Sale!

ಮೂಕ ಹಕ್ಕಿಯ ಹಾಡು ( Ebook )

$0.88

ಮೂಕ ಹಕ್ಕಿಯ ಹಾಡು
(ಆತ್ಮಕಥನ)

ಕನ್ನಡಕ್ಕೆ
ಡಾ. ಎನ್. ಜಗದೀಶ್ ಕೊಪ್ಪ

ಪಾಕಿಸ್ತಾನದ ಹೆಣ್ಣು ಮಗಳು ಮುಕ್ತರ್ ಮಾಯಿಯ ಆತ್ಮಕಥನ `ಮೂಕ ಹಕ್ಕಿಯ ಹಾಡು’.

ಡಾ. ಎನ್. ಜಗದೀಶ್ ಕೊಪ್ಪ ಅವರು ಆಂಗ್ಲ ಮೂಲದಿಂದ ಅನುವಾದಿಸುವ `ಮೂಕ ಹಕ್ಕಿಯ ಹಾಡ`” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

  • Category: Autobiography
  • Translator: N. Jagadish Koppa
  • Publisher: Manohara Granthamala
  • Language: Kannada
  • Book Format: Ebook

ತನ್ನ ಹಳ್ಳಿಯಲ್ಲಿ ಶಾಲೆ ಆರಂಭಿಸಿದ ಆಕೆ, ಶಾಲೆಗೆ ಸಿಕ್ಕಿದ ಪರಿಹಾರದ ಹಣವನ್ನು ಉಪಯೋಗಿಸುವ ರೀತಿಯಲ್ಲೇ ಅವಳ ದೂರದೃಷ್ಟಿ ಪರಿಚಯವಾಗುತ್ತದೆ. ಯಾವುದೇ ಪದ ವೈಭವಗಳಿಲ್ಲದೆ ತಾನು ಕೊನೆಯಲ್ಲಿ ಸಾಧಿಸಿದ ಎತ್ತರದ ಬಗ್ಗೆ ಅಹಂಕಾರವಿಲ್ಲದ ನಿವೇದನೆಯ ಧಾಟಿಯಲ್ಲಿ ಮುಖ್ತಾರ್ ಮಾಯಿ ಕೊನೆಯ ವರೆಗೂ ಹೇಳುತ್ತಾ ಹೋಗುತ್ತಾಳೆ. ಇಂತಹ ಕೃತಿಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಶೋಷಿತರ ಕೈಗೆ ಓದಲು ಸಿಗುವುದರಿಂದ ಅವರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಊರುಗೋಲಾಗಬಹುದು.

-ಅನುಪಮಾ ಪ್ರಸಾದ್, ಕಥೆಗಾರ್ತಿ, ಕಾಸರಗೂಡು

Reviews

There are no reviews yet.

Only logged in customers who have purchased this product may leave a review.