ವೃತ್ತಾಂತ
(ಅಂಕಣ ಬರಹಗಳ ಸಂಗ್ರಹ)
ಲೇ: ಮಲ್ಲಿಕಾರ್ಜುನ ಹುಲಗಬಾಳಿ.
ನಮ್ಮ ಪುರಾತನರು ನಮಗೆ ತಲೆಯಲ್ಲಿ ತುಂಬಿದ ಮಾತುಗಳಲ್ಲಿ ಒಂದಾದ ಮಾತೆಂದರೆ ‘ ಯತ್ಸಾರಭೂತಂ ತದುಪಾಸನೀಯಂ’ ಮಾತು. ಅರ್ಥವಿಷ್ಟೆ ಸಾರಭೂತವಾದದ್ದನ್ನ ಸ್ವೀಕರಿಸಿ ಸಾರಹಿತವಾದದ್ದನ್ನು ತ್ಯಜಿಸು ಎಂಬರ್ಥ. ಲೇಖಕ ಮಲ್ಲಿಕಾರ್ಜುನ ಹುಲಗಬಾಳಿಯವರ ಅಂಕಣಗಳನ್ನ ಓದಿದರೆ ನಮ್ಮ ಪುರಾತನರ ಹೇಳಿದ್ದ ಈ ಮಾತು ತಲೆಯಲ್ಲಿ ಮಿಂಚಿನಂತೆ ಹೊಳೆಯುತ್ತದೆ. ಸಮಾಜಕ್ಕೆ ಎಂತಹ ಸಂದೇಶ ಬೇಕು? ಯಾವ ತರಹದ ಬದಲಾವಣೆ ಮತ್ತು ಅನೇಕ ಸಾಧಕರ ಬಗ್ಗೆ ವಿಶೇಷ ಗುಣ ಶೈಲಿಗಳನ್ನು ಅತ್ಯಂತ ಸುಂದರವಾಗಿ ಸರಳವಾಗಿ ಪ್ರತಿಯೊಂದು ಅಂಕಣಗಳಲ್ಲಿ ತಿಳಿಸಿದ್ದಾರೆ.
ರಾಮ ಮನೋಹರ ಲೋಹಿಯಾರವರ ‘ಭಾಷಾ ವಿವಾದದ ಬಗ್ಗೆ ಇಲ್ಲಿ ಚರ್ಚೆಯಿದೆ.ಸಮಾಜ ವ್ಯವಸ್ಥೆಯ ಬಗ್ಗೆ ಎರಡು ಲೇಖನಗಳಲ್ಲಿ ಚರ್ಚಿಸಲಾಗಿದೆ. ಅನೇಕ ಮಹನೀಯರ ವಿಶೇಷತೆಗಳನ್ನು ಮತ್ತು ವಿವಿಧ ಸಾಹಿತಿ, ಲೇಖಕರ ಕಥನಗಳನ್ನ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.
Reviews
There are no reviews yet.