Your Cart

Need help? Call +91 9535015489

📖 Print books shipping available only in India. ✈ Flat rate shipping

ಕನ್ನಡದಲ್ಲಿ ಅವಧಾನಕಲೆ

Simpi Linganna
$6.53

Product details

Book Format

Printbook

Category

Articles

Language

Kannada

Publisher

Sahitya Prakashana

Author

Simpi Linganna

“ಆಂಧ್ರದೇಶದಲ್ಲಿ ಪ್ರಖ್ಯಾತವಾಗಿರುವ ಅವಧಾನಕಲೆಯು ಕನ್ನಡನಾಡಿನಲ್ಲಿ ಇಲ್ಲವಾಗಿದೆಯೆಂದು ನನ್ನ ಮನಸ್ಸಿನಲ್ಲಿ ಒಂದು ವ್ಯಥೆ ಬಹುವರ್ಷಗಳಿಂದ ಉಳಿದುಕೊಂಡಿತ್ತು. ಅಪಾರವಾದ ಕವಿತಾಪ್ರತಿಭೆಯೂ ಅಸಾಧಾರಣವಾದ ಧಾರಣಶಕ್ತಿಯೂ ಅವಧಾನಿಗೆ ಅವಶ್ಯಕವಾದದ್ದು. ಅಂಥ ಸಾಮರ್ಥ್ಯವನ್ನು ಗಳಿಸಿಕೊಂಡು ಒಬ್ಬ ಕನ್ನಡಗನೂ ಇಲ್ಲದೆಹೋದನೆಂಬ ಕೊರತೆಯು ಶ್ರೀ ಆರ್. ಗಣೇಶ್ ಅವರಿಂದ ನೀಗಿಹೋಯಿತು.

“ಈ ಮಹಾಪ್ರಂಬಧವು ಗಂಭೀರಸಂಶೋಧನೆಗಳಿಂದ, ನಾನಾ ಪ್ರಮಾಣ ಗ್ರಂಥಗಳಿಂದ ಅವಧಾನಕಲೆಯ ಎತ್ತರ-ಬಿತ್ತರಗಳನ್ನು ಕೂಲಂಕಷಮಾಡಿ ರಚಿಸಿದ್ದಾಗಿರುತ್ತದೆ. ಇಂಥ ಒಂದು ಗ್ರಂಥವು ಕನ್ನಡನಾಡಿನಲ್ಲಿ, ಕನ್ನಡಭಾಷೆಯಲ್ಲಿ ಯಾರಿಂದಲೂ ರಚಿಸಿತವಾಗಿರಲಿಲ್ಲ. ಬಹುಶಃ ಇತರ ಭಾಷೆಗಳಲ್ಲಿಯೂ ಈ ಪ್ರೌಢಿಮೆಯಿಂದ ರಚಿತವಾಗಿರಲಾರದು. ಕನ್ನಡಸಾಹಿತ್ಯ ಲೋಕಕ್ಕೆ ಇದೊಂದು ಉತ್ತಮ ಕಾಣಿಕೆ. ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ವೈದುಷ್ಯಪೂರ್ಣಕೃತಿ.”
-ಮಹಾಮಹೋಪಾಧ್ಯಾಯ ಎನ್. ರಂಗನಾಥಶರ್ಮಾ

“ಶ್ರೀಗಣೇಶ್ ಅವರು ಪ್ರತಿಭಾಶಾಲಿಗಳು, ಕಲಾಭಿಜ್ಞರು, ಕಲ್ಪನಾಶಕ್ತಿಯುಳ್ಳ ರಸಿಕರು. ಅವರ ಜ್ಞಾಪಕಶಕ್ತಿ-ಧಾರಣಶಕ್ತಿಗಳು ಮೇಲುಮಟ್ಟದವು. ಅವರ ಆಶುಕವಿತಾರಚನೆಯ ಸಾಮರ್ಥ್ಯ ವಿಸ್ಮಯಾವಹವಾದುದು. ಅವಧಾನನಿರ್ವಹಣೆಯಲ್ಲಿ ಅವರು ಪ್ರಕಟಿಸುವ ಧೈರ್ಯ-ಆತ್ಮವಿಶ್ವಾಸಗಳು ಶ್ಲಾಘ್ಯವಾದುವು; ಗಳಿಸಿರುವ ಜನಪ್ರಿಯತೆ ಮೆಚ್ಚಬೇಕಾದುದು. ಅವರ ಪ್ರಯತ್ನ-ಪರಿಶ್ರಮಗಳ ಫಲವಾಗಿ ಕನ್ನಡದಲ್ಲಿಂದ ಅವಧಾನಕಲೆಯ ಪ್ರಸಾರ ಹಾಗೂ ಉಜ್ಜೀವನ ಸಾಧ್ಯವಾಗಿದೆ; ಈ ಕಲೆಯ ಪ್ರಭಾವ ಬೆಳೆಯಲು ಅನುಕೂಲವಾಗಿದೆ.”
-ಡಾ।। ಟಿ. ವಿ. ವೆಂಕಟಾಚಲಶಾಸ್ತ್ರಿ