Sale!

ಜೀವ ನದಿಗಳ ಸಾವಿನ ಕಥನ ( Printbook )

Shivanand Kalave
$1.85

ಜೀವ ನದಿಗಳ ಸಾವಿನ ಕಥನ:

ಜಲ ಸಂರಕ್ಷಣೆಯ ಜನ ಜಾಗೃತಿಯ ಕಾರ್ಯದಲ್ಲಿ ಎರಡು ದಶಕಗಳಿಂದ ಶ್ರಮಿಸುತ್ತಿರುವವರು ಬರಹಗಾರ ಶಿವಾನಂದ ಕಾಳವೆ. ನದಿ ಕಣಿವೆಗಳನ್ನು ಸುತ್ತಾಡಿದವರು. ಅಧ್ಯಯನ ನಡೆಸಿದವರು. ಬಾಲ್ಯದಿಂದಲೂ ಹಳ್ಳಿಯಲ್ಲಿದ್ದು ಹಳ್ಳಗಳ ಒಡನಾಟದಲ್ಲಿ ಬೆಳೆದವರು.

‘ಜೀವ ನದಿಗಳ ಸಾವಿನ ಕಥನ’ ಕಳವೆ ಕಂಡ ರಾಜ್ಯದ ನದಿ ನೋಟಗಳ ಅದ್ಭುತ ಲೋಕ. ಬರಹ ಓದುತ್ತ ಹೋದಂತೆ ನದಿ ನೋವಿನ ದ್ವನಿಗಳು ಕೇಳಿಸುತ್ತವೆ, ಸಾವಿನ ಕಾರಣಗಳು ಸಿಗುತ್ತವೆ, ಪರಿಹಾರದ ದಾರಿ ಕಾಣಿಸುತ್ತದೆ. ಜಾಗಟೆ, ಮಂತ್ರ ಘೋಷಗಳ ಸದ್ದಿರುತ್ತಿದ್ದ ಶ್ರದ್ದಾ ದೇಗುಲದಲ್ಲಿ ಇದ್ದಕ್ಕಿದ್ದಂತೆ ದೇವರು ನಾಪತ್ತೆಯಾದಂತೆ…. ಚಿಲಿಪಿಲಿ ಪುಟಾಣಿಗಳು ಆಟ ಪಾಠದಲ್ಲಿ ಸಂಭ್ರಮಿಸುತ್ತಿದ್ದ ಶಾಲೆಗೆ ಬೀಗ ಬಿದ್ದಂತೆ ಹಳ್ಳಿ ಹಸಿರಿನ ಜೀವ ಭಾಗವಾದ ಹೊಳೆ ಹಳ್ಳಗಳು ಇಂದು ಸ್ತಬ್ಧಗೊಂಡಿವೆ. ನಿಸರ್ಗ ಶಾಲೆಯ ಮಡಿಲಲ್ಲಿ ಕಲ್ಲು ಮರಳು ಭಕ್ತರು, ಮರಗಳ್ಳರು ಅಂಗಡಿ ತೆಗೆದಿದ್ದಾರೆಂಬ ಕಳವೆಯ ಸಾಲಿನಲ್ಲಿ ಮನಕಲಕುವ ನೋಟವಿದೆ.

ನದಿ ಸಂರಕ್ಷಣೆಗೆ ಮಾರ್ಗದರ್ಶನವಾಗಿ ಐತಿಹಾಸಿಕ ದಾಖಲೆಗಳ ಸಂಗ್ರಹವಾಗಿರುವ ಕೃತಿ. ಮಕ್ಕಳಿಗೆ ಪುರಾಣ, ಜನಪದ, ಪರಿಸರ ವಿಜ್ಞಾನ ಮೂಲಕ ನದಿ ಪ್ರೀತಿಯ ನೀತಿ ಹೇಳುವ ಕಣಜ. ಜನಸಾಮಾನ್ಯರು, ಅಧ್ಯಯನಕಾರರು, ಪರಿಸರ ಆಸಕ್ತರು, ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕವಿದು.

  • Book Format: Printbook
  • Author: Shivanand Kalave
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.