ಅಭಿನಯ ದರ್ಪಣ

ಲೇ:ಎಂ.ಎ. ಹೆಗಡೆ

ಅಭಿನಯದರ್ಪಣದ ಪ್ರಧಾನವಾದ ಲಕ್ಷ್ಯವು ಹಸ್ತಾಭಿನಯದ ಕಡೆಗೆ. ನಾಟ್ಯಶಾಸ್ತ್ರಕಾರರ ಪ್ರಕಾರ ಜಗತ್ತಿನಲ್ಲಿರುವ ಎಲ್ಲ ಭಾವ ,ವಸ್ತುಗಳನ್ನೂ ಕೈಗಳ ಮೂಲಕ ಹೇಳಲು ಸಾಧ್ಯ. ಅದು ಸ್ಪಷ್ಟವಾದ ಆಕಾರವನ್ನು ಹೊಂದಿದ ಮೂರ್ತವಸ್ತುವೇ ಆಗಲಿ, ಅಂಥ ಆಕಾರವಿಲ್ಲದ ಅಮೂರ್ತವಸ್ತುವೇ ಆಗಲಿ, ಜಡವೇ ಆಗಲಿ, ಚೇತನವೇ ಆಗಲಿ ಹಸ್ತದ ಮೂಲಕ ಸೂಚಿಸಲು ಸಾಧ್ಯವೆಂಬ ನಿಲುಮೆ ಇವರದು. ಅದಕ್ಕಾಗಿ ಅಲ್ಲಿ ಹಸ್ತಾಭಿನಯವನ್ನು ವಿಪುಲವಾಗಿ ಬೆಳೆಸಲಾಗಿದೆ; ಭಾಷೆಯು ಮಾಡುವ ಕೆಲಸವನ್ನೆಲ್ಲ ಹಸ್ತಾಭಿನಯವೂ ಮಾಡಬಲ್ಲುದೆಂದು ಆ ಅಭಿನಯಕ್ರಮ ನಂಬುತ್ತದೆ. 

ಇದು ಮಹಾಕವಿಯಾದ ಕಾಳಿದಾಸನ ನಾಟ್ಯಪ್ರಶಂಸೆ.  ಕಾವ್ಯ, ನಾಟಕವೇ ಮುಂತಾದವುಗಳನ್ನು ಕೇಳುವುದಾಗಲಿ ನೋಡುವುದಾಗಲಿ ನಿಷಿದ್ಧವೆಂದು ಬೋಧಿಸುವ ಸ್ಮೃತಿಕಾರರು ‘ಕಾವ್ಯಾಲಾಪಾಂಶ್ಚವರ್ಜಯೇತ್’ — ಕಾವ್ಯ-ನಾಟಕಾದಿಗಳನ್ನು ವರ್ಜಿಸಬೇಕು ಎಂದು ಹೇಳುತ್ತಿರುವಾಗಲೇ ಅದನ್ನು ವಿರೋಧಿಸುವವರ ಕೂಗೂ ಬಲವಾಗಿ ಎದ್ದಿತ್ತು.  ಕಾವ್ಯ-ನಾಟ್ಯಾದಿಗಳಿಂದ ಧಾರ್ಮಿಕ ಮನೋಭಾವಕ್ಕೆ ನೈತಿಕ ನಿಯಮಗಳಿಗೆ ವ್ಯತ್ಯಯವುಂಟಾಗುವುದೆಂಬುದು ವಿರೋಧಕ್ಕೆ ಕಾರಣವಾದರೆ ಅವು ಅಂತರಂಗ ವಿಕಾಸಕ್ಕೆ ಅನನ್ಯವಾದ ಉಪಹಾರವನ್ನು ಕೊಡುತ್ತವೆಂಬುದು ಇವರ ವಾದ.  ಇಂದಿಗೂ ಧಾರ್ಮಿಕರ ದನಿಯು ಪೂರ್ಣವಾಗಿ ಅಡಗಿದೆಯೆನ್ನುವಂತಿಲ್ಲವಾದರೂ ಸಾಕಷ್ಟು ಕ್ಷೀಣವಾಗಿದೆಯೆನ್ನುವಲ್ಲಿ ಸಂದೇಹವಿಲ್ಲ.  ‘ಸಾಹಿತ್ಯ-ಸಂಗೀತಾದಿ ಕಲೆಗಳ ಪರಿಚಯವಿಲ್ಲದವನು ಬಾಲ-ಕೋಡುಗಳಿಲ್ಲದ ಪಶು’ವೆಂಬ ಭರ್ತೃಹರಿಯ ಮಾತನ್ನು ಅನುಮೋದಿಸುವವರೇ ಹೆಚ್ಚು.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.