Your Cart

Need help? Call +91 9535015489

📖 Print books shipping available only in India. ✈ Flat rate shipping

ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ ಗಾಯಕವಾಡ

Baba Bhand
$0.71

Product details

Author

Baba Bhand

Publisher

Nava Karnataka

Book Format

Printbook

Language

Kannada

Pages

80

Year Published

2021

Category

Biography

Translator

Chandrakant Pokale

ರೈತನ ಒಬ್ಬ ಅಶಿಕ್ಷಿತ ಪೋರನು ಆಕಸ್ಮಿಕವಾಗಿ ರಾಜನಾಗಿ ಛಲದಿಂದ ಶಿಕ್ಷಣವನ್ನು ಪಡೆದು, ಸ್ವಂತ ಬಲದಿಂದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುತ್ತಾನೆ. ಶಿಕ್ಷಣದಿಂದಲೇ ಪರಿವರ್ತನೆ, ಪ್ರಗತಿ ಸಾಧ್ಯವೆಂದು ನಂಬಿದ ಈ ರಾಜನು ಅಸ್ಪೃಶ್ಯರಿಗೆ, ಬುಡಕಟ್ಟು ಸಮಾಜದವರಿಗೆ ಶಿಕ್ಷಣ ನೀಡಬೇಕೆಂದು ರಾಜಾಜ್ಞೆಯನ್ನು ಹೊರಡಿಸುತ್ತಾನೆ. ವಂಚಿತರ ಬಾಗಿಲಿಗೆ ಶಿಕ್ಷಣದ ಗಂಗೆಯನ್ನು ಒಯ್ಯುತ್ತಾನೆ.
ಕಡ್ಡಾಯ ಪ್ರಾಥಮಿಕ ಶಿಕ್ಷಣ, ಜೀತ ವಿಮೋಚನೆ, ಅಸ್ಪೃಶ್ಯ ನಿವಾರಣೆಯ ಕಾನೂನು ತರುತ್ತಾನೆ. ಲೋಕ ಕಲ್ಯಾಣ, ಉತ್ತಮ ಆಡಳಿತ, ಮೂಢನಂಬಿಕೆಯ ಉಚ್ಚಾಟನೆಯ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡುತ್ತಾನೆ. ಮಹಾತ್ಮ ಫುಲೆ, ಡಾ||ಅಂಬೇಡ್ಕರ್, ಶಾಹೂ, ಗೋಖಲೆ, ತಿಲಕ, ರಾನಡೆ, ಮಹರ್ಷಿ ಶಿಂದೆ-ಮುಂತಾದ ಯುಗ ಪುರುಷರಿಗೆ ಸಹಾಯ ಮಾಡುತ್ತಾನೆ. ಪ್ರಜೆಗಳ ಬಗೆಗೆ ಕಳಕಳಿ,
ಯೋಜನಾಬದ್ಧ ಆಡಳಿತ, ದೂರದೃಷ್ಟಿಯೇ ಈ ಮಹಾರಾಜನ ವೈಶಿಷ್ಟ್ಯ. ಅಂಥ ಅಪರೂಪದ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಚರಿತ್ರೆಯಿದು.