Sale!

ದಸ್ತಕ್…. ( Printbook )

Lakshmikant Itnal
$2.97

ದಸ್ತಕ್…:

ಎಂದಿಗೂ ಮಾಯದ ದೇಶವಿಭಜನೆಯ ಗಾಯವನ್ನು ಎದೆಗೊತ್ತಿಕೊಂಡೇ, ಮನುಷ್ಯ ಸಂಬಂಧಗಳ ಬೆಚ್ಚನೆ ನಂಟಿನ ರೂಹುಗಳಿಗಾಗಿ ಪರಿತಪಿಸುತ್ತಾ ತನ್ನ ಕಲೆಯನ್ನು ಜೀವನಕಲೆಯಾಗಿ ಪರಿವರ್ತಿಸುತ್ತ ಬಂದ ಗುಲ್ಜಾರ್ ರ ಋಣದಲ್ಲಿ ಇಡೀ ದೇಶವೇ ಇದೆ. ಇಂಥದೊಂದು ಋಣದ ಒಂದು ಕಿಂಚಿತ್ ಸಂಕೇತಾತ್ಮಕ ಸಂದಾಯದ ಕ್ಷಣ ಈಗ ಈ ಮೂಲಕ ಕನ್ನಡದಲ್ಲಿ, ಧಾರವಾಡದ ಗೆಳೆಯ ಲಕ್ಷ್ಮೀಕಾಂತರು ಇಟ್ನಾಳರ ಮೂಲಕ ಆಗುತ್ತಿರುವುದು ಒಂದು ಹೃದ್ಯವಾದ ವಿದ್ಯಮಾನವಾಗಿದೆ…..

ಇಟ್ನಾಳರ ಭಾಷಾಂತರ ಪಾರದರ್ಶಕವಾಗಿರುವುದರಿಂದಲೇ ಈ ಸಾಲುಗಳ ನಿರಾಭರಣ ಸೌಂದರ್ಯ ಅವರಿಸುವಂತಾಗಿದೆ. ಲಕ್ಷ್ಮೀಕಾಂತರು ಸೂಕ್ತವಾಗಿ ಅಲ್ಲಲ್ಲಿ ಧಾರವಾಡದ ಒಕ್ಕಣಿಕೆ ಬಳಸೋದು ಕೆಲವು ಸಾಲುಗಳನ್ನು ಇನ್ನೂ ಹತ್ತಿರಕ್ಕೆ ತಂದಿದೆ….

ಇಟ್ನಾಳರು ಗುಲ್ಜಾರ್ ರ ನಿಬಿಡವಾದ ಅಷ್ಟೇ ವೈವಿಧ್ಯಮಯವಾದ, ಚೈತನ್ಯಶಾಲಿಯಾದ ತೋಟದಲ್ಲಿ ಅಡ್ಡಾಡಿಸಿದ್ದಾರೆ. ಈ ಸಂಕಲನದಲ್ಲಿ ಮೂಲ ಪಠ್ಯವನ್ನು ಪಕ್ಕದಲ್ಲೇ ಕೊಟ್ಟಿರುವುದು ಅವರ ಪ್ರಾಂಜಲತೆಗೆ ನಿದರ್ಶವಾಗಿದೆ. ಇದು ಓದುಗರ ರಚನಾತ್ಮಕ ಪ್ರಚೋದನೆ ನೀಡುವಂತಿದೆ.

ಚದುರಿ ಬಿದ್ದಿರುವ ಎಲ್ಲರನ್ನೂ ಎಲ್ಲವನ್ನೂ ಅಂತಃಕರಣದ ಸೂತ್ರದಲ್ಲಿ ಮರಳಿ ಪೋಣಿಸುವ ಸೂತ್ರವೇ ಕಾವ್ಯ. ತಮ್ಮ ಬರವಣಿಗೆ, ವ್ಯಕ್ತಿತ್ವ, ಘನವಾದ ಮಾತು, ಚಿತ್ರಪಟಗಳ ಮೂಲಕ ಇಂಥದೊಂದು ಸೂತ್ರವನ್ನು ಕಲ್ಪಿಸುತ್ತಲೇ ಬಂದಿರುವ ನಮ್ಮೆಲ್ಲರ ಸಂವೇದನೆಯ ಮಹಾ ಪೋಷಕ ಗುಲ್ಜಾರ್ ಸಾಬ್ ಗೆ ನಮಸ್ಕಾರ.

  • Book Format: Printbook
  • Author: Lakshmikant Itnal
  • Category: Samagra Sahitya
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.