Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರೇಮಶೇಖರ ಕಾಕಾಖ್ಯಾನ

Premshekar
$1.09

Product details

Book Format

Printbook

Author

Premshekar

Category

Articles

Language

Kannada

Publisher

Sahitya Prakashana

ಇಂಥವರೇ ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಬೇಕಾಗಿದ್ದದ್ದು ಸೆಕ್ಯೂಲರಿಸಂ, ಸೋಶಿಯಲಿಸಂ ಎಂದೆಲ್ಲಾ ಘೋಷಣೆ ಕೂಗಿಕೊಂಡು, ಅವುಗಳ ಆಧಾರದ ಮೇಲೆ ನವರಾಷ್ಟ್ರದ ನಿರ್ಮಾಣಕ್ಕಿಳಿದಿರುವುದಾಗಿ ದೇಶವನ್ನು ನಂಬಿಸುವ ತನ್ನ ಹುನ್ನಾರದ ವೈಚಾರಿಕ ಮುಖವಾಗಲು ನೆಹರೂರ ಕಾಂಗ್ರೆಸ್ ಗೆ ಈ ಎಡಪಂಥೀಯರಿಗಿಂತ ಅತ್ಯುತ್ತಮ ಕಾಲಾಳುಗಳಾಗಿ ಬೇರಾರೂ ಸಿಗುವಂತಿರಲಿಲ್ಲ. ಅದಕ್ಕೆ ಪೂರಕವಾಗಿ, ರಾಷ್ಟ್ರಮಟ್ಟದಲ್ಲಿ ಸ್ವಂತವಾಗಿ ರಾಜಕೀಯ ಅಧಿಕಾರ ಗಳಿಸುವ ತಾಕತ್ತು ಕಮ್ಯುನಿಸ್ಟ್ ಪಕ್ಷಕ್ಕಿಲ್ಲವೆಂದರಿತ ಈ ಬುದ್ಧಿವಂತ ಎಡಸಾಹಿತಿಗಳಿಗೆ ಬೇಕಾಗಿದ್ದದ್ದು ಕಾಂಗ್ರೆಸ್ ಪ್ರಭುತ್ವದ ಕೃಪಾಕಟಾಕ್ಷವೇ. ಹೀಗೆ ಕಮ್ಯುನಿಸ್ಟ್ ಚಿಂತಕರು ಕಾಂಗ್ರೆಸ್ ನ ಕಾಲಾಳುಗಳಾಗಿ ಮಾರ್ಪಟ್ಟು ಆಷಾಡಭೂತಿತನದ ಅಪರಾವತಾರವಾಗಿ ಹೋದರು. ಕಾಂಗ್ರೆಸ್- ಕಮ್ಯೂನಿಸ್ಟ ಅಡ್ಡತಳಿಯಾದ ಈ ಆಷಾಡಭೂತಿಗಳೇ ‘ಕಾಕಾ’ಗಳು.

ಕಾಂಗ್ರೆಸ್ ತಮ್ಮ ರಕ್ಷಕ ಹಾಗೂ ಪೋಷಕ ಎಂದು ಐವತ್ತರ ದಶಕದಲ್ಲೇ ಅರಿತ ಕಾಕ ಸಾಹಿತಿಗಳು ಪ್ರಭುತ್ವ ನೀಡಿದ ಎಲ್ಲ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸ್ಥಾನಗಳನ್ನು ಗಬಕ್ಕನೇ ಆತುಕೊಂಡು ಅದಕ್ಕೆ ಬಲವಾಗಿ ಅಂಟಿಕೊಂಡು ಕುಳಿತರು. ಅಷ್ಟೇ ಅಲ್ಲ. ಆ ಸ್ಥಾನಗಳ್ಲಗೆ ತಮ್ಮ ವೈಚಾರಿಕ ವಿರೋಧಿಗಳಾರೂ ಬಾರದಂತೆ ಮುಳ್ಳುಬೇಲಿ ನಿರ್ಮಿಸಿ ಕಾವಲು ಕುಳಿತರು. ಅರವತ್ತರ ದಶಕದ ಉತ್ತಾರಾರ್ಧದಲ್ಲಿ ಇಂದಿರಾ ಗಾಂಧಿ ಅದಿಕಾರವನ್ನು ಭದ್ರಪಡಿಸಿಕೊಳ್ಳತೊಡಗಿದ ಹೊತ್ತಿಗೆ ಕಾಂಗ್ರೆಸ್ ಪ್ರಭುತ್ವ ಮತ್ತು ಕಾಕಗಳ ಸಂಬಂಧ ಪೋಷಕ ಮತ್ತು ಫಲಾನುಭವಿಯ ಹಂತವನ್ನು ದಾಟಿ ಬೇಟೆಗಾರ ಮತ್ತು ಬೇಟೆನಾಯಿಯ ಸ್ವರೂಪವನ್ನು ಗಳಿಸಿಕೊಂಡಿತು.