Your Cart

Need help? Call +91 9535015489

📖 Print books shipping available only in India. ✈ Flat rate shipping

ಸಾರ್ಥಕತೆಯ ಸಾಧಕ ಸರ್ವಜ್ಞ

Narayanaswamy J H
$0.27

Product details

Author

Narayanaswamy J H

Publisher

Nava Karnataka

Book Format

Ebook

Language

Kannada

Pages

48

Year Published

2021

Category

Biography

ಸರ್ವಜ್ಞನು ಕನ್ನಡಿಗರಿಗೆ ಸುಪರಿಚಿತನು. ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವನು. ಬಹುಶಃ ಯಾರೂ ಹೀಗೆ ತಮ್ಮ ಹೆಸರನ್ನು ಇಟ್ಟುಕೊಳ್ಳಲಾರರು. ಹಾಗಾಗಿ ಸರ್ವಜ್ಞ ಎನ್ನುವುದು ಒಂದು ತತ್ವದ ಸಂಕೇತವಾಗಿರಬಹುದು. ಅವನ ಗುರುವಿನ ಇಲ್ಲವೇ ಇಷ್ಟದೈವದ ಸಂಕೇತವಾಗಿರಬಹುದು. ಅಥವಾ ತಾನು ನಿಜಕ್ಕೂ ಎಲ್ಲವನ್ನು ಅರಿಯಬೇಕೆಂಬ ಉದಾತ್ತ ಆಶಯದೊಡನೆ ಕಾವ್ಯನಾಮವಾಗಿ ಬಳಸಿರಬಹುದು. ಈತನ ತ್ರಿಪದಿಗಳಲ್ಲಿರುವ ಸಾರವನ್ನು ನೋಡಿ, ಜನಸಾಮಾನ್ಯರು ‘ಸರ್ವಜ್ಞ’ ಎಂದು ಬಿರುದನ್ನು ನೀಡಿರಬಹುದು. ಸರ್ವಜ್ಞನದು ವಿಲಕ್ಷಣವಾದ, ವಿಶಿಷ್ಟವಾದ ವ್ಯಕ್ತಿತ್ವ. ಅವನ ಜೀವನಪ್ರೀತಿ ಅಸದೃಶ. ಹಾಗೆಯೇ ಅವನ ನಿಷ್ಠುರತೆ ಮತ್ತು ವ್ಯವಸ್ಥೆಯನ್ನು ವಿರೋಧಿಸುವ ಪರಿ ಅನನ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಇಷ್ಟರ ಮಟ್ಟಿಗೆ ದಿಟ್ಟತನ, ಸ್ವಾತಂತ್ರ್ಯ ಹಾಗೂ ಮನೋಧೈರ್ಯವನ್ನು ವ್ಯಕ್ತಪಡಿಸುವ ಮತ್ತೋರ್ವ ಕವಿ ಸಿಗಲಾರ.