Your Cart

Need help? Call +91 9535015489

📖 Print books shipping available only in India. ✈ Flat rate shipping

ಫ್ರಾಗಿ ಮತ್ತು ಗೆಳೆಯರು…

Tammanna Beegar
$0.77

Product details

Author

Tammanna Beegar

Publisher

Gomini Prakashana

Book Format

Ebook

Language

Kannada

Year Published

2020

Category

Children Novel

ಮಕ್ಕಳೇ, ಇಲ್ಲಿ ನಮ್ಮ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾಡಿದ್ದಾರೆ. ಒಂದಿಷ್ಟು ಪರಿಸರದಲ್ಲಿ ಸುತ್ತಾಡುತ್ತಾ ಶಾಲೆಗೆ ಹೋಗಿದ್ದಾರೆ, ಗುಡ್ಡ ಹತ್ತಿದ್ದಾರೆ, ಮರ ಏರಿದ್ದಾರೆ, ಗಾಳಿಯಲ್ಲಿ ತೇಲಿದ್ದಾರೆ, ಕೆರೆಯಲ್ಲಿ ಕುಳಿತು ಹರಟಿದ್ದಾರೆ. ಇಲ್ಲಿ ಹಾರುವ ಕಪ್ಪೆಗಳು, ಬಾವಲಿಗಳು ಮುಂತಾದವೂ ಬಂದಿವೆ. ಏನೇ ಇರಲಿ… ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟ ನಿಮಗೆ ಇಷ್ಟವಾಗುತ್ತದೆ ಅಂದುಕೊಂಡಿದ್ದೇನೆ. ಇಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಪುಂಡು, ಪುಟ್ಟಿ ಮತ್ತು ಚಿನ್ನು ಆಗಾಗ ಮಾತಾಡಿದ್ದಾರೆ. ಚಿನ್ನುವಂತೂ ಈ ಪುಸ್ತಕ ಓದುತ್ತ ತಾನೂ ಕಥೆ ಬರೆಯಲು ಸಿದ್ಧವಾಗುತ್ತಾನೆ. ನೀವೆಲ್ಲ ಪುಸ್ತಕ ಓದಬೇಕು. ಓದು ಖುಷಿ ಖುಷಿಯಾಗಿರಬೇಕು. ಅದರಲ್ಲಿರುವ ಸಂಗತಿಗಳು ನಿಮ್ಮಲ್ಲಿ ಕುತೂಹಲ ಎಬ್ಬಿಸಿ ವಿಸ್ತರಿಸಬೇಕು ಎಂದೆಲ್ಲ ನಮ್ಮ ಆಸೆ. ಪುಸ್ತಕ ಎತ್ತಿಕೊಂಡಿದ್ದೀರಿ. ನೋಡಿ ಪ್ರಾರಂಭಿಸಿಕೊಳ್ಳಿ… ಓದಿ ಏನೆನಿಸಿತು ನನಗೂ ಒಂದಿಷ್ಟು ಹೇಳುತ್ತೀರಲ್ಲ… ಏಕೆಂದರೆ ನಿಮ್ಮ ಖುಷಿ ನನ್ನೊಂದಿಗೆ ಹಂಚಿಕೊಂಡಾಗ ನನಗೂ ಖುಷಿಯಾಗಿ ಮತ್ತಷ್ಟು ಬರೆಯಬಹುದಲ್ಲ. ಹಾಂ, ಹಿರಿಯರನ್ನು ಮರೆತರೆ ಹೇಗೆ? ಹಿರಿಯರಾದ ನೀವು ಈ ಪುಸ್ತಕ ಓದಿ ಬಾಲ್ಯಕ್ಕೆ ಮರಳಿ ಆನಂದ ಪಡೆಯುವುದರ ಜೊತೆಗೆ ನಿಮ್ಮ ಮಕ್ಕಳಿಗೂ ಹೇಳುತ್ತ ಸಂತಸ ಪಡೆಯಬಹುದು.
– ತಮ್ಮಣ್ಣ ಬೀಗಾರ.