
ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು
Veena Bannanje$2.67 $2.40
Product details
Book Format | Printbook |
---|---|
Author | Veena Bannanje |
Category | Biography |
Language | Kannada |
Publisher | Sahitya Prakashana |
ಸಾವಿರದ ದಿನಗಳು ವೀಣಾ ಬನ್ನಂಜೆಯವರದು ಹೌದು, ಸತ್ಯಕಾಮ ಅವರದ್ದೂ ಹೌದು. ಆಕೆಯದ್ದು ಅನ್ನುವುದಕ್ಕಿಂತ ಇವರದ್ದು ಅನ್ನುವುದು ಹೆಚ್ಚು ಸೂಕ್ತವಾದೀತು. ಇವರು ಹೊರಡೋ ಹೊತ್ತಿಗೆ ಆಕೆ ಚಿಗುರುದ್ರು ಅಥವಾ ಇವರು ಹೊರಡುವ ಮೊದಲು ಚಿಗುರಿಸಿ ಹೊರಟ್ರಾ!
ಹುಚ್ಚು ಕುದುರೆಗೆ ಚೈತನ್ಯ ಹೆಚ್ಚು ಪಳಗಿಸಬೇಕು; ಚೈತನ್ಯ ಮುಕ್ಕಾಗಿಸದೇ ಪಳಗಿಸಬೇಕು. ಸ್ವ ಇಚ್ಚೆಯಿಂದ ಪಳಗಿದ್ದು; ಹಾಗಾಗಿ ಹುಚ್ಚಿಗೆ ಅಂಕೆಯೂ ಇದೆ, ಚೈತನ್ಯ ಮುಕ್ಕಾಗಿಯೂ ಎಲ್ಲ.
ಮಾಗಿದ್ದು ಸಿಹಿಯಾಗಬೇಕು ಅನ್ನುವುದಾದರೆ, ಕಾಯಿ ಹುಳಿಯಾಗೇ ಏರಬೇಕು. ಸಪ್ಪೆ ಕಾಯ ಹಣ್ಣೂ ಸಪ್ಪೆನೇ! ಸತ್ಯಕಾಮರು ಹುಳಿ ಹೆಚ್ಚೆದ್ದನ್ನೇ ಹುಡುಕಿದ್ದಾರೆ.
ಆತ್ಮ ಕಥನ ಅನ್ನೋದು ಆತ್ಮದೇ ಕತೆಯಾಗಿದೆ.
ಹೆಣ್ಣಿನ ಪ್ರೀತಿಯ ಶಕ್ತಿ ಅಪಾರ. ಇಂತಿಂಥವರಿಗೆ ಮೀಸಲಿಡು; ಮಿಕ್ಕಲ್ಲಿ ಸಲ್ಲ, ಅಂದರೆ ಭೋಗವಾದೀತೇನೋ? ಬರೀ ಭೋಗಕ್ಕೇ ಯಾಕೆ? ಬದುಕಿನ ಯೋಗವೂ ಅವಳಿಂದಲೇ ಅಲ್ಲವೆ? ಸಂಕೋಲೆ ಕಳಚಿದರೆ ತಾಯಾಗ್ತಾಳೆ. ತಾಯಿಗಿಂತ ಯೋಗಿಯೇ?
ಚಿತೆ ಸುಟ್ಟು ಹೆಣ ಉರಿದು ಬೂದಿಯಾಗ್ತಿದ್ದಾಗ ಎದ್ದು ಬಂದದ್ದು ಸತ್ಯಕಾಮ ಅಲ್ವಾ? ಬನ್ನಂಜೆಯವರ ವೀಣಾ ಸತ್ತಾಗಿತ್ತು!
ನನಗರ್ಥವಾದ ಹಾಗೆ ಸತ್ಯಕಾಮ ಅವರು ಅಂತರ್ಮುಖಿ, ಈಕೆ ಹೆಣ್ಣು! ಪ್ರಕೃತಿ! ಸ್ವಾಭಾವಿಕವಾಗಿಯೇ ಬಹಿರ್ಮುಖಿಯಾದಾರಾ? ಈ ಪುಸ್ತಕ ಆ ನಿಟ್ಟಿನ ಪ್ರಯತ್ನವಾಗಿದೆ.