Your Cart

Need help? Call +91 9535015489

📖 Print books shipping available only in India. ✈ Flat rate shipping

ಶಬ್ದಾಶಬ್ದ ವಿವೇಕ

Paa Vem Acharya
$1.81

Product details

Author

Paa Vem Acharya

Publisher

VIVIDLIPI

Book Format

Audiobook

Language

Kannada

Category

Articles

Narrator

Gouri Prasanna

ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ. ಈ ಕೃತಿಯನ್ನು ಓದುವ ಯಾರಿಗಾದರೂ “ಅರೆ, ಹೌದಲ್ವಾ? ನಾನು ಈ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದೇನಲ್ಲ… ಮೊದಲೇ ಯಾರಾದರೂ ಈ ವಿಷಯಗಳನ್ನು ಇಷ್ಟು ಸರಳವಾಗಿ ತಿಳಿಸಿದ್ದರೆ ಎಷ್ಟು ಚೆಂದವಿರುತ್ತಿತ್ತು” ಎಂದು ಅನ್ನಿಸದೇ ಇರದು! ಒಟ್ಟಾರೆ, ತಮ್ಮ ಅನನ್ಯ ಕಥನಶೈಲಿಯಿಂದ ಓದುಗರೆಲ್ಲರನ್ನೂ ಚಿಂತನೆಗೊಡ್ಡಿ ರಂಜಿಸುತ್ತಾರೆ. ಒಂದು ಪದ ಬಳಕೆಯ, ಒಂದು ಶಬ್ದಪ್ರಯೋಗದ ಹಿಂದೆ ಇರಬೇಕಾದ ವಿವೇಕವನ್ನು, ಈ ಕೃತಿಯ ಪುಟಪುಟಗಳಲ್ಲಿಯೂ ಆಚಾರ್ಯರು ಅನೇಕ ದೃಷ್ಟಾಂತಗಳನ್ನು, ನಿದರ್ಶನಗಳನ್ನೂ ಬಳಸಿ ಓದುಗರ “ಪದಾರ್ಥದರಿವನ್ನು” ಸಮೃದ್ಧಗೊಳಿಸುತ್ತಾರೆ. ಈ ಕೃತಿಯಲ್ಲಿ ಬರುವ ಸರಿಸುಮಾರು ನಲವತ್ತು ವಿಭಿನ್ನ ಸಮಾನಾರ್ಥಕ ಪದಸಮುಚ್ಛಯಗಳಲ್ಲಿರುವ ಸೂಕ್ಷ್ಮವಾದ ಅಂತರವನ್ನು ಅರಿತುಕೊಂಡರೆ, ನಮ್ಮೆಲ್ಲರ “ಗದ್ಯವೂ ಕೂಡ ಪದ್ಯವಾಗುವುದರಲ್ಲಿ, ಪದ್ಯ ಹೃದ್ಯವಾಗುವುದರಲ್ಲಿ” ಯಾವ ಅತಿಶಯೋಕ್ತಿಯೂ ಇರದು.
-ಸತ್ಯೇಶ್ ಎನ್. ಬೆಳ್ಳೂರ್