Your Cart

Need help? Call +91 9535015489

📖 Print books shipping available only in India. ✈ Flat rate shipping

ನನ್ನ ಪುಟ

Rekha Kakhandki
$1.41

Product details

Category

Autobiography

Author

Rekha Kakhandki

Publisher

Manohara Granthamala

Book Format

Printbook

Pages

130

ISBN

978-81-949940-4-6

Language

Kannada

Year Published

2021

”ನನ್ನ ಪುಟ” ಈ ಕೃತಿಯಲ್ಲಿಯೂ ರೇಖಾ ತಮ್ಮ ಬಾಗಿಲುಕೋಟೆಯ ಅಪ್ಪಟವಾದ ನೆನಪುಗಳನ್ನು ಬಿಚ್ಚಿ ಇಟ್ಟಿದ್ದಾರೆ. ಹದಿನೆಂಟು ಭಿನ್ನ ಭಿನ್ನ ನೆನಪುಗಳನ್ನು ಅವರು ಇಲ್ಲಿ ಅತ್ಯಂತ ಆಪ್ತ ಮಾತುಗಳಲ್ಲಿ ಬಿಡಿಸಿಡುತ್ತ ಈ ಇಡೀ ಕೃತಿಯೇ ಹೃದ್ಯ ನೆನಪುಗಳ ಆರ್ದ್ರ ಸಂಕಲನವಾಗುವಂತೆ ಮಾಡಿದ್ದಾರೆ. ಅವರಿಗೆ ಅವರ ನೆಲದ ಭಾಷೆ ಕೂಡ ಎಷ್ಟು ಪ್ರೀತಿಯದು ಎಂದರೆ ಈ ನೆನಪುಗಳಿಗೆ ಒಂದು ಬಗೆಯ ಹಚ್ಚ ಹಸಿರಾದ ಲಲಿತ- ಗದ್ಯದ [ಫಿಕ್ಷನ್] ಶಕ್ತಿ ಬಂದಿದೆ. ಇವುಗಳನ್ನು ಒಂದು ಅನುಭವ ಕಥನದಂತೆಯೂ ಓದಿಕೊಳ್ಳಬಹುದು. ಅಥವಾ ಒಂದು ಕನ್ನಡದ ಕತೆಗಳ ಮಾಲೆ ಎಂದೂ ಓದಿಕೊಳ್ಳಬಹುದು.

ಈ “ನನ್ನ ಪುಟ” ಎಂಬ ಕೃತಿಯಲ್ಲಿ  ಲೇಖಕರು  ತಾವು ಬಾಲ್ಯದಲ್ಲಿ ಬಾಗಿಲುಕೋಟೆಯ ತಮ್ಮ ಮನೆ, ಓಣಿ, ಗಲ್ಲಿಗಳಲ್ಲಿ ಕಂಡ ಅನೇಕ ಮನುಷ್ಯರು, ಅಲ್ಲಿ ಅವರು ಕಂಡ ಅನೇಕ ದೃಶ್ಯಗಳು, ಚಿತ್ರಗಳು ಇಲ್ಲಿ ವರ್ಣಿತವಾಗಿವೆ. ಈ ಅನುಭವದ ದೃಶ್ಯಗಳು ಎಷ್ಟು ಮಾರ್ಮಿಕವಾಗಿ ಚಿತ್ರಿತವಾಗಿವೆ ಎಂದರೆ, ಓದುಗನನ್ನು ಅವು ಸೆಳೆದುಕೊಂಡು ಹೋಗಿ ಪೂರ್ತಿ ಮೀಯಿಸುತ್ತವೆ. ರೇಖಾ ಅವರಿಗೆ ಆ ಪ್ರದೇಶದ ಭಾಷೆ ಎಷ್ಟು ಆತ್ಮೀಯವಾಗಿ ಒಳಗೆ ಇಳಿದು ಬಿಟ್ಟಿದೆ ಎಂದರೆ ಅಲ್ಲಿನ ಅವರ ಎಲ್ಲ ನಿರೂಪಿತ ದೃಶ್ಯಗಳೂ ಅತ್ಯಂತ ಜೀವಂತವಾಗಿ ಕಣ್ಣಿಗೆ ಕಟ್ಟಿ, ಓಹ್ ಒಂದು ಕಾಲದ, ಒಂದು ಪ್ರದೇಶದ ಬದುಕು ಹೀಗೂ ಇತ್ತೇ ಎಂದು ಅಚ್ಚರಿ ಮೂಡಿಸುತ್ತದೆ.