Sale!

ಮನ್ ಕಿ ಬಾತ್ -3 ( Printbook )

Narendra Modi
$1.61

ಮನ್ ಕಿ ಬಾತ್ -3:

2014ರ ವಿಜಯದಶಮಿಯಂದು ನಾನು ಈ ಮನ್ ಕಿ ಬಾತ್ಅನ್ನು ಶುರು ಮಾಡಿದೆ. ಹಾಗೆಯೇ ಈ ಕಾರ್ಯಕ್ರಮವು ಸರಕಾರದ ಗುಣಗಾನ ಮಾಡುವ ಕಾರ್ಯಕ್ರಮ ಆಗಬಾರದೆಂದು ನನ್ನ ಪ್ರಾಮಾಣಿಕ ಪ್ರಯತ್ನವಾಗಿತ್ತು. ಅಂತೆಯೇ ಮನ್ ಕಿ ಬಾತ್ ಕಾರ್ಯಕ್ರಮವು ರಾಜಕೀಯ ಅಜೇಂಡಾದ ಕಾರ್ಯಕ್ರಮ ಆಗಬಾರದು. ಹಾಗೆಯೇ ಇದು ಆರೋಪ ಪ್ರತ್ಯಾರೋಪದ ವೇದಿಕೆಯೂ ಆಗಬಾರದು. ಇಲ್ಲಿಯ ವರೆಗೆ ಹೆಜ್ಜೆ ಹೆಜ್ಜೆಯಲ್ಲಿಯ ಒತ್ತಡದ ನಡುವೆಯೂ ಒಮ್ಮೊಮ್ಮೆ ಡೋಲಾಯಮಾನವಾಗಿದ್ದ ಅಥವಾ ಪ್ರಲೋಭನಾತ್ಮಕ ವಾತಾವರಣ ಮಧ್ಯದಲ್ಲಿಯೂ ಕೆಲವೊಮ್ಮೆ ಕೋಪಗೊಂಡು ಮಾತನಾಡುವಂತಹ ಒತ್ತಡವಿದ್ದಾಗ್ಯೂ ತಮ್ಮೆಲ್ಲರ ಆಶೀರ್ವಾದದಿಂದ ಮನ್ ಕಿ ಬಾತ್ ನ್ನು ಆ ಎಲ್ಲಾ ಅಡೆತಡೆಗಳಿಂದ ಪಾರುಮಾಡಿ ಶ್ರೀಸಾಮಾನ್ಯರೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಈ ದೇಶದ ಸಾಮಾನ್ಯ ಪ್ರಜೆಯೂ ನನಗೆ ಎಲ್ಲ ರೀತಿಯಲ್ಲಿ ಪ್ರೇರಣೆ ನೀಡುತ್ತಲೇ ಇದ್ದಾರೆ. ಈ ರಾಷ್ಟ್ರದ ಸಾಧಾರಣ ಮಾನವನ ಆಸೆ-ಆಕಾಂಕ್ಷೆಗಳನ್ನು ಈ ಮನ್ ಕಿ ಬಾತ್ ನಲ್ಲಿ ಪ್ರಕಟ ಮಾದುರರಿರುತ್ತೇನೆ. ಈ ಕಾರ್ಯಕ್ರಮವು ನಮ್ಮ ದೇಶದ ಜನರಿಗೆ ತಿಳಿವಳಿಕೆಯ ಒಂದು ಅವಕಾಶವಾಗಿದೆ. ಇದರ ಮೂಲಕ ನನಗೆ ನೂರಿಪ್ಪತ್ತೈದು ಕೋಟಿ ದೇಶಬಾಂಧವರ ಸಾಮರ್ಥ್ಯವನ್ನು ಮೇಲಿಂದ ಮೇಲೆ ನೆನಪಿಶಿಸುವುದು ಮತ್ತು ಇಂತಹ ಕಾರ್ಯಗಳಿಗಾಗಿ ಅವರಿಂದಲೇ ಪ್ರೇರಣೆ ಪಡೆಯುವುದು ನನ್ನ ಉದ್ದೇಶ, ಅಂತೆಯೇ ತಾವು ಈ ಮನ್ ಕಿ ಬಾತ್ ನ್ನು ಯಾವ ರೀತಿ ಸಲುಹಿದ್ದೀರಿ, ಸ್ವೀಕರಿಸಿರುವಿರಿ, ಸ್ವಾಗತಿಸಿದಿರಿ…. ಈ ಎಲ್ಲ ಕಾರಣಗಳಿಗಾಗಿ ಎಲ್ಲ ಶ್ರೋತೃಗಳಿಗೂ ನಾನು ಹೃದಯಪೂರ್ವಕ ಅಭಾರವನ್ನು ವ್ಯಕ್ತಮಾಡುತ್ತೇನೆ. ಹಾಗೆಯೇ ಆಕಾಶವಾಣಿಯ ಇದನ್ನು ಕೇವಲ ಪ್ರಸಾರ ಮಾಡಿದ್ದಲ್ಲದೇ ಈ ಮನ್ ಕಿ ಬಾತ್ ಕಾರ್ಯಕ್ರಮವನ್ನು ಎಲ್ಲ ಭಾಷೆಗಳಲ್ಲೂ ತಲುಪಿಸುವ ಪ್ರಯತ್ನವನ್ನು ಮಾಡಿರಿವುದಕ್ಕಾಗಿ ನಾನು ಆಕಾಶವಾಣಿಗೂ ಕೃತಜ್ಞನಾಗಿದ್ದೇನೆ. ಮತ್ತು ನನ್ನ ಮನ್ ಕಿ ಬಾತ್ ಕಾರ್ಯಕ್ರಮ ನಂತರ ಪತ್ರಗಳನ್ನು ಬರೆದ, ಸಲಹೆಗಳನ್ನು ನೀಡಿದ, ಸರಕಾರದ ಬಾಗಿಲನ್ನು ಬಡಿದ, ಸರಕಾರದ ಕುಂದು ಕೊರತೆಗಳ ಮೇಲೆ ಬೆಳಕು ಚೆಲ್ಲಿದ ಅಂತಹ ಎಲ್ಲ ದೇಶಬಾಂಧವರಿಗೂ ಆಭಾರಿಯಾಗಿದ್ದೇನೆ. ಮತ್ತು ಆಕಾಶವಾಣಿಯು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ, ಸರಕಾರದ ಜನರನ್ನು ಕರೆಸಿ, ಕೇಳುಗರ ಪಾತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ವೇದಿಕೆಯನ್ನು ಒದಗಿಸಿಕೊಟ್ಟೆದೆ. ಹಾಗಾಗಿ ಈ ಮನ್ ಕಿ ಬಾತ್ ಎನ್ನುವದು ಕೇವಲ 15-20 ನಿಮಿಷಗಳ ಸಂವಾದವಲ್ಲ. ಸಮಾಜ ಪರಿವರ್ತನೆಯ ಒಂದು ಹೊಸ ಅವಕಾಶವಾಗಿರುವದು ಎಲ್ಲರಿಗು ಸಂತೋಷದ ಸಂಗತಿಯೆನ್ನಿಸಿದೆ. ಹಾಗಾಗಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ಅಪಿ೯ಸುತ್ತೇನೆ. ಅವರಿಗೆ ಆಭಾರಿಯಾಗಿದ್ದೇನೆ.

  • Book Format: Printbook
  • Author: Narendra Modi
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.