ಸಂದರ್ಶನಗಳು ಪತ್ರಿಕೆಯಲ್ಲೇ ಇರಲಿ, ಪುಸ್ತಕ ರೂಪದಲ್ಲೇ ಇರಲಿ, ಸಾಧಕರು ತೆರೆದ ಮನಸ್ಸಿನಿಂದ ತಮ್ಮ ಭಾವನೆ ಚಿಂತನೆ ಹಂಚಿಕೊಳ್ಳುವ, ನಾಟಕೀಯ ವಿನ್ಯಾಸದಲ್ಲಿರುವ ಕಾರಣದಿಂದ ಓದುಗರಿಗೆ ಇಷ್ಟವಾಗುತ್ತವೆ. ಕನ್ನಡದಲ್ಲಿ ಸಾವಿರಾರು ಸಂದರ್ಶನಗಳು ಪ್ರಕಟವಾಗಿವೆ. ಸಂಕಲನವಾಗಿ ಪ್ರಕಟವಾಗಿರುವುದು ಕಡಿಮೆ. ಮಾಸ್ತಿ, ಕುವೆಂಪು, ನರಸಿಂಹಸ್ವಾಮಿ ಮುಂತಾದ ಹಿರಿಯ ಲೇಖಕರ ಸಂದರ್ಶನಗಳ ಪ್ರತ್ಯೇಕ ಸಂಪುಟ ಬಂದಿವೆ. ಆದರೆ ಬೇರೆಬೇರೆ ವ್ಯಕ್ತಿಗಳ ಸಂದರ್ಶನಗಳನ್ನುಳ್ಳ ಸಂಕಲನಗಳು ಕಡಿಮೆ. ಅಂತಹ ಕೂಡುಸಂಕಲನವನ್ನು ಪ್ರಕಟಿಸಿದವರಲ್ಲಿ ರಾಮಚಂದ್ರ ಶರ್ಮರು (‘ಪ್ರತಿಭಾ ಸಂದರ್ಶನ’) ಪ್ರಥಮರೆನ್ನಬಹುದು. ತರುವಾಯ ಹಲವಾರು ಸಂದರ್ಶನ ಸಂಕಲನಗಳು ಪ್ರಕಟವಾದವು. ಅವುಗಳ ಹಿನ್ನೆಲೆಯಲ್ಲಿ ಪ್ರಸ್ತುತ ಸಂದರ್ಶನ ಲೇಖನಗಳ ಸಂಕಲನವು ನಾಲ್ಕು ಕಾರಣಗಳಿಂದ ವಿಶಿಷ್ಟವಾಗಿದೆ.

ಮೊದಲನೆಯದಾಗಿ, ಇಲ್ಲಿನ ಸಂದರ್ಶನಗಳಿಗಿರುವ ಸೈದ್ಧಾಂತಿಕ ಚೌಕಟ್ಟಿನ ಕಾರಣದಿಂದ. ಇದೊಂದು ಸ್ತ್ರೀವಾದಿ ಮಾರ್ಕ್ಸಿಸ್ಟ್ ಚೌಕಟ್ಟು. ಹೆಚ್ಚಿನ ಸಂದರ್ಶನ ನೀಡುಗರು ಎಡಪಂಥೀಯರೂ ಮಹಿಳೆಯರೂ ಆಗಿರುವುದರಿಂದ ಇದು ಸಾಧ್ಯವಾಗಿದೆ. ಬಹುತೇಕ ಪ್ರಶ್ನೆ ಮತ್ತು ಉತ್ತರಗಳು ಈ ಚೌಕಟ್ಟಿನೊಳಗಿಂದಲೇ ಹೊಮ್ಮಿಬಂದಿವೆ. ಹೀಗಾಗಿ ಸಂಕಲನವು ತಾತ್ವಿಕ ಜಿಜ್ಞಾಸೆಯ ಸಂಪುಟವಾಗಿದೆ. ಈ ಜಿಜ್ಞಾಸೆಗೆ ಸಾಧಕರ ವೈಯಕ್ತಿಕ ಅನುಭವದ ಆಪ್ತತೆಯ ಅಂಚಿದೆ.

ಎರಡನೆಯದಾಗಿ, ಇಲ್ಲಿನ ಸಂದರ್ಶನಗಳು ಕಟ್ಟಿಕೊಡುತ್ತಿರುವ ಚರಿತ್ರೆಯ ಕಾರಣದಿಂದ. ಭಾರತದ ಅರ್ಧಶತಮಾನದ ಚಳುವಳಿಗಳ ಚರಿತ್ರೆಯೇ ಇಲ್ಲಿ ಮೈದೆರೆಯುತ್ತದೆ. ಕಳೆದೆರಡು ದಶಕಗಳಲ್ಲಿ ನಡೆದಿರುವ ವಿದ್ಯಮಾನಗಳ ಕನ್ನಡಿನೋಟವೂ ಸಿಗುತ್ತದೆ. ಹೀಗಾಗಿ ಇದೊಂದು ವಿಭಿನ್ನ ಪ್ರದೇಶ ಮತ್ತು ಕಾಲಘಟ್ಟಗಳಲ್ಲಿ ನಡೆದ ಜನಪರ ಚಳುವಳಿಗಳ ಸೋಲು-ಗೆಲುವಿನ ಚರಿತ್ರೆ. ಸಂದರ್ಶನ ಮತ್ತು ವ್ಯಕ್ತಿಚಿತ್ರಗಳ ಮೂಲಕ ಕಟ್ಟಿಕೊಳ್ಳುವ ಇಲ್ಲಿನ ಚರಿತ್ರೆ ಮಾನವೀಯ ಘಟನೆಗಳಿಂದ ಕೂಡಿದೆ. ಕನ್ನಡದಲ್ಲಿ ಮಹಿಳಾ ಸಾಹಿತ್ಯ ಚರಿತ್ರೆಗಳಿವೆ. ಆದರೆ ಮಹಿಳಾ ಆಕ್ಟಿವಿಸ್ಟರ ಚರಿತ್ರೆಗಳು ಕಡಿಮೆ. ಇಲ್ಲಿನ ಸಾಧಕಿಯರು ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸಮಾಜವನ್ನು ಕಟ್ಟಲು ಮಾಡಿರುವ ಸೆಣಸಾಟ ಅಪೂರ್ವವಾಗಿವೆ. ಸಾಂಪ್ರದಾಯಿಕ ಚರಿತ್ರೆಯು ಬಿಟ್ಟುಹೋಗಿರುವ ಲೋಕಗಳನ್ನು ಒಳಗೊಂಡಿರುವ ಇದೊಂದು ಪರ್ಯಾಯ ಚರಿತ್ರೆಯ ಸಂಪುಟವಾಗಿದೆ.

Additional information

Category

Author

Publisher

Book Format

Ebook

Pages

224

Reviews

There are no reviews yet.

Only logged in customers who have purchased this product may leave a review.