಳನ್ನು ಗಮನಿಸಿದರೆ, ಇದನ್ನೊಂದು ಪುಸ್ತಕದ ರೂಪದಲ್ಲಿ ಹೊರತಂದರೆ ಹೇಗೆ ಎಂದು ಅನ್ನಿಸಿತು. ಅದರಿಂದಾಗಿಯೇ `ಗೆಲುವೇ… ನಿನ್ನ ಗುಟ್ಟೇನು?!’ ಎನ್ನುವ ಈ ಪುಸ್ತಕ ಈಗ ನಿಮ್ಮ ಕೈಯಲ್ಲಿದೆ.
-ಜೆ.ಮೃದುಲಾ
Sale!
ಗೆಲುವೇ… ನಿನ್ನ ಗುಟ್ಟೇನು?! ( Ebook )
$0.96
- Publisher: ARUDO
- Book Format: Ebook
- Language: Kannada
- Pages: 132
- Year Published: 2019
- ISBN: 978-81-930675-1-2
- Category: Articles
Only logged in customers who have purchased this product may leave a review.
Reviews
There are no reviews yet.