Your Cart

Need help? Call +91 9535015489

📖 Print books shipping available only in India. ✈ Flat rate shipping

ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

Vaidehi
$1.09

Product details

Category

Biography

Author

Vaidehi

Publisher

Manohara Granthamala

Language

Kannada

ISBN

978-93-81822-63-0

Book Format

Ebook

Pages

210

Year Published

2015

ಸಮೃದ್ಧ ಅನುಭವ ಸುತ್ತಲಿನ ಜಗತ್ತಿನಲ್ಲಿ ಲವಲವಿಕೆಯ ಆಸಕ್ತಿಯಿರುವ ಮನುಷ್ಯ ನಿರೂಪಿಸಿದ ಪುಸ್ತಕಗಳಲ್ಲಿ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಒಂದು. ಈ ಪುಸ್ತಕದ ಬರಹದಲ್ಲಿ ನಯ ನಾಜೂಕು, ಕಲೆ ಇಲ್ಲ. ನೇರವಾಗಿ ನಿರೂಪಣೆ. ಅನುಭವದಿಂದ ಎದ್ದು ಬಂದ ಚಿಂತನೆ. ಕಾರಂತರ ಅಪೂರ್ವ ಪ್ರಾಮಾಣಿಕತೆಯ ಶ್ರದ್ಧಾವಂತ ಜೀವನದ ಪರಿಚಯವಾಗುತ್ತದೆ.

ಅಪೂರ್ವಜೀವನದ ನೆನಪುಗಳನ್ನು ನಮಗೆ ಒದಗಿಸುವ ಪುಸ್ತಕ. ‘ಸಮಾಜದ ಋುಣ ಹೇಗೆ ತೀರಿಸಿಯೇನು?’ ಎಂದು ಬಹುಶಃ ಕೋ.ಲ.ಕಾರಂತರು ಹೇಳಿಕೊಂಡರೆ ಅದು ಅವರ ಹಿರಿತನವನ್ನು ತೋರಿಸುತ್ತದೆ.

ವೈದೇಹಿಯವರ ಸುಂದರ ನಿರೂಪಣೆ ಇದಾಗಿದೆ.

ಶಿವರಾಮ ಕಾರಂತರ ಅಣ್ಣ ಲಕ್ಷ್ಮೀನಾರಾಯಣ ಕಾರಂತ ಅವರದೊಂದು ವಿಶಿಷ್ಠ ವ್ಯಕ್ತಿತ್ವ, ಬಹುಶಃ ಇಂದಿನ ತಲೆಮಾರಿನಲ್ಲಿ ಅಂತಹ ಅಸಾಧಾರಣ ಶಿಕ್ಷಕ, ಸಮಾಜ ಸೇವಕ, ಪ್ರಕೃತಿಪ್ರಿಯ, ವೈಜ್ಞಾನಿಕ ಮನೋಭಾವದವರು ತೀರಾ ವಿರಳ. ಸಂದ ಯುಗದವರ ನೆನಪುಗಳು ಸಾಧನೆಯ ಮೆಲುಕು, ಮೌಲಿಕ. ಅವುಗಳ ಒಂದು ಸಂಗ್ರಹ ಈ ಗ್ರಂಥ.
– ಸಂತೋಷಕುಮಾರ ಗುಲ್ವಾಡಿ (‘ತರಂಗ’ದಲ್ಲಿ)