Your Cart

Need help? Call +91 9535015489

📖 Print books shipping available only in India. ✈ Flat rate shipping

ಗೌತಮ ಬುದ್ಧ

M Abdul Rehman Pasha
$0.33

Product details

Author

M Abdul Rehman Pasha

Publisher

Nava Karnataka

Book Format

Printbook

Language

Kannada

Pages

48

Year Published

2021

Category

Biography

ಬೌದ್ಧ ಧರ್ಮವೆಂದರೆ ನಮ್ಮ ಬದುಕನ್ನು ಕುರಿತ ಸ್ವಯಂ ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮನನ ಮಾಡಿಕೊಳ್ಳುವುದು. ಬುದ್ಧನು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ ಬೋಧಿಸಿದ. ಇದನ್ನೇ ಅವನು ಪಾಲಿ ಭಾಷೆಯಲ್ಲಿ ‘ಧಮ್ಮ’ ಎಂದು ಕರೆದನು. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನು ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದ. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಎಂದ. ಜೊತೆಗೆ ಯಾರು ಬೇಕಾದರೂ ತನ್ನಂತೆ ಎಚ್ಚರದ ಸ್ಥಿತಿಯಲ್ಲಿ ಕೇವಲ ಜ್ಞಾನವನ್ನು ಪಡೆದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು ಎಂದ. ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ ಶಿಷ್ಯರಿಗೆ ಸೂಚಿಸಿದ. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧ ಎಂದರೆ ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. “ಆಸೆಯೇ ದುಃಖಕ್ಕೆ ಮೂಲ” ಎಂಬುದು ಅವನ ಪ್ರಸಿದ್ಧ ತತ್ವ.