Sale!

ಫ್ರೆಡರಿಕ್ ಏಂಗೆಲ್ಸ್ ( Ebook )

Ramkrishna.G
$1.48

  • Category: Biography
  • Author: Ramkrishna.G
  • Book Format: Ebook
  • Pages: 144
  • Language: Kannada

ಏಂಗೆಲ್ಸ್ ಅವರ ಜನ್ಮದಿನದ ದ್ವಿಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಅಗತ್ಯ. ಅದು ಇಂದಿಗೂ ಪ್ರಸ್ತುತವಾಗಿರುವ ಅವರ ಕೃತಿಗಳ ಅಧ್ಯಯನ, ಪ್ರಸಾರ ಮತ್ತು ಸಮಕಾಲೀನ ವಿದ್ಯಮಾನಗಳಿಗೆ ಅವುಗಳ ಅನ್ವಯಗಳನ್ನು ಒಳಗೊಂಡಿರಬೇಕು. ಅವರ ಹೆಚ್ಚಿನ ಕೃತಿಗಳು ಕನ್ನಡದಲ್ಲಿ ಲಭ್ಯವಿಲ್ಲದಿರುವುದರಿಂದ ಮಾರ್ಕ್ಸ್‌ವಾದದ ಲೋಕದೃಷ್ಟಿಯ ಆಧಾರಸ್ತಂಭಗಳು ಎನಿಸಿಕೊಂಡಿರುವ ಅವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುವ ಕಾರ್ಯ ಆದ್ಯತೆಯದ್ದಾಗಿರುತ್ತದೆ. ಈ ಕೆಲಸವನ್ನು ನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಾದ (ಈ ಹಿಂದೆ ‘ಮಾರ್ಕ್ಸ್‌ 200-ಕ್ಯಾಪಿಟಲ್ 150’ ಯೋಜನೆಯನ್ನು ಸಫಲವಾಗಿ ಪೂರ್ಣಗೊಳಿಸಿದ) ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಜಂಟಿಯಾಗಿ ಯೋಜಿಸಿವೆ. ಈಗ ಯೋಜಿಸಲಾಗಿರುವ “ಏಂಗೆಲ್ಸ್-200” ಮಾಲಿಕೆಯಲ್ಲಿ ಅವರ ಕೆಲವು ಪ್ರಮುಖ ಕೃತಿಗಳಲ್ಲದೆ ಅವರ ಬದುಕು-ಬರಹಗಳ ಪರಿಚಯ ಮಾಡಿಕೊಡುವ ಜೀವನಚಿತ್ರಣದ ಪುಸ್ತಕವೂ ಇರುತ್ತದೆ.

ಈ ಮಾಲಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ಕೃತಿಗೂ ಒಂದು ಪ್ರವೇಶಿಕೆ ಇರುತ್ತದೆ. ಕೃತಿಯನ್ನು ಅರ್ಥಮಾಡಿಕೊಳ್ಳಲು ಬೇಕಾಗುವ – ಹಿನ್ನೆಲೆ, ಕೃತಿಯ ಇಂದಿನ ಪ್ರಸ್ತುತತೆ, ಕೃತಿಯ ಸಾರಾಂಶ, ಕೃತಿಯ ಬಗ್ಗೆ ನಂತರದ ಕಾಲದಲ್ಲಿ ಹುಟ್ಟಿದ ಚರ್ಚೆ-ವಿವಾದಗಳು – ಇವನ್ನು ಪ್ರವೇಶಿಕೆಯು ಒಳಗೊಂಡಿರುತ್ತದೆ.

Reviews

There are no reviews yet.

Only logged in customers who have purchased this product may leave a review.