Your Cart

Need help? Call +91 9535015489

📖 Print books shipping available only in India. ✈ Flat rate shipping

ಸೃಜನಶೀಲ ಶಿಕ್ಷಣ

Mahabaleshwar Rao
$1.09

Product details

Category

Articles

Author

Mahabaleshwar Rao

Publisher

Nava Karnataka

Book Format

Printbook

Pages

136

Language

Kannada

Year Published

2021

ಸೃಜನಶೀಲ ಶಿಕ್ಷಣ

ಸೃಜನಶೀಲತೆ ಎಂಬ ವಿಸ್ಮಯವೊಂದನ್ನು ಹಲವು ಹತ್ತು ದಿಕ್ಕುಗಳ ಲ್ಲಿ ಹರಿದಾಡಿಸಿ ಅದರ ಎಲ್ಲ ಮಗ್ಗಲುಗಳನ್ನೂ ಬೆನ್ನ‍ಟ್ಟಿ ತೆರೆದು ತೋರಿಸಲಾಗಿದೆ. ಸೃಜಿಸುವುದು ಎಂಬ ಅದ್ಭುತ ಪ್ರತಿಭೆ ಎಲ್ಲರಲ್ಲೂ ಸುಪ್ತವಾಗಿದ್ದು ಎಳೆಯ ವಯಸ್ಸಿನಲ್ಲಿ ಅದು ವಿಕಸಿತವಾಗುವ ಸಂದರ್ಭವನ್ನು ದಮನಿಸದೇ ಇದ್ದರೆ ಸಂಪೂರ್ಣವಾಗಿ ಅರಳುವುದು ನಿಶ್ಚತವೆಂದು ಲೇಖ ಕರ ವಾದ. ಅಲ್ಲದೆ ನಮ್ಮ ಸಾಮಾಜಿಕ ಪರಿಸರ, ಶಾಲೆಯ ಉಸಿರು ಕ‍ಟ್ಟಿಸುವ ಪಠ್ಯ ವ್ಯವಸ್ಥೆ, ಜಡ್ಡು ಕಟ್ಟಿದ ನಿರ್ಧಾರಿತ ವಿದ್ಯಾಭ್ಯಾಸದ ಮುಂದುವರಿಕೆ, ಸ್ವಾತಂತ್ರ್ಯವಿಲ್ಲದ ಯುವ  ಪ್ರತಿಭೆಗಳು ಮತ್ತು ಈಗಾಗಲೇ ಸ್ಥಾಪಿತ ಮೌಲ್ಯಗಳಿಗೆ ಜೋತು ಬೀಳಬೇಕಾದ ಅನಿವಾರ್ಯತೆ ಇಂಥ ಹತ್ತು ಹಲವು ವಿಷಯಗಳನ್ನು ವಿಶದವಾಗಿ ತೆರೆದಿಡಲಾಗಿದೆ. ನಮ್ಮಲ್ಲಿ  ಶಿಕ್ಷಣವೆಂಬುದು ನೊಗಕ್ಕೆ ಕ‍ಟ್ಟಿದ ಜೋಡೆತ್ತುಗಳಂತೆ, ಹೀಗೇ ಸಾಗಬೇಕೆಂಬ ಮತ್ತು ಇಂಥ ಪ್ರಶ್ನೆಗೆ ಇಂಥದೇ ಉತ್ತರವೆಂಬ, ಯೋಚಿಸಿ ಒಂದಕ್ಷರವೂ ಮಾತನಾಡಬಾರದೆಂಬ ಶಿಸ್ತಿಗೆ ಒಳಪಟ್ಟು ಅವನತಿಯತ್ತ ಸಾಗಿರುವುದು ಇಲ್ಲಿನ ಲೇಖನಗಳಿಂದ ಮನನವಾಗುತ್ತದೆ.