Sale!

ಮಕ್ಕಳ ಸಾಹಿತ್ಯ ಸಂಗ್ರಹ

$4.67Save $2.02

12 Ebooks – 30% discount sale !

ಪುಟ್ಟ ಪುಟಾಣಿಯ ದೊಡ್ಡ ಕತೆ

$0.80
ಪುಟಾಣಿ ಎಂಬುದು ಫೋಟಾನ್ ಎಂಬ ಚೈತನ್ಯದ ಪೊಟ್ಟಣವನ್ನು ಸೂಚಿಸುವ ಕಣ. ಮುಖ್ಯವಾಗಿ ಬೆಳಕನ್ನು ಪ್ರತಿನಿಧಿಸುವ ಕಣ. ಇದು ಸೂರ್ಯನಲ್ಲಿ ಉತ್ಪತ್ತಿಯಾಗುವುದು ಹೇಗೆ? ನಮ್ಮನ್ನು ತಲುಪುವುದು ಹೇಗೆ? ಇಂತಹ ವೈಜ್ಞಾನಿಕ ವಿವರಗಳನ್ನು ತಿಳಿಹೇಳಲು ಭೌತ ವಿಜ್ಞಾನ ಹಾಗೂ ಗಣಿತದ ಬುನಾದಿ ಅತಿ ಅವಶ್ಯ. ಆದರೆ ಚಿಕ್ಕ ಮಕ್ಕಳಿಗೆ ಕತೆಯ ರೂಪದಲ್ಲಿ ಹೇಳುವ ಪ್ರಯತ್ನವೇ ಈ ಪುಸ್ತಕ.

ಫ್ರಾಗಿ ಮತ್ತು ಗೆಳೆಯರು...

$1.07
ಮಕ್ಕಳೇ, ಇಲ್ಲಿ ನಮ್ಮ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾಡಿದ್ದಾರೆ. ಒಂದಿಷ್ಟು ಪರಿಸರದಲ್ಲಿ ಸುತ್ತಾಡುತ್ತಾ ಶಾಲೆಗೆ ಹೋಗಿದ್ದಾರೆ, ಗುಡ್ಡ ಹತ್ತಿದ್ದಾರೆ, ಮರ ಏರಿದ್ದಾರೆ, ಗಾಳಿಯಲ್ಲಿ ತೇಲಿದ್ದಾರೆ, ಕೆರೆಯಲ್ಲಿ ಕುಳಿತು ಹರಟಿದ್ದಾರೆ. ಇಲ್ಲಿ ಹಾರುವ ಕಪ್ಪೆಗಳು, ಬಾವಲಿಗಳು ಮುಂತಾದವೂ ಬಂದಿವೆ. ಏನೇ ಇರಲಿ... ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟ ನಿಮಗೆ ಇಷ್ಟವಾಗುತ್ತದೆ ಅಂದುಕೊಂಡಿದ್ದೇನೆ. - ತಮ್ಮಣ್ಣ ಬೀಗಾರ.

ಮಕ್ಕಳಿಗಾಗಿ ರಾಮಾಯಣ

$1.27
ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರಗಳ ಸಹಿತ ರಾಮಾಯಣದ ಕಥೆಯನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ಕನ್ನಡ ಅನುವಾದ: ಶ್ರೀಮತಿ ಗಾಯತ್ರಿ ಮೂರ್ತಿ  

ಸಾಗರದಾಳದ ಸುಂದರಿಯರು

$1.00
ಸಾಗರದಾಳದ ಸುಂದರಿಯರು ವೈಜ್ಞಾನಿಕ-ಕಾಲ್ಪನಿಕ ಮಕ್ಕಳ ಕಾದಂಬರಿ ಎಂ. ಮಹಾದೇವಪ್ಪ. ತಾಳಗುಂದ

ಮಕ್ಕಳ ಸಾಹಿತ್ಯ- ಓದು ಒಲವು

$0.40
ಮಕ್ಕಳ ಸಾಹಿತ್ಯ : ಓದು ಒಲವು ತ್ರೈಮಾಸಿಕ ಮಕ್ಕಳ ಸಾಹಿತ್ಯದ ಹಂಬಲ ಜೂನ್ – ಆಗಸ್ಟ್ ೨೦೧೯

ಪಾರಿತೋಷ

$0.47
ಪಾರಿತೋಷ ಈ ಪುಸ್ತಕವು ಆರ್. ಕೆ. ಶಾನಭೋಗ ಅವರು ಬರೆದ ಮಕ್ಕಳ ನಾಟಕ ವಾಗಿದೆ.

ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು

$1.33
ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು ಮಕ್ಕಳಿಗಾಗಿ ಕಥೆ ಬರೆಯುವುದು ಒಂದು ಕಲೆ, ಮಕ್ಕಳ ಮನಸ್ಸನ್ನು ಮುಟ್ಟುವ , ಅವರ ಕಲ್ಪನಾ ಶಕ್ತಿಯನ್ನು ತಟ್ಟುವ, ಸರಳ ಸುಂದರ ಭಾಷೆಯ ಕಥೆಗಳನ್ನು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ವಿಂಗಡಿಸಿ ಬರೆಯುವುದು ಇನ್ನೂ ಉತ್ತಮ, ಇನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ದೊಡ್ಡವರು ಇಂತಹ ಕತೆಗಳನ್ನು ಓದಿ ಹೇಳಿ , ಮುಂದೆ ಅವರಿಗೆ ಕಥೆಗಳನ್ನು ಓದುವ ಚಟ, ಆಸಕ್ತಿ ಬೆಳೆಸಬಹುದು. ಈಗಿನ ಮಕ್ಕಳಿಗೆ ಪ್ರಪಂಚದ ಅಗುಹೋಗುಗಳನ್ನು ತಿಳಿಯಲು ನಾನಾ ವಿಧವಾದ ಅನುಕೂಲಗಳಿವೆ. ರೇಡಿಯೋ, ದೂರದರ್ಶನ, ಇಂಟರ್ ನೆಟ್ ಗಳ ಮೂಲಕ ಅವರ ತಿಳುವಳಿಕೆ ಬಹಳಷ್ಟು ಹೆಚ್ಚುತ್ತಿದೆ. ಅವರಲ್ಲಿ ಜ್ಞಾನದಾಹ ಹೆಚ್ಚುತ್ತಿದೆ. ಇಂಟರ್ ನೆಟ್ ನಲ್ಲಿ ಬೇರೆ ಬೇರೆ ವೆಬ್ ಸೈಟುಗಳಿಗೆ ಹೋಗಿ ಅವರು ಹೊಸ ವಿಷಯಗಳನ್ನು ಸಾಹಿತ್ಯಿಕ ವಿಚಾರಗಳನ್ನು ತಿಳಿಯಬಲ್ಲರು. ಏನೇ ಆದರು ಪುಸ್ತಕ ಪ್ರಿಯತೆ, ಪುಸ್ತಕಗಳನ್ನು ಓದಿ ಮನನ ಮಾಡುವುದು ಅದೊಂದು ಆತ್ಮೀಯ ಹವ್ಯಾಸವಾಗಬೇಕು. ಮಕ್ಕಳಿಗೆ ಈ ನಿಟ್ಟಿನಲ್ಲಿ ಹೊಸ ಹೊಸ ಪುಸ್ತಕಗಳನ್ನು ಹೊರತರಲು ಪ್ರಕಾಶಕರು ಕಾರ್ಯವನ್ನು ಮಾಡಬೇಕು. ಅಂತಹ ಧ್ಯೇಯವನ್ನು ಇಟ್ಟುಕೊಂಡಿರುವ ಓಂಶಕ್ತಿ ಪ್ರಕಾಶನದ ಶ್ರೀ ವಿ. ಹೇಮಂತುಕುಮಾರ್ ರವರು ಈ ಹೊತ್ತಿಗೆಯನ್ನು ಕೃತಿ ರೂಪಕ್ಕೆ ತಂದಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿರುವೆ.

ಕಥೆ ಹೇಳುವೆ ಬಾ ಕಂದ

$0.67
ಕಥೆ ಹೇಳುವೆ ಬಾ ಕಂದ ಈ ಪುಸ್ತಕವು ಹಲವಾರು ಕಥೆಗಳನ್ನು ಒಳಗೊಂಡಿದೆ. ಆ ಕಥೆಗಳೆಂದರೆ : ಬುದ್ಧಿವಂತ ಬದರಿ, ನರಿಯ ಸೇಡು, ಹಸಿರು ಚಿನ್ನ, ಮುಯ್ಯಿಗೆ ಮುಯ್ಯಿ, ಕುಸ್ತಿ ಕಲಿತ ಆಮೆ, ಮಂಗೂಸ್ ಮತ್ತು ಹಾವು, ರೈತ ರಾಮಣ್ಣ,  ಪಾಠ ಕಲಿತ ಒಂಟೆ,  ನರಿಯ ಮೋಸ,ಸೊಂಬೇರಿ ಮೊಲ, ಸಿಂಹದ ಜನ್ಮ ದಿನ, ಮೂರ್ಖ ನಾಯಿಗಳು, ಬೆಲೆಯಿಲ್ಲದ ಧನ್ಯತೆ, ವ್ಯಾಪಾರಿಯ ಸಾಕ್ಷಿ, ದೇವರು ಮತ್ತು ಮಾನವ, ಕಪ್ಪೆ ವೈದ್ಯನಾಥ, ಮೇಕೆಯ ಉಪದೇಶ,  ದೇವರು ಕರುಣಾಮಯ, ಕಪ್ಪೆಗಳ ಜಗಳ, ಚಿನ್ನದ ವಿಗ್ರಹ, ಸಂಗೀತಗಾರ ತೋಳ, ಬುದ್ಧಿವಂತ ಕತ್ತೆ, ಸತತ ಪ್ರಯತ್ನದ ಫಲ, ತಾಳ್ಮೆಯ ಫಲ, ದೇವರು ಕೊಟ್ಟ ವರ, ಬುದ್ಧಿವಂತ ಕಲಾವಿದ, ಮೇಧಾವಿ ನ್ಯಾಯಾಧೀಶ, ಪಕ್ಷಿಯ ಉಪಕಾರ, ನರಿಯ ಪುನರ್ಜನ್ಮ, ಮೂರ್ಖ ಸ್ನೇಹಿತರು, ಕುಂಬಾರನ ಪ್ರಾರ್ಥನೆ, ಹೂದಳ ಮತ್ತು ಮುಳ್ಳು, ಪಕ್ಷಿಗಳಿಗೆ ವೈದ್ಯ,  ಕೆಟ್ಟದ್ದು ಮಾಡಬಾರದು,  ಕುತಂತ್ರಿ ಕಾಗೆ, ಬುದ್ಧಿವಂತ ವ್ಯಾಪಾರಿ, ಎದೆಗಾರಿಕೆ, ಕನಸುಗಳು ನಿಜವಾಗುವುವೇ?, ನಂಬಿ ಕೆಟ್ಟ ಕರಿಯಣ್ಣ, ಇಲಿಯ ಚಾತುರ್ಯ, ದೇವರನ್ನು ದೂಷಿಸಬೇಡ,  ಸಮಯಕ್ಕೆ ತಕ್ಕ ನುಡಿ, ಸೋಮಾರಿ ಹಕ್ಕಿಗಳು, ಮ್ಯಾಜಿಕ್ ಗಂಗಾಳ, ಕತ್ತೆ ಜಂಭ, ಕೋತಿಗೇಕೆ ಉಪದೇಶ?, ಸತ್ತ ಮೊಸಳೆ, ಚಿಟ್ಟೆಯ ಹಿರಿಮೆ, ಕುಂಟು ನಾಯಿ, ಎರಡು ಕಪ್ಪೆಗಳು,  ಆನೆಯ ಉದ್ದ ಸೊಂಡಿಲು,ರಾಜಕುಮಾರಿಗೆ ಒಲಿದ ಹಕ್ಕಿ, ಆನೆಯ ಹಲ್ಲು, ನರಿಯ ಉಡುಗೊರೆ, ಪಂಜರದ ಕೋತಿ, ಮೂರ್ಖ ಕಪ್ಪೆ, ನರಿಯ ಉಪಾಯ, ಮುಯ್ಯಿಗೆ ಮುಯ್ಯಿ, ಸಿಂಹದ ಪ್ರೀತಿ.

ಸೋಮಾರಿ ಓಲ್ಯಾ

$0.33
ಸೋಮಾರಿ ಓಲ್ಯಾ (ಮಕ್ಕಳ ನಾಟಕ) ಸುಮಾರು ಏಳೆಂಟು ವರ್ಷದೊಳಗಿನ ಮಕ್ಕಳಿಗಾಗಿ ಹತ್ತುವರ್ಷಗಳ ಹಿಂದೆ ಬರೆದ ನಾಟಕವಿದು. The Lost Ring ಎಂಬ ಪುಟ್ಟ ಪದ್ಯದಿಂದ ಪ್ರೇರಿತವಾದದ್ದು. ರಚನೆಯಲ್ಲಿ ಕೆಲ ಜನಪ್ರಿಯ ಮಕ್ಕಳ ಕಥೆಗಳ ಬಿಡಿ ನೇಸಲುಗಳೂ ಸೇರಿವೆ.

ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು

$0.93
ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು (ಮಕ್ಕಳ ಕತೆಗಳು) ವೈದೇಹಿಯವರು ಮಕ್ಕಳನ್ನು ಎದುರಿಗೆ ಕುಡ್ರಿಸಿಕೊಂಡು ಹೇಳಿದಂತಿರುವ  ಈ ಕಥೆಗಳು ಆಕರ್ಷಕ ಶೈಲಿ ನಾಟಕೀಯ ನಿರೂಪಣೆಗಳ ಮೂಲಕ ಮಕ್ಕಳ ಕಥೆಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.  ಈ ಕಥೆಗಳು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಸಂತೋಷ ನೀಡುತ್ತವೆ.  ನಿರಸವಾದ ನೀತಿ ಕಥೆಗಳಿಂದ ತುಂಬಿರುವ ಕನ್ನಡದ ಮಕ್ಕಳ ಕಥೆಗಳಿಗಿಂತ ಇವು ವಿಭಿನ್ನವಾಗಿವೆ.

ಸುನಾಮಿಯ ಸುಳಿಯಲ್ಲಿ

$0.80
ಏಳು ದಿನಗಳ ವರೆಗೆ ಒಬ್ಬ ಬಾಲಕ ಸಾಗರದಲ್ಲಿಯೇ ಇರುವಂತಹ ಪರಿಸ್ಥಿತಿ ಎದುರಾದರೆ ಆತ ಎದುರಿಸಿದ ಘಟನೆಗಳು, ತೊಂದರೆಗಳು ಹೇಗಿದ್ದಿರಬಹುದು? ಅದುವರೆಗೂ ಆತನ ಮನಸ್ಸಿನಲ್ಲಿ ಸುಳಿದಾಡಿರಬಹುದಾದ ಭಾವನೆಗಳು ಹೇಗಿದ್ದಿರಬಹುದು? ಎನ್ನುವುದರ ಕಲ್ಪನೆಯ ಸೃಷ್ಟಿಯೇ ‘ಸುನಾಮಿಯ ಸುಳಿಯಲ್ಲಿ’.

Reviews

There are no reviews yet.

Only logged in customers who have purchased this product may leave a review.