Your Cart

Need help? Call +91 9535015489

📖 Print books shipping available only in India. ✈ Flat rate shipping

ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ

K V Subbanna
$1.21

Product details

Category

Articles

Author

K V Subbanna

Publisher

Akshara Prakashana

Book Format

Printbook

Language

Kannada

ರಾಘವಾಂಕನ ಹರಿಶ್ಚಂದ್ರ ಕಾವ್ಯ ಪ್ರವೇಶ
ರಾಘವಾಂಕ
ರಾಘವಾಂಕನ ಕಾಲ ೧೩ನೇ ಶತಮಾನ; ಸುಮಾರು ಕ್ರಿ.ಶ. ೧೧೬೫ರಿಂದ ೧೨೯೦ರ ಅವಧಿಯಲ್ಲಿ ಜೀವಿಸಿರಬಹುದೆಂದು ವಿದ್ವಾಂಸರ ನಿರ್ಣಯ. ಇವನು ಹಂಪೆಯಲ್ಲಿ ಹುಟ್ಟಿ ಬೆಳೆದವನು. ತಂದೆ ಮಹಾದೇವ ಭಟ್ಟ, ತಾಯಿ ರುದ್ರಾಣಿ. ಹಂಪೆಯ ಹರಿಹರನ ಸೋದರಳಿಯ ಮತ್ತು ಶಿಷ್ಯ. ಗುರುಗಳಾದ ಮಹಾದೇವ ಮತ್ತು ಹರಿಹರರ ಶಿವಪೂಜೆ ಮತ್ತು ಜಂಗಮಪ್ರೇಮವನ್ನು ತನ್ನ ಕೃತಿಗಳಲ್ಲಿ ಈತ ಎತ್ತಿ ಹಿಡಿದಿದ್ದಾನೆ. ರಾಘವಾಂಕನು ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತೆ, ವೀರೇಶ್ವರ ಚರಿತೆ, ಶರಭ ಚಾರಿತ್ರ್ಯ ಮುಂತಾದ ಕಾವ್ಯಗಳನ್ನು ಬರೆದಿದ್ದಾನೆ. ವಾರ್ಧಕ ಷಟ್ಪದಿ ಇವನ ಮೆಚ್ಚಿನ ಛಂದಸ್ಸು. ಅದುವರೆಗೆ ಪ್ರಚಲಿತವಿದ್ದ ವೃತ್ತ-ಚಂಪೂ ಶೈಲಿಗಳನ್ನು ಬಿಟ್ಟು ದೇಸಿಯ ಷಟ್ಪದಿಯನ್ನು ಬಳಸಿದ ಕೀರ್ತಿ ರಾಘವಾಂಕನದ್ದೆಂದು ವಿದ್ವಾಂಸರ ಮತ. ಈತನು ‘ಹರನೆಂಬುದೇ ಸತ್ಯ ಸತ್ಯವೆಂಬುದೆ ಹರನು ಎರಡಿಲ್ಲವೆಂದು’ ಸಾರುವ ಶ್ರುತಿಯ ಮಾತನ್ನು ಸಾರಲು ‘ಹರಿಶ್ಚಂದ್ರ ಕಾವ್ಯ’ವನ್ನು ಬರೆದುದಾಗಿ ಹೇಳಿಕೊಂಡಿದ್ದಾನೆ. ಇವನಿಗೆ ‘ಚತುರ ಕವಿರಾಯ ಹಂಪೆಯ ಹರೀಶ್ವರನ ವರಸುತ, ಉಭಯಕವಿ ಕಮಲರವಿ’ ಎಂಬ ಬಿರುದಾವಳಿಗಳಿವೆ.
ರಾಘವಾಂಕನ ಹರಿಶ್ಚಂದ್ರ ಕಾವ್ಯ ಕುರಿತ ಮುಖ್ಯ ಕೃತಿಗಳು
ಕೃತಿ ಸಂಪಾದನೆಗಳು / ಬರಹಗಳು:
ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯ (ಸಂ: ಆಸ್ಥಾನ ಪಂಡಿತ ಸರ್ವದರ್ಶನ ತೀರ್ಥ ವೈ. ನಾಗೇಶ ಶಾಸ್ತ್ರಿಗಳು ಮತ್ತು ವಿದ್ವಾನ್ ಎಂ.ಜಿ. ವೆಂಕಟೇಶಯ್ಯನವರು)
ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯ (ಸಂ: ಎನ್. ಬಸವಾರಾಧ್ಯ ಮತ್ತು ಪಂ. ಎನ್. ಬಸಪ್ಪ)
ಹರಿಶ್ಚಂದ್ರೋಪಾಖ್ಯಾನ – ಶ್ರೀ ವೆಂಕಟಸುಬ್ಬಾಶಾಸ್ತ್ರಿ, ಬೆಂಗಳೂರು
ಹರಿಶ್ಚಂದ್ರ ಸಾಂಗತ್ಯ – ಸಂ: ಎನ್. ಬಸವಾರಾಧ್ಯ
ಹರಿಶ್ಚಂದ್ರ ಕಾವ್ಯ ಸಂಗ್ರಹ (ಸಂ: ಪ್ರೊ. ಟಿ.ಎಸ್. ವೆಂಕಣ್ಣಯ್ಯ, ಪ್ರೊ. ಎ.ಆರ್. ಕೃಷ್ಣಶಾಸ್ತ್ರಿ)
ಮಹಾಕವಿ ರಾಘವಾಂಕ – ಡಾ. ಆರ್. ಸಿ. ಹಿರೇಮಠ
ರಾಘವಾಂಕ – ಕವಿಕಾವ್ಯಮಾಲೆ – ಸಂ: ವಿ. ಸೀತಾರಾಮಯ್ಯ
ಹರಿಶ್ಚಂದ್ರ ಕಾವ್ಯ – ಎನ್. ದೇವತಾ ರಾಮಯ್ಯ
ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ ‘ – ಜಿ.ಎಚ್. ನಾಯಕ
ಕನ್ನಡ ಸಾಹಿತ್ಯ ಚರಿತ್ರೆ – ರಂ.ಶ್ರೀ. ಮುಗಳಿ
ಸಾಮಾನ್ಯನಿಗೆ ಸಾಹಿತ್ಯಚರಿತ್ರೆ – ಷಟ್ಪದಿ ಕಾವ್ಯಗಳು