Your Cart

Need help? Call +91 9535015489

📖 Print books shipping available only in India. ✈ Flat rate shipping

ಎಚ್ಚೆಸ್ವಿ ಸಮಗ್ರ ಮಕ್ಕಳ ಸಾಹಿತ್ಯ

H. S. Venkateshamurthy
$2.61

Product details

Category

Children Literature

Author

H. S. Venkateshamurthy

Publisher

VIVIDLIPI

Book Format

Ebook

Pages

522

Language

Kannada

Year Published

2013

ಮಕ್ಕಳ ಸಾಹಿತ್ಯ ರಚನೆ ಇವರ ಸಾಹಿತ್ಯಕ ಬದುಕಿನ ಆರಂಭದ ವರ್ಷಗಳಿಂದಲೂ ಇವರ ಮನಸ್ಸನ್ನು ಆಕ್ರಮಿಸಿರುವಂಥದ್ದು. ಪ್ರಾಯಃ ಮಕ್ಕಳ ಬಗೆಗೆ ಅವರಿಗಿದ್ದ ಸಹಜವಾದ ಮೋಹವೇ ಅವರ ಈ ಪ್ರವೃತ್ತಿಗೆ ಕಾರಣವಿರಬಹುದು.ಇವರ  ಕೆಲವು ಮಕ್ಕಳ ಕೃತಿಗಳ ಮೊದಲ ಓದುಗರು ಅವರ ಮಕ್ಕಳೇ. ಕಥಾ ನಾಯಕರೂ ಅವರ ಮಕ್ಕಳೇ! ೧೯೮೦ರಲ್ಲಿ ಅಮಾನುಷರು ಬರೆದಾಗ ಬರೆದದ್ದನ್ನು ಮೊದಲು ಓದಿದವರು ಆಗ ಹೈಸ್ಕೂಲು ( ೧೯೮೭ ) ಮೆಟ್ಟಿಲು ಹತ್ತಿದ್ದ ಇವರ ಮಕ್ಕಳಷ್ಟೆ ! ಮನೆಯ ಮಕ್ಕಳೊಂದಿಗೆ ಸುತ್ತಮುತ್ತಲ ಮನೆಯ ಮಕ್ಕಳಿಗೂ ಇವರು ಬರೆದದ್ದನ್ನು ಓದಿ , ಓದಿಸಿ ಅವರ ಅಭಿಪ್ರಾಯ ತಿಳಿಯುವುದು ಎಚ್. ಎಸ್. ವೆಂಕಟೇಶಮೂರ್ತಿಯವರ  ಪ್ರವೃತ್ತಿಯಾಗಿತ್ತು ! ಅಮಾನುಷರು ( ೧೯೮೦ ) ಕೃತಿಯ ಮುನ್ನುಡಿಯಲ್ಲಿ ಆ ಕಾದಂಬರಿಯನ್ನು ಮೊದಲು ಓದಿ ಮೆಚ್ಚಿದ ಮಕ್ಕಳ ಹೆಸರನ್ನುಇವರು ನಮೂದಿಸಿದ್ದಾರೆ. ಆ ಮಕ್ಕಳೆಲ್ಲಾ ಈಗ ಪ್ರೌಢಾವಸ್ಥೆಯಲ್ಲಿದ್ದಾರೆ.

ಮಕ್ಕಳ ಬೆಳವಣಿಗೆಯನ್ನು ನಾವು ಸಮಗ್ರವಾಗಿ ಕಣ್ಣುಂಬಿಕೊಳ್ಳುವುದು ಮೊಮ್ಮಕ್ಕಳು ಹುಟ್ಟಿ ಅವರು ನಮ್ಮ ಕಣ್ಣೆದುರೇ ಬೆಳೆಯುವಾಗ ! ಈಟಿದ್ದದು ಚೋಟಾಗಿ , ಚೂಟಿದ್ದದ್ದು ಮಾಟಾಗಿ ಮಗುವೊಂದು ಹೂವಿನಂತೆ ಅರಳುವುದು ನಮಗೆ ಪೂರ್ಣ ಪ್ರಮಾಣದಲ್ಲಿ ಅನುಭವವೇದ್ಯವಾಗುವುದು ಮೊಮ್ಮಕ್ಕಳು ಹುಟ್ಟಿದ ಮೇಲೇ ಎಂದು  ಆವಾಗಾವಾಗ ಅನ್ನಿಸುತ್ತಲೇ ಇರುತ್ತದೆ ! ಮೊದ ಮೊದಲು ಅಮ್ಮ ಕಥೆ ಹೇಳುವವಳಾಗಿದ್ದಳು . ಅವಳ ಮಕ್ಕಳು ಕಥೆ ಕೇಳುವವರಾಗಿದ್ದರು . ಈಗೀಗ ಅಜ್ಜಿ ಕಥೆ ಹೇಳುವವಳಾಗಿದ್ದಾಳೆ ! ಮೊಮ್ಮಕ್ಕಳು ಕಥೆ ಹೇಳುವವರಾಗಿದ್ದಾರೆ .