
ಬಸವಣ್ಣ
Sooryakant Sonnad$0.36 $0.33
Product details
Author | Sooryakant Sonnad |
---|---|
Publisher | Nava Karnataka |
Book Format | Printbook |
Language | Kannada |
Pages | 48 |
Category | Biography |
ಬಸವಣ್ಣ ಮಹಾನ್ ಮಾನವತಾವಾದಿ. ಮಾನವೀಯತೆಯ ಸಾಕಾರ ಮೂರ್ತಿ. ಸಾಮಾಜಿಕ ಕ್ರಾಂತಿಕಾರಿ. ಸಮಾಜೋದ್ಧಾರಕ. ಸಮಾನತೆಯ ಹರಿಕಾರ. ಸಮಾಜದ ಕತ್ತಲೆಯನ್ನು ಕಳೆದ ಜಗಜ್ಯೋತಿ. ಭಕ್ತಿಭಂಡಾರಿ ಬಸವಣ್ಣನವರು ತಮ್ಮ ಸಮಕಾಲೀನ ಸಮಾಜದಲ್ಲಿ ಒಂದು ಮುಖ್ಯವಾದ ವೈರುಧ್ಯವನ್ನು ಕಂಡರು. ಬ್ರಾಹ್ಮಣ ಓದಿ ಬರೆದರೂ ಹೊಲದಲ್ಲಿ ದುಡಿಯುತ್ತಿರಲಿಲ್ಲ. ಕ್ಷತ್ರಿಯನು ಯುದ್ಧದಲ್ಲಿ ಭಾಗವಹಿಸಿದರೂ ಗದ್ದೆಗೆ ನೀರನ್ನು ಹಾಯಿಸುತ್ತಿರಲಿಲ್ಲ. ವೈಶ್ಯನು ವ್ಯಾಪಾರ ವಹಿವಾಟನ್ನು ನಡೆಸಿದರೂ ಬಿತ್ತುತ್ತಿರಲಿಲ್ಲ. ಎಲ್ಲ ಕೆಲಸವನ್ನು ಮಾಡುತ್ತಿದ್ದವರು ಕಾಯಕಜೀವಿಗಳಾಗಿದ್ದ ರೈತಾಪಿ ಜನ! ಬಿಸಿಲು, ಮಳೆ ಗಾಳಿಯೆನ್ನದೆ ದುಡಿಯುವ ರೈತನ ದುಡಿಮೆಯನ್ನು ಈ ಮೂರೂ ವರ್ಗದವರು ಕೂತು ತಿನ್ನುತ್ತಿದ್ದರು. ಇದನ್ನು ಕಂಡು ಬಸವಣ್ಣನವರಿಗೆ ಬೇಸರವಾಯಿತು. ರೈತರನ್ನು, ಮಹಿಳೆಯರನ್ನು ಹಾಗೂ ಪಂಚಮರನ್ನು ಸಮಕಾಲೀನ ಸಮಾಜದಲ್ಲಿ ಸಮಾನತೆಯಿಂದ ಬೆರೆಯುವಂತೆ ಮಾಡಲು ಪಣತೊಟ್ಟರು. ಅವರಿಗೆಲ್ಲ ಮೊದಲು ಶಿಕ್ಷಣವನ್ನು ನೀಡಿದರು. ಅನುಭವಮಂಟಪದಲ್ಲಿ ಎಲ್ಲರಿಗೂ ಸಮಾನ ಸ್ಥಾನ, ಅವಕಾಶಗಳನ್ನು ಕಲ್ಪಿಸಿದರು. ಮೊದಲ ಬಾರಿಗೆ ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಜಾತಿಯನ್ನು ಮೀರಿ ಒಂದು ವರ್ಗವಾದದ್ದು ಐತಿಹಾಸಿಕ ದಾಖಲೆಯಾಗಿದೆ.
Customers also liked...
-
J. Premanand
$0.91$0.54 -
Kannada Sangha Kantavar
$0.40$0.19 -
Kannada Sangha Kantavar
$0.40$0.19 -
Chennaveera Kanavi
$1.45$0.87 -
Preethi Nagaraj
$3.02$1.81 -
Ravindra Koppar
$0.30$0.18