ಸಮಾಧಾನ!
ಜಗತ್ತಿನಲ್ಲಿ ಎಷ್ಟು ಜನಕ್ಕಿದೆ?
ನಾವೆಲ್ಲ ಒಂದು ಮುಟಿಗೆಯಷ್ಟು ಸಮಾಧಾನಕ್ಕಾಗಿ ಒದ್ದಾಡುತ್ತೇವೆ. ಸಿಕ್ಕವರು ಪುಣ್ಯವಂತರು.
“ನೀವು ಹೀಗೆ ಮಾತಾಡಿದ್ರೆ ಹೇಗೆ? ಲಕ್ಷಾಂತರ ಜನಕ್ಕೆ ಸಮಾಧಾನ ಹೇಳೋರು ನೀವು. ನೀವೇ ಧೃತಿಗೆಟ್ಟರೆ ಹೇಗೆ?” ಅನ್ನುತ್ತಾರೆ ಅನೇಕರು. ಯಾಕೆ? ನಾನು ಮನುಷ್ಯನಲ್ಲವೆ? ಸಮಾಧಾನ ನನಗೂ ಬೇಕು. ಎಲ್ಲರಿಗೂ ಆಗುವಂತೆ ಹಸಿವು, ನೀರಡಿಕೆ, ಸಿಟ್ಟು, ಕಾಮಾತುರ-ಎಲ್ಲ ನನಗೂ ಆಗುತ್ತದೆ. ಕೆಲವೊಮ್ಮೆ ದಿನಗಟ್ಟಲೆ, ಸುಮ್ಮನೆ ಮಲಗಿ ಬಿಡುತ್ತೇನೆ: ನಿಶ್ಚಲ. ಸಣ್ಣ ದನಿಯಲ್ಲಿ ಅಳು. ಬಿಕ್ಕುತ್ತೇನೆ. ನನ್ನ ಸಮಸ್ಯೆ ಏನು ಅಂತ ನನಗೆ ಗೊತ್ತು. ಅದರ ಪರಿಹಾರವೂ ಗೊತ್ತು. ಆದರೆ ಪರಿಹಾರ ಕೈಗೆ ನಿಲುಕ ಬೇಕಲ್ಲ? ಎಷ್ಟೋ ಸಲ ಈ ಬದುಕು ಸಾಕು ಅನ್ನಿಸಿದೆ. ರಿವಾಲ್ವರ್ ತಬ್ಬಿಕೊಂಡು ಮಲಗಿಬಿಡುತ್ತೇನೆ. ಏನಿದೆ ಕಷ್ಟ? ಒಂದೇ ಒಂದು shot ಹಣೆಗೆ. ಆದರೆ ಮನಸಾಗುವುದಿಲ್ಲ. ಮೊನ್ನೆ ಮೂರು ದಿನಗಳಿಗೆ ಮುಂಚೆ ನನ್ನ ನೆರಳಿನಂಥ ಸಹಾಯಕ ಸೀನ ಅದನ್ನು ಎತ್ತಿಟ್ಟು lock ಮಾಡಿದ. ಆದರೆ ಕಷ್ಟ ಏನೇ ಇರಲಿ. ನಾನು ದೇವರಿಗೆ ಕೈ ಮುಗಿದು “ನನ್ನ ಕಾಪಾಡಪ್ಪಾ” ಅಂತ ಕೇಳಿಲ್ಲ. ದೇವರಿಗೂ-ನನಗೂ ಅಷ್ಟಕ್ಕಷ್ಟೆ. ಆತ್ಮಹತ್ಯೆ ನನ್ನ ನಿರಂತರ ಪ್ರಯತ್ನವೇನಲ್ಲ. ಮೊನ್ನೆ ಯಾಕೋ ಹಂಗೆ ಮಾಡಿದೆನಾದರೂ, ಸುಲಭಕ್ಕೆ ಸಾಯುವ ಘಟ ಅಲ್ಲ ನಾನು. ಇನ್ನು ಖಾಯಿಲೆಗಳು: ಡಯಾಬಿಟಿಸ್ ಬಂದು ಇಪ್ಪತ್ತೈದು ವರ್ಷಗಳಾಗಿವೆ. ಬ್ಲಡ್ ಪ್ರೆಷರ್ ಮೊನ್ನೆ ಹತ್ತು ವರ್ಷದ ಹಿಂದೆ ತಗುಲಿಕೊಂಡಿತು. ಎರಡೂ ಪಾಪ, ತಮ್ಮ ಪಾಡಿಗೆ ತಾವಿವೆ. ಅವುಗಳನ್ನು ತೀರ ಮುದ್ದು ಮಾಡಬಾರದು. ವೈಷಮ್ಯವನ್ನೂ ಕಟ್ಟಿಕೊಳ್ಳಬಾರದು.

Additional information

Category

Author

Publisher

Language

Kannada

Book Format

Ebook

Pages

216

Year Published

2016

Reviews

There are no reviews yet.

Only logged in customers who have purchased this product may leave a review.