Your Cart

Need help? Call +91 9535015489

📖 Print books shipping available only in India. ✈ Flat rate shipping

ಬೇಂದ್ರೆ ಕಾವ್ಯದ ದೇಸಿಯತೆ

Prakash Khade
$0.58

Product details

Author

Prakash Khade

Publisher

Yaji Prakashana

Book Format

Ebook

Language

Kannada

ISBN

978-93-83717-49-1

Pages

68

Year Published

2020

Category

Critical Book

ದ.ರಾ.ಬೇಂದ್ರೆ ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹುದೊಡ್ಡ ಕಾವ್ಯ ಪ್ರತಿಭೆ. ಕಾಮನಬಿಲ್ಲಿನ ಬಣ್ಣ ಏಳಾದರೆ, ಬೇಂದ್ರೆ ಕಾವ್ಯದ ಬಣ್ಣ ಎಂಟು. ಹೊಸಗನ್ನಡ ಕಾವ್ಯಕ್ಕೆ ಹೊಸ ಉಸಿರು, ಹೊಸ ಜೀವತುಂಬಿ ಹಸನುಗೊಳಿಸಿ ಅಂದಿನ ಕವಿಗಳಿಗೆ ಮಾತ್ರವಲ್ಲ, ಮುಂದಿನ ಕವಿಗಳಿಗೂ ಮಾರ್ಗದರ್ಶಕ ಕಾವ್ಯಗುರು ಎನಿಸಿದವರು. ತಮ್ಮ ದೇಸಿನುಡಿಯ ಪ್ರಯೋಗಶೀಲತೆಯ ಮೂಲಕ ಹೊಸಗನ್ನಡ ಕಾವ್ಯ ಭಾಷೆಯನ್ನು ಬೆಳೆಸಲು ನಿರಂತರವಾಗಿ, ಅವಿಚಲರಾಗಿ, ಯಶಸ್ವಿಯಾಗಿ ದುಡಿದ ಹಿರಿಯರಲ್ಲಿ ದ.ರಾ.ಬೇಂದ್ರೆ ಮುಖ್ಯರು. ಬೇಂದ್ರೆಯವರ ಕಾವ್ಯ ಸತ್ವವನ್ನು ಪ್ರಭಾವಿಸಿದ ಮಹತ್ವದ ಅಂಶಗಳ ಬಗೆಗೆ ಸುದೀರ್ಘವಾದ ಚರ್ಚೆ ಈಗಾಗಲೇ ನಡೆದಿದೆಯಾದರೂ ಹೊಸ ತಲೆಮಾರಿನ ಪ್ರತಿಕ್ರಿಯೆಗೆ ದ್ಯೋತಕವಾಗಿ ಡಾ. ಪ್ರಕಾಶ ಗ. ಖಾಡೆ ಅವರ ಈ ಕೃತಿ ಹೊರಬರುತ್ತಿದೆ.
ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ.