Your Cart

Need help? Call +91 9535015489

📖 Print books shipping available only in India. ✈ Flat rate shipping

ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು

Vaidehi
$0.51

Product details

Category

Children Literature

Author

Vaidehi

Publisher

Jadabharata Prakashan

Language

Kannada

Book Format

Ebook

ISBN

978-81-922845-3-8

Year Published

2013

ಈ ಸಂಕಲನದ ಒಂದು ಕಥೆಯಲ್ಲಿ ಇಬ್ಬರು ಮಕ್ಕಳು ದೋಣಿಯಲ್ಲಿ ಹೋಗುತ್ತಿದ್ದಾಗ ಮುಳುಗಿ, ಮೀನಿನ ಬಾಯಿಗೆ ಸಿಕ್ಕು ಬಚಾವಾಗಿ, ಅದೇ ಕಾರಣದಿಂದ ನೀರಿನಾಳದ ಮೀನಿನ ಅರಮನೆಯನ್ನೆಲ್ಲ ಓಡಾಡಿಕೊಂಡು, ಮೋಜು-ಮೇಜವಾನಿ ಪೂರೈಸಿ, ಮತ್ತೆ ಮರಳಿ ದೋಣಿ ಹಿಡಿದು ಮನೆ ತಲುಪುವ ಒಂದು ವಿಚಿತ್ರ ವೃತ್ತಾಂತ ಇದೆ. ‘ಅಬ್ಬಾಲಕ್ಕ ಅಜ್ಜೀ ಮನೆಗೆ ಹೋದದ್ದು’ ಎಂಬ ಹೆಸರಿನ ಕಥೆಯು ವಯಸ್ಕ ಲೋಕದಲ್ಲಿ ನಾವು ಯಾವುದನ್ನು ವಾಸ್ತವ ಎಂದು ಕರೆಯುತ್ತೇವೋ, ಆ ಜಗತ್ತಿನ ತರ್ಕವನ್ನು ಅನುಸರಿಸುವುದಿಲ್ಲ. ಹಾಗಂತ ಅದನ್ನು ಫ್ಯಾಂಟಸಿ ಎಂದು ಕರೆದು ಬೇರೆ ಕಡೆ ಇಡಬಹುದಾದಷ್ಟು ವೈಚಿತ್ರ್ಯವೂ ಅದರಲ್ಲಿಲ್ಲ. ‘ಚಿಟ್ಟಿಬಾಲೆ’ ಎಂಬ ಇನ್ನೊಂದು ಕಥೆ, ಇಂಥ ವಾಸ್ತವಗಳ ಕಲಬೆರಕೆಗೆ ಇನ್ನೊಂದು ಆಯಾಮವನ್ನೇ ಕೊಡಬಲ್ಲಂಥ ಕೃತಿ. ಇದರಲ್ಲಿ ಮೂಲತಃ ಒಂದೇ ಕಥೆಯು ಎರಡು ವಿರುದ್ಧ ದಿಕ್ಕಿನಿಂದ ಕಥಿತವಾಗುತ್ತ ಹೋಗುತ್ತದೆ. ‘ಪುಟ್ಟಿಪುಟ್ಟರ ಪುಟಾಣಿ ದಿನಗಳು’ ಎಂಬ ಕಥೆಯಲ್ಲಿ, ನದಿಯಲ್ಲಿ ಸಾಗುವ ಮಕ್ಕಳು ದೋಣಿ ಮಗುಚಿದಾಗ ಮುಳುಗಿ ಸಾಯುವುದಿಲ್ಲ; ಬದಲು, ಮೀನಿನ ಹೊಟ್ಟೆಯೊಳಗೆ ಸೇರಿ ತಮ್ಮ ಪಯಣವನ್ನು ಮುಂದುವರೆಸುತ್ತಾರೆ.