ಒಬ್ಬ ಸಾಮಾನ್ಯ ಓದುಗನಿಗೆ ಅವಶ್ಯಕವಾಗುವಂತಹ ವಿಷಯಗಳನ್ನೊಳಗೊಂಡಿರುವ ಕೃತಿ . ಕರ್ನಾಟಕದ 30 ಜಿಲ್ಲೆಗಳ, 176 ತಾಲ್ಲೂಕುಗಳ ಪರಿಚಯಾತ್ಮಕ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
ಮೊದಲಿಗೆ ಇಡೀ ರಾಜ್ಯದ ಮತ್ತು ನಂತರ ಆಯಾ ಜಿಲ್ಲೆಗಳ ಮೇಲ್ಮೈಲಕ್ಷಣಗಳು, ಭೌಗೋಳಿಕ ವಿಶೇಷಗಳು, ವಾಯುಗುಣ, ಮಳೆ, ಭೂಲಕ್ಷಣಗಳು, ಸಂಕ್ಷಿಪ್ತ ರಾಜಕೀಯ ಇತಿಹಾಸ ಮತ್ತು ಸ್ಥೂಲವಾಗಿ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿದೆ. ಪ್ರತಿಯೊಂದು ಜಿಲ್ಲೆಯ ಮತ್ತು ತಾಲ್ಲೂಕುಗಳ ಪ್ರಮುಖ ಸ್ಥಳಗಳ ಸ್ಥೂಲ ಪರಿಚಯವನ್ನು ಮಾಡಿಕೊಡಲಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಊರಿನ ವಿಚಾರ ಸೇರಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಆದರೆ, ಕರ್ನಾಟಕದ ಎಲ್ಲ ಪ್ರಮುಖ ಸ್ಥಳಗಳ ಸಂಕ್ಷಿಪ್ತ ಮಾಹಿತಿಯನ್ನಾದರೂ ಕೊಡಲು ಸಾಧ್ಯವಾಗದ ಸಂದರ್ಭಗಳಿರುತ್ತವೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಪ್ರವಾಸಿಗಳಿಗೆ ಪ್ರಿಯವಾದ ಸ್ಥಳಗಳಿಗೆ ಆದ್ಯತೆ ನೀಡಿ ಸ್ಥಳಗಳ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಹಾಗಾದಾಗ, ಪ್ರಮುಖವೆನಿಸುವ ಎಷ್ಟೋ ಸ್ಥಳಗಳಿಗೇ ಅವಕಾಶ ದೊರಕದೆ ಹೋಗಬಹುದು. ಅಂತಹ ಸಂದರ್ಭಗಳನ್ನು ಗುರುತಿಸುವ ಓದುಗರು, ಲೋಪಗಳನ್ನು ನಮ್ಮ ಗಮನಕ್ಕೆ ತಂದರೆ, ಮುಂದೆ ಅವಕಾಶವಾದಾಗ, ಸರಿಪಡಿಸಲು ಸಾಧ್ಯವಿರುತ್ತದೆ.
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Reviews
Only logged in customers who have purchased this product may leave a review.
Reviews
There are no reviews yet.