Sale!

ಅದ್ಭುತ IPS ( Printbook )

Amaregowda Gonawar
$1.85

ಅದ್ಭುತ IPS:

ದೊರದಿಂದಲೇ ಆದರೂ ಒಳ್ಳೆಯ ಭಾವಗಳ ಮಾತ್ರ ನಮ್ಮನ್ನು ಸ್ಪರ್ಶಿಸಬೇಕು. ಆಳ ಅರಿವಾದರೆ ಮಾತ್ರ ತಾನೇ ಎತರವೂ ಅರಿವಾಗುವದು. ಅಂತಹ ಆಳ ಮತ್ತು ಎತ್ತರದ ಹುಡುಕಾಟದಲ್ಲಿದ್ದ ನಾನು ೧೯೮೨ ಫೆಬ್ರವರಿ ೨೬ ರಂದು ಪೊಲೀಸ್ ವೃತ್ತಿಗೆ ಕಾಲಿಟ್ಟ ಅವಿಸ್ಮರಣೀಯ ದಿನ. ಅಂದು ನನ್ನನ್ನು ಸ್ಪರ್ಶಿಸಿದ ಒಳ್ಳೆಯ ಭಾವಗಳು ನನ್ನ ವೃತ್ತಿ ಜೀವನದಲ್ಲಿ ಮಾತ್ರವಲ್ಲದೆ ನನ್ನ ಖಾಸಗಿ ಬದುಕಲ್ಲಿ ಇಂದಿಗೂ ಸ್ಪರ್ಶಿಸುತ್ತಲೇ ಇವೆ. ಅಂತಹ ಉತ್ತಮ ಭಾವಗಳನ್ನು ಬಿತ್ತಿ ಉತ್ತುತ್ತಲೇ ಇರುವವರು ಶ್ರೀ ಎಸ್ ಎಸ್ ಹಸಬಿ ಅವರು. ಅವರಿಗೆ ಶರಣು ಶರಣಾರ್ಥಿ…!

-ಗೋಪಾಲ್ ಹೊಸೂರ್

ಶ್ರೀ ಎಸ್.ಎಸ್. ಹಸಬಿಯವರು ಕರ್ನಾಟಕ ರಾಜ್ಯ ಕಂಡ ಅತ್ಯಂತ ಸಜ್ಜನ, ಮತ್ತು ದಕ್ಷ ಅಧಿಕಾರಿಗಳು. ವ್ಯೆಯಕ್ತಿಕವಾಗಿ ನನಗೆ ಅವರನ್ನು ನನ್ನ ಬಾಲ್ಯದಿಂದಲೂ ಅತಿ ಸನಿಹದಿಂದ ನೋಡುವ ಅವಕಾಶ ದೊರೆತಿದ್ದು ನನ್ನ ಪುಣ್ಯವೇ ಎಂದು ಭಾವಿಸುತ್ತೇನೆ. ಶ್ರೀ ಹಸಬಿಯವರು ವಿಜಯಪುರ ಜಿಲ್ಲೆಯಲ್ಲಿದ್ದಾಗ ತಮ್ಮ ತನಿಖಾ ಚಾಣಾಕ್ಷತೆಯನ್ನು ಮೆರಿದು ಪತ್ತೆ ಮಾಡಿದ್ದ ಹಲವಾರು ಕೊಲೆ, ಲೂಟಿ, ದರೋಡೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಬಹಳ ಅಭಿಮಾನದಿಂದ ಕಥೆ ಮಾಡಿ ಹೇಳುತ್ತಿದ್ದರು. ನನಗೆ ಈ ಕಥೆಗಳನ್ನು ಕೇಳುವುದೇ ಒಂದು ಸಂತೋಷದ ವಿಷಯವಾಗಿತ್ತು. ನಂತರ ಶ್ರೀ ಹಸಬಿಯವರು ಬೆಂಗಳೂರುನಲ್ಲಿ ಪೊಲೀಸ್ ಅಧಿಕಾರಿಯಾಗಿ ಗಳಿಸಿದ ಒಳ್ಳೆಯ ಹೆಸರು, ಅವರ ಕರ್ತವ್ಯ ನಿಷ್ಟೆಯ ಬಗ್ಗೆ ಆಗಾಗ ಪೊಲೀಸ್ ಅಧಿಕಾರಿಗಳಿಂದ ಕೇಳಿ ಸಂತೋಷ ಪಡುತ್ತಿದ್ದೆ. ಪೊಲೀಸ್ ಅಧಿಕಾರಿ ಎಂದರೆ ಶ್ರೀ ಎಸ್.ಎಸ್. ಹಸಬಿಯವರ ಹಾಗೆ ಇರಬೇಕು ಎಂಬ ಭಾವ ನನ್ನಲಿ ಮೂಡಿತ್ತು.

-ಶಂಕರ ಬಿದರಿ

  • Book Format: Printbook
  • Author: Amaregowda Gonawar
  • Category: Biography
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.