ಹಣಕಾಸು ಸಾಕ್ಷರತೆಯ ಕೈಪಿಡಿ
ಕಷ್ಟಪಟ್ಟು ದುಡಿದು ಗಳಿಸಿದ, ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ, ಸೇವೆಯಿಂದ ನಿವೃತ್ತಿಯಾದಾಗ ಬರುವ ಜೀವಮಾನ ಪರ್ಯಂತ ಉಳಿಸಿದ ಭವಿಷ್ಯ ನಿಧಿಯ ದೊಡ್ಡ ಗಂಟು, ಪಿಂಚಣಿ, ಆಸ್ತಿ-ಪಾಸ್ತಿ ಮಾರಿ ಬಂದ ಹಣದ ಸದ್ಬಳಕೆ – ಹೀಗೆ ಹಣದ ನಿರ್ವಹಣೆ ವಿಷಯದಲ್ಲಿ ಪ್ರತಿಯೊಬ್ಬರಿಗೂ ಬದುಕಿನ ಅನೇಕ ಹಂತಗಳಲ್ಲಿ ಹಲವಾರು ಸಮಸ್ಯೆಗಳು ಧುತ್ತೆಂದು ಎದುರಾಗುತ್ತವೆ. ಇವೆಲ್ಲ ಹಣಕಾಸು ಸಾಕ್ಷರತೆಗೆ ಮತ್ತು ಆರ್ಥಿಕ ಶಿಸ್ತಿಗೆ ಸಂಬಂಧಿಸಿದ ವಿಷಯಗಳು. ಅವಿದ್ಯಾವಂತರು ಬಿಡಿ, ಸುಶಿಕ್ಷಿತರಲ್ಲಿಯೂ ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ. ಇದ್ದರೂ ಅದೊಂದು ಅರೆಬರೆ ಜ್ಞಾನವಷ್ಟೆ. ಆರ್ಥಿಕ ಅಶಿಸ್ತಿನ ಜತೆ ಅಜ್ಞಾನವೂ ಜತೆಗೂಡಿದರೆ ಕೂಡಿಟ್ಟ ಅಷ್ಟಿಷ್ಟು ಹಣವನ್ನೂ ಕಳೆದುಕೊಂಡು ಪರಿತಪಿಸುವ ಅಸಂಖ್ಯ ಜನ ಈಗಲೂ ನಮ್ಮ ಸುತ್ತಮುತ್ತ ಇದ್ದಾರೆ. ಸುಲಭವಾಗಿ ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಣದ ನಿರ್ವಹಣೆಯಲ್ಲಿ ಇಂತಹ ಅರೆಬರೆ ಬೆಂದವರನ್ನು ಮತ್ತು ಯಾರೊಬ್ಬರ ನಯವಂಚನೆಯ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳಬಾರದು ಎಂದು ದೃಢ ನಿಶ್ಚಯ ಮಾಡಿದವರನ್ನು ಈ ಕೃತಿಯು ಸರಿಯಾದ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಲಿದೆ.

Additional information

Author

Publisher

Book Format

Ebook

Language

Kannada

Pages

108

Year Published

2019

Category

ISBN

978-81-930675-0-5

Reviews

There are no reviews yet.

Only logged in customers who have purchased this product may leave a review.