Your Cart

Need help? Call +91 9535015489

📖 Print books shipping available only in India. ✈ Flat rate shipping

ರನ್ನನ ಗದಾಯುದ್ಧ ಪ್ರವೇಶ

K V Subbanna
$0.91

Product details

Category

Articles

Author

K V Subbanna

Publisher

Akshara Prakashana

Language

Kannada

Book Format

Printbook

ರನ್ನನ ಗದಾಯುದ್ಧ ಪ್ರವೇಶ
ರನ್ನ
ಪ್ರಸಿದ್ಧ ಜೈನಕವಿಯಾದ ರನ್ನನು ಕನ್ನಡದ ಆದಿಕವಿಗಳ ‘ರತ್ನತ್ರಯ’ರಲ್ಲಿ ಒಬ್ಬ. ಕ್ರಿ.ಶ. ೯೪೯ರಲ್ಲಿ ಇವತ್ತಿನ ಮುಧೋಳವಾಗಿರುವ ಮುದುವೊಳಲು ಊರಿನಲ್ಲಿ ಜಿನವಲ್ಲಭೇಂದ್ರ ಮತ್ತು ಅಬ್ಬಲಬ್ಬೆಯರ ಮಗನಾಗಿ ಈತ ಜನಿಸಿದ. ಮುಂದೆ ಆತ ದಕ್ಷಿಣ ಕರ್ನಾಟಕಕ್ಕೆ ಬಂದು ಶ್ರವಣಬೆಳಗೊಳದಲ್ಲಿ ನೆಲೆಸಿ ಪ್ರಸಿದ್ಧ ಜೈನ ಮುನಿಗಳಾದ ಅಜಿತಸೇನಾಚಾರ್ಯರಲ್ಲಿ ವ್ಯಾಸಂಗ ಮಾಡಿದ. ಚಾವುಂಡರಾಯ, ಅತ್ತಿಮಬ್ಬೆಯರ ಆಶ್ರಯದಿಂದ ಪೋಷಿತನಾದ ರನ್ನ ಚಾಲುಕ್ಯ ಚಕ್ರವರ್ತಿ ತೈಲಪನ ಆಸ್ಥಾನಕವಿಯೂ ಆದ. ‘ಅಜಿತನಾಥಪುರಾಣ’ ಮತ್ತು ‘ಗದಾಯುದ್ಧ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ‘ಸಾಹಸಭೀಮವಿಜಯಂ’ ಆತನ ಎರಡು ಪ್ರಸಿದ್ಧ ಕೃತಿಗಳು; ಇದರಲ್ಲಿ ಮೊದಲನೆಯದು ಜೈನ ತೀರ್ಥಂಕರರೊಬ್ಬರ ಕಥಾನಕವಾದರೆ ಎರಡನೆಯದು ಮಹಾಭಾರತವನ್ನು ಆಧರಿಸಿದ್ದು. ‘ಚಕ್ರೇಶ್ವರ ಚರಿತಂ’ ಮತ್ತು ‘ಪರಶುರಾಮಚರಿತಂ’ ಎಂಬೆರಡು ಕೃತಿಗಳನ್ನು ಆತ ರಚಿಸಿದನೆಂಬ ಉಲ್ಲೇಖವಿದ್ದರೂ ಅವು ಲಭ್ಯವಾಗಿಲ್ಲ. ‘ಕವಿಚಕ್ರವರ್ತಿ’, ‘ಶ್ರೀಕವಿರತ್ನ’ ಮೊದಲಾದ ಬಿರುದುಗಳನ್ನೂ ಪಡೆದಿದ್ದ ರನ್ನ ಹಳೆಗನ್ನಡ ಕವಿಗಳಲ್ಲೇ ಅತ್ಯಂತ ಜನಪ್ರಿಯ.
ರನ್ನನ ಗದಾಯುದ್ಧ ಕುರಿತ ಮುಖ್ಯ ಕೃತಿಗಳು

ಕೃತಿ
ಗದಾಯುದ್ಧಂ – ಎಂ.ಎ. ರಾಮಾನುಜಯ್ಯಂಗಾರ್ ಮತ್ತು ಎಸ್. ಜಿ. ನರಸಿಂಹಾಚಾರ್ಯರು (೧೮೯೫)
ಸಾಹಸಭೀಮವಿಜಯಂ – ಕೆ.ವಿ. ಕೃಷ್ಣಭಟ್ಟ (೧೯೪೯)
ರನ್ನ ಕವಿ ಗದಾಯುದ್ಧಸಂಗ್ರಹಂ – ತೀ.ನಂ. ಶ್ರೀಕಂಠಯ್ಯ (೧೯೪೯)
ರನ್ನ ಕವಿ ವಿರಚಿತ ಸಾಹಸಭೀಮವಿಜಯಂ – ಬಿ.ಎಸ್. ಸಣ್ಣಯ್ಯ ಮತ್ತು ಪ್ರೊ. ರಾಮೇಗೌಡ (೧೯೮೦)
ರನ್ನನ ಸರಳ ಗದಾಯುದ್ಧ – ಡಾ. ಎಲ್. ಬಸವರಾಜು (೨೦೦೬)

ಕುರಿತ ಪುಸ್ತಕಗಳು
ರನ್ನಕವಿ ಪ್ರಶಸ್ತಿ – ಸಂ. ಎಸ್.ವಿ. ರಂಗಣ್ಣ (೧೯೨೮)
ಗದಾಯುದ್ಧನಾಟಕಂ – ಬಿ.ಎಂ. ಶ್ರೀಕಂಠಯ್ಯ (೧೯೩೦)
ಮಹಾಕವಿ ರನ್ನ ಹಾಗೂ ಅವನ ಕೃತಿಗಳು – ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ರನ್ನ – ಕ.ವೆಂ. ರಾಘವಾಚಾರ್
ಶ್ರೀಕವಿ ರತ್ನ – ಜಿ.ಪಿ. ರಾಜರತ್ನಂ

ಕುರಿತ ಲೇಖನಗಳು
ಗದಾಯುದ್ಧದಲ್ಲಿಯ ಪ್ರಧಾನ ರಸ ಯಾವುದು? – ದ.ರಾ. ಬೇಂದ್ರೆ
ರನ್ನನ ವೀರ ಕೌರವ – ಕುವೆಂಪು
ಸಾಹಸಭೀಮವಿಜಯ – ಕೀರ್ತಿನಾಥ ಕುರ್ತಕೋಟಿ