Your Cart

Need help? Call +91 9535015489

📖 Print books shipping available only in India. ✈ Flat rate shipping

ಫ್ರೆಡರಿಕ್ ನೀಷೆ

T.N.Vasudev Murty
$2.32

Product details

Category

Biography

Author

T.N.Vasudev Murty

Publisher

Vamshi Publications

Book Format

Ebook

ಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ್ರ ವಿರೋಧಾಭಾಸಗಳಿಂದ ಕೂಡಿದೆ. ಚರ್ಚಿನ ಪಾದ್ರಿಗಳ ವಂಶದಲ್ಲಿ ಜನಿಸಿದ ಈ ವ್ಯಕ್ತಿ ದೇವರ ಸಾವನ್ನು ಘೋಷಿಸಿದ. ಸತ್ಯ ಮತ್ತು ಸ್ವಾತಂತ್ರ್ಯಗಳನ್ನು ಆರಾಧಿಸಿದ ಒಬ್ಬ ತತ್ವಜ್ಞಾನಿ ನಾಜೀವಾದದ ಹರಿಕಾರನೆನಿಸಿದ (ಇದಕ್ಕೆ ಅವನ ತಂಗಿಗೆ ಧನ್ಯವಾದ ಹೇಳಬೇಕು!). ‘ಹೊಸ ಮನುಷ್ಯ’ನ
ಅವತರಣವನ್ನು ಸಾರಿದ ಪ್ರವಾದಿ ಕೊನೆಗೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ಬದುಕಿನ ಕೊನೆಯ ದಿನಗಳನ್ನು ಕತ್ತಲೆಯಲ್ಲಿ ಕಳೆದ. ಆಧುನಿಕ ಪಾಶ್ಚಿಮಾತ್ಯ ಚಿಂತನೆಯ ಪಿತಾಮಹನಾದ ಫ್ರೆಡರಿಕ್ ನೀಷೆಯ ಪ್ರತಿಭೆ ಏಕಮುಖಿಯಾದದ್ದಲ್ಲ. ಅವನ ಬರವಣಿಗೆಗಳನ್ನು ಪರಿಶೀಲಿಸಿದರೆ ಆತ ಬರೀ ಬುದ್ಧಿಜೀವಿ ಮಾತ್ರವಲ್ಲ; ಒಬ್ಬ ಸ್ವತಂತ್ರ ಚಿಂತಕ, ನೈತಿಕವಾದಿ, ವಿಜ್ಞಾನಿ, ವಿಜ್ಞಾನ ವಿರೋಧಿ, ಧಾರ್ಮಿಕ ವ್ಯಕ್ತಿ, ಬಂಡಾಯಗಾರ,
ಪ್ರವಾದಿ, ಸಂಗೀತ ಶಾಸ್ತ್ರಜ್ಞ, ಅಭಿಜಾತ ಕವಿ, ಒಬ್ಬ ತಿಕ್ಕಲು ಮನುಷ್ಯ ಎಲ್ಲವೂ ಆಗಿದ್ದನೆಂದು ತೋರುತ್ತದೆ.