ದಯಾನಂದ ಸರಸ್ವತಿ(೧೮೨೪-೧೮೮೩)ಯವರು ಭಾರತ ದೇಶವು ಕಂಡಂತಹ ಮಹಾನ್ ಸುಧಾರಕರಲ್ಲಿ ಪ್ರಮುಖರು. ಭಾರತದಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿದವರು. ದಯಾನಂದ ಸರಸ್ವತಿಯವರು ಆರ್ಯಸಮಾಜವನ್ನು ಸ್ಥಾಪಿಸಬೇಕಾಯಿತು ಎಂದರೆ, ಅಂದು ಅವರು ಅನಾರ್ಯ ಸಮಾಜದ ನಡುವೆಯೇ ಬದುಕಿದ್ದಿರಬೇಕು. ಆರ್ಯ-ಅನಾರ್ಯ ಎನ್ನುವ ಶಬ್ದಗಳ ನಡುವೆ ವ್ಯತ್ಯಾಸವಿದೆ. ಆರ್ಯ ಎಂದರೆ ನಾಗರಿಕ, ಸಂಸ್ಕೃತವಂತ, ಗಣ್ಯ ಎಂದೆಲ್ಲ ಅರ್ಥವಿದೆ. ಅನಾರ್ಯ ಎಂದರೆ ಈ ಯಾವ ಲಕ್ಷಣಗಳೂ ಇಲ್ಲದಂತಹ ವ್ಯಕ್ತಿ. ನಮ್ಮ ನಂಬಿಕೆಯ ಅನ್ವಯ ಉತ್ತರಭಾರತದಲ್ಲಿ ಇರುವವರು ಹೆಚ್ಚಿನವರು ಆರ್ಯರು ಹಾಗೂ ದಕ್ಷಿಣ ಭಾರತದಲ್ಲಿ ದ್ರಾವಿಡರು. ಆರ್ಯಎನ್ನುವುದು ಜನಾಂಗ ಸೂಚಕವಾಗಿರುವಂತೆಯೇ ವ್ಯಕ್ತಿಯ ಗುಣಲಕ್ಷಣಗಳನ್ನು ವರ್ಣಿಸುವ ಶಬ್ದವೂ ಆಗಿದೆ. ಈ ಎರಡೂ ಅರ್ಥದಲ್ಲಿ ಆರ್ಯ ಶಬ್ದವನ್ನು ಬಳಸುತ್ತಾ ಬಂದಿರುವುದನ್ನು ನಾವು ನೋಡಬಹುದು. ಆರ್ಯ ಜನಾಂಗಕ್ಕೆ ಸೇರಿದ ವ್ಯಕ್ತಿಗಳೆಲ್ಲ ಆರ್ಯರಲ್ಲ. ಆರ್ಯರು ಎಂದು ಕರೆದುಕೊಳ್ಳುವ ಜನರ ನಡುವೆ ಅನಾರ್ಯ ಪದ್ಧತಿಗಳು ಹೇರಳವಾಗಿದ್ದವು. ಆರ್ಯರು ಎಂದು ಕರೆಸಿಕೊಳ್ಳುವ ಜನರು ವೇದಗಳಲ್ಲಿ ನಂಬಿಕೆಯನ್ನು ಇಟ್ಟವರು. ಗ್ರೀಕರು ಭಾರತದಲ್ಲಿದ್ದ ಆರ್ಯರನ್ನು ಹಿಂದುಗಳೆಂದು ಕರೆದರು. ವೇದಗಳ ಕಾಲ ಬಹುಶಃ ಮಾನವನ ಆದಿಮ ಸಮಾಜಗಳಲ್ಲಿ ಒಂದು. ಹಾಗಾಗಿ ವೇದ ಮಂತ್ರಗಳಲ್ಲಿ ಸಾಮುದಾಯಿಕ ಹಿತವನ್ನು ಕಾಣಬಹುದು. ವೇದಗಳ ನಂತರ ಬಂದ ಉಪನಿಷತ್ಕಾಲದಲ್ಲಿ ವರ್ಣವ್ಯವಸ್ಥೆಯು ಬೇರು ಬಿಡಲಾರಂಭಿಸಿ, ಪುರಾಣಗಳ ಹೊತ್ತಿಗೆ ಎಲ್ಲ ಅನಿಷ್ಟಗಳು ಹಿಂದು ಧರ್ಮದಲ್ಲಿ ಬೀಡು ಬಿಟ್ಟವು. ಮೊದಲಿಗೆ ವರ್ಣ ವ್ಯವಸ್ಥೆಯು, ಆಯಾ ಮನುಷ್ಯನ ಜನ್ಮದತ್ತ ಪ್ರತಿಭೆಯ ಸೂಚಕವಾಗಿ ಬಳಕೆಗೆ ಬಂದಿರಬೇಕು. ವೇದಗಳ ಕಾಲದ ಮಂತ್ರವನ್ನು ಗಮನಿಸಿದರೆ, ಒಂದು ಮನೆಯಲ್ಲಿ ಎಲ್ಲ ರೀತಿಯ ಉದ್ಯೋಗಗಳನ್ನು ಮಾಡುವ ಜನರು ಒಂದೇ ಮನೆಯಲ್ಲಿ ವಾಸವಾಗಿರುತ್ತಿದ್ದರು. ತಂದೆಯು ಪಾಠ ಹೇಳಿದರೆ, ಮಗನು ಯೋಧನಾಗಿದ್ದರೆ, ತಾಯಿಯು ಹಿಟ್ಟನ್ನು ಬೀಸುತ್ತಿದ್ದಳು. ತಮಗೆ ಇಷ್ಟ ಬಂದ ವೃತ್ತಿಯಲ್ಲಿ ತೊಡಗಲು ಮುಕ್ತ ಅವಕಾಶವಿತ್ತು. ಒಬ್ಬ ವ್ಯಕ್ತಿಯು ಮಾಡುವ ಉದ್ಯೋಗವೇ ಅವನ ಜಾತಿ ಸೂಚಕವಾಗಿ ಬೆಳೆದದ್ದು ದುರಂತ. ವೇದಗಳ ಕಾಲದಲ್ಲಿ ಅಮೂರ್ತನಾಗಿದ್ದ ದೇವರು, ಪುರಾಣಗಳ ಕಾಲದಲ್ಲಿ ಮೂರ್ತಿಯಲ್ಲಿ ಬಂಧಿತನಾದ. ಇದರೊಡನೆ ದೇವಾಲಯಗಳ ನಿರ್ಮಾಣವಾಯಿತು. ವ್ಯವಸ್ಥಿತ ಶೋಷಣೆಯು ಅವ್ಯಾಹತವಾಯಿತು.

Additional information

Category

Author

Publisher

Book Format

Ebook

Pages

48

Language

Kannada

Reviews

There are no reviews yet.

Only logged in customers who have purchased this product may leave a review.