Your Cart

Need help? Call +91 9535015489

📖 Print books shipping available only in India. ✈ Flat rate shipping

ವಿದೇಶವಾಸಿ

Kiran Upadhyay
$3.54

Product details

Author

Kiran Upadhyay

Publisher

Vishwavani Pustaka

Book Format

Printbook

Language

Kannada

Category

Articles

ವಿದೇಶಿ ನೆಲದಲ್ಲಿದ್ದುಕೊಂಡು ಕನ್ನಡದ ಓದುಗರನ್ನು ಕಣ್ಮುಂದೆ ತಂದುಕೊಂಡು, ಅವರಿಗೆ ವಾರವಾರವೂ ಬರೆಯುವುದು ಸವಾಲಿನ ಕೆಲಸವೇ. ವಿದೇಶಿ ಅನುಭವವನ್ನು ಕನ್ನಡದ ಓದುಗರಿಗೆ ಪ್ರಸ್ತುತವಾಗುವಂತೆ, ವಾಸ್ತವದ ನೆಲೆಯಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ವಿದೇಶಿ ವಿದ್ಯಮಾನಗಳೆಲ್ಲವೂ ಕನ್ನಡಿಗರಿಗೆ ಸಂಬಂಧಪಡುತ್ತವೆ, ಪ್ರಸ್ತುತವಾಗುತ್ತವೆ, ಸಾಮಯಿಕವಾಗುತ್ತವೆ ಎನ್ನಲಾಗುವುದಿಲ್ಲ. ಯಾವ ವಿಷಯವೇ ಆಗಲಿ, ಅದಕ್ಕೊಂದು ಸ್ಥಳೀಯ ಟಚ್ ಕೊಡುವುದು, ಕನ್ನಡದ ಸಂದರ್ಭಕ್ಕೆ ಆಪ್ತವಾಗುವಂತೆ ಮಾಡುವುದು, ಓದುಗರು ವಾರವಾರವೂ ಎದುರು ನೋಡುವಂತೆ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವುದು ಸಾಮಾನ್ಯವಲ್ಲ. ಈ ಕೆಲಸವನ್ನು ‘ವಿಶ್ವವಾಣಿ’ಯಲ್ಲಿ ಅಂಕಣಕಾರ ಕಿರಣ್ ಉಪಾಧ್ಯಾಯ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. ತಾವು ನೋಡಿದ ಸಂಗತಿಗಳನ್ನು ಅಧ್ಯಯನ ಮತ್ತು ಶೋಧನದಿಂದ ವಿಸ್ತರಿಸುವ ವಿದ್ಯಾರ್ಥಿ ಸಂಪನ್ನ ಗುಣ, ಕತೆಗಾರಿಕೆ ಮತ್ತು ಕಲೆಗಾರಿಕೆ ಅವರಿಗೆ ಕರಗತವಾಗಿದೆ.
ಹೀಗಾಗಿ ಅವರು ವಿದೇಶಿ ಅನುಭವವನ್ನು ಕನ್ನಡದ ಸಂದರ್ಭಕ್ಕೆ ಅನ್ವಯವಾಗುವ ಹಾಗೆ ಸಹಜವಾಗಿ ವಿವರಿಸುತ್ತಾರೆ. ಹೀಗಾಗಿ ಇದು ವಿದೇಶಿ ಎಂದೆನಿಸದೇ, ವಿಶಿಷ್ಟ ದೇಸಿಯ ಸೊಬಗನ್ನು ಪಡೆಯುತ್ತವೆ.