Ebook

ಅನುದಿನ-ಅನುಕ್ಷಣ

Author: Jeevan Madane

$0.72

ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳೆಸುವವರೇ ನಮ್ಮ ಹೆಣ್ಣು ಮಕ್ಕಳು. ಹಾಗಾಗಿ, ಈ ಪುಸ್ತಕವನ್ನು ಓದಿದ ಎಳೆ ವಯಸ್ಸಿನ ಹೆಣ್ಣು ಮಕ್ಕಳು, ಶೋಭಾಳಂತೆ, ಅವರವರ ಮನೆ ಮನಗಳ ಬೆಳಕಾಗಿ ಬಾಳಿ ಬದುಕಿದರೆ ಶೋಭಾಳ ಆತ್ಮಕ್ಕೂ ಶಾಂತಿ.

-ಜೀವನ್ ಮದನೆ

ಈ ಭೂಮಿ ಮೇಲೆ ಕೋಟ್ಯಂತರ ಜನ ಹುಟ್ಟಿದರು, ಬದುಕಿ ಬಾಳಿದರು, ಅಳಿದುಹೋದರು. ಹಾಗೆ ಬದುಕಿ ಬಾಳಿದವರಲ್ಲಿ ಕೆಲವರು, ಅವರೊಡನೆ ಇದ್ದವರಿಗೆ ಪ್ರಿಯರಾದರೆ, ಕೆಲವರು ಅಪ್ರಿಯರೂ ಆಗಿದ್ದಿರಬಹುದು. ಇನ್ನೂ ಕೆಲವರು ಪ್ರಪಂಚಕ್ಕೆಲ್ಲ ಪ್ರಿಯರಾದರೆ, ಮತ್ತೂ ಕೆಲವರು ಮಾರಕವೂ ಆಗಿದ್ದಿರಬಹುದು. ಆದರೆ, ಬದುಕಿ, ಬಾಳಿ, ಅಳಿದ ಮೇಲೆ ತಮ್ಮ ಸುತ್ತಮುತ್ತಲಿದ್ದ ಸ್ವಲ್ಪ ಜನಕ್ಕಾದರೂ ಒಂದು ಮಾದರಿಯಾಗಿ ಬಾಳಿದರೆ ಅವರು ಹುಟ್ಟಿ, ಬದುಕಿದುದಕ್ಕೂ ಸಾರ್ಥಕ. ‘ಹೀಗೆ ಒಬ್ಬರಿದ್ದರು. ಅವರು ಕಷ್ಟಗಳಿಗೆ ಕುಗ್ಗದೆ, ಸುಖಗಳಿಗೆ ಹಿಗ್ಗದೆ, ಎರಡನ್ನೂ ಸಮವಾಗಿ ನೋಡುತ್ತ, ತನ್ನನ್ನು ನಂಬಿದವರಿಗೆ ಮಾರ್ಗದರ್ಶಿಯಾಗಿ, ಕಷ್ಟದಲ್ಲಿರುವವರಿಗೆ ಆಶ್ರಯ ನೀಡುವ ಆಲದ ಮರವಾಗಿ, ಯಾಚಿಸಿ ಬಂದವರಿಗೆ ಕಾಮಧೇನುವಾಗಿ, ‘ಬದುಕಿದರೆ ಹೀಗೆ ಬದುಕಬೇಕು’ ಎನ್ನುವ ಹಂಬಲವನ್ನು ಮುಂದಿನ ಪೀಳಿಗೆಯವರ ಮನದಲ್ಲಿ ಮೂಡಿಸುವ ಹಾಗೆಬದುಕಿದರು’ ಎಂದು ನೆನಪಿಸಿಕೊಳ್ಳಬೇಕು. ಇಂತಹವರು ಎಂದಿಗೂ ಅಜರಾಮರರಾಗಿ ಉಳಿಯುತ್ತಾರೆ. ಇಂತಹವರಲ್ಲಿ ಒಬ್ಬರು ಶ್ರೀಮತಿ ಶೋಭಾ.

-ಜೀವನ್ ಮದನೆ

Additional information

Author

Publisher

Book Format

Ebook

Language

Kannada

Category

Pages

77

ISBN

978-93-83727-06-3

Year Published

2015

Reviews

There are no reviews yet.

Only logged in customers who have purchased this product may leave a review.