Your Cart

Need help? Call +91 9535015489

📖 Print books shipping available only in India. ✈ Flat rate shipping

ಅಗಸ್ತ್ಯನಿಂದ ಐ.ಟಿ.ವರೆಗೆ

Arya
$0.00

Product details

Category

Plays

Author

Arya

Publisher

Jadabharata Prakashan

Language

Kannada

Book Format

Ebook

Year Published

2010

ಮಹಾಭಾರತದ ಶಾಂತನು ಗಂಗಾ (ಮೂಲ ಮಹಾಭಾರತದಲ್ಲಿ ಶಾಂತನು ಎಂದೇ ಉಪಯೋಗಿಸಲಾಗುತ್ತಿದೆ.) ಮುಂತಾದ ಸಮಕಾಲೀನ ಐ. ಟಿ. ಯುವ ಜೋಡಿಯ ವರೆಗೆ ಇತಿಹಾಸದ ವಿಭಿನ್ನ ಸಂಧಿಗಳ ಜೋಡಿ ಪಾತ್ರಗಳ ದಾಂಪತ್ಯ ಸಂಬಂಧೀ ವಿಚಾರಗಳು ಈ ನಾಟಕದ ವಸ್ತು . ವೇದ, ಪುರಾಣಕಾಲೀನ ಸ್ತ್ರೀಯರು, ಚರಿತ್ರೆ ಮತ್ತು ಆಧುನಿಕ ಸ್ತ್ರೀಯರಿಗಿಂತಲೂ ಹೆಚ್ಚು ಸ್ವಂತಿಕೆ, ಕಸುವು ಉಳ್ಳವರಾಗಿದ್ದರೆಂಬುದು ಕುತೂಹಲ ಮೂಡಿಸುತ್ತದೆ. ಚರಿತ್ರೆಯ ಕಾಲಿದಾಸನ ಶಕುಂತಲೆಗಿಂತ ಮಹಾಭಾರತದ ಶಕುಂತಲೆ ಹೆಚ್ಚು ಘನತೆ, ಸ್ವಾಭಿಮಾನಿಯಾಗಿದ್ದಳು ಎನ್ನುವುದು ಇದಕ್ಕೊಂದು ಉದಾಹರಣೆ. ಪ್ರಾಯಃ ಸಮಕಾಲೀನ ಹಾಗೂ ಮುಂದಿನ ದಿನಗಳಲ್ಲಿ ಸ್ತ್ರೀ ಪ್ರಾಧಾನ್ಯತೆ ಬಗ್ಗೆ ಹೆಚ್ಚು ಆರೋಗ್ಯಕರ ಅರಿವು ಬೆಳೆಯುವ ಸಾಧ್ಯತೆ ಇದೆ. ಅಂತೆಯೇ, ವೈಯಕ್ತಿಕತೆ, ಕುಟುಂಬ, ಸಮಾಜ ಇವೆಲ್ಲದರಲ್ಲಿ ದಾಂಪತ್ಯದ ಸ್ನೇಹಮಯ ಕೊಡುಕೊಳ್ಳುವಿಕೆ ಒಂದು ಆರೋಗ್ಯಕರ ಕೇಂದ್ರವಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಈ ನಾಟಕದಲ್ಲಿ ಏಳು ಪ್ರಸಂಗಗಳಿದ್ದು ಅವೆಲ್ಲದರಲ್ಲೂ ಈ ದಾಂಪತ್ಯ ಸಂಬಂಧ ಮೂಲ ಸ್ರೋತವಾಗಿ ಹರಿಯುತ್ತದೆ.