Your Cart

Need help? Call +91 9535015489

📖 Print books shipping available only in India. ✈ Flat rate shipping

ಟೂರಿಂಗ್ ಟಾಕೀಸ್

Jayant Kaikini
$3.08

Product details

Category

Essays

Author

Jayant Kaikini

Publisher

Manohara Granthamala

Language

Kannada

ISBN

978-93-81822-19-7 

Book Format

Printbook

ಅಂಗಳದ ಬಿಸಿಲಿಗೆ ಕನ್ನಡಿ ಹಿಡಿದು ಒಳಕೋಣೆಗೆ ಪ್ರತಿಫಲಿಸಿ, ನಡುವೆ ಎವರೆಡಿ ಬ್ಯಾಟರಿಯ ಖಾಲಿ ರಟ್ಟಿನ ಬಾಕ್ಸಿಗೆ ರಾಹುಗನ್ನಡಿಯನ್ನು ಮತ್ತು ಪುಟ್ಟ ಅಮೂಲ್ಯ ಫಿಲ್ಮಿನ ಚೂರನ್ನು ಸಿಗಿಸಿದ್ದೇ ಝಗ್ಗೆಂದು ಗೋಡೆಯ ಮೇಲೆ ಬಿದ್ದ ಬಿಂಬವನ್ನು ಕಂಡಾಗ ಹುಟ್ಟಿದ ಆ ರೋಮಾಂಚಕ ವಿಲಕ್ಷಣ ಮಾಯಾಲೋಕ ಇಂದಿಗೂ ಅದೇ ವಿಸ್ಮಯವನ್ನು ಬೆಳೆಸುತ್ತಲೇ ಬಂದಿದೆ.
ನೆರಳು ಬೆಳಕಿನ ಈ ಮಿಶ್ರಮಾಧುರ್ಯಕ್ಕೆ ‘ಕಸ್ತೂರಿ ನಿವಾಸ’ದ ಪಾರಿವಾಳದ ಪಟಪಟ ಸದ್ದಿದೆ… ಗೈಡ್’ನ ಚಲಿಸುವ ಟ್ರಕ್ಕಿನ ಹಿಂಭಾಗದಲ್ಲಿ ಹುಲ್ಲಿನ ರಾಶಿಯ ಮೇಲೆ ಹೊಮ್ಮಿದ ಆಜ್ ಫಿರ್ ಜೀನೇ ಕಿ ತಮನ್ನಾದ ಮುಕ್ತಗಂಧವಿದೆ… ಟಾಗೋರರ ಒದ್ದೆ ಕಣ್ಣಿನಿಂದ ಸತ್ಯಜಿತ್‌ರೇ ಅವರ ಒದ್ದೆ ಕಣ್ಣಿಗೆ ತೇರ್ಗಡೆ ಹೊಂದಿದ ‘ತೀನ್‌ಕನ್ಯಾ’ದ ಮೃಣ್ಮಯಿಯ ಕುಲುಕುಲು ನಗೆಯಿದೆ… ಚಾಪ್ಲಿನ್‌ನ ಚಟುವಟಿಕೆಯ ಜಂಗಮ ಹೃದಯಂಗಮ ಕರುಣೆ ಇದೆ.