Ebook

ಹಿಂದೂ ಧರ್ಮ-ಸಂಶೋಧಿತ ವಿವೇಚನೆ

Original price was: $0.96.Current price is: $0.86.

ಯೂರೋಪಿಯನ್ ಚರಿತ್ರೆಕಾರರು ಬರೆದದ್ದು ವಿಕೃತ, ಪೂರ್ವಗ್ರಹದೂಷಿತ ಮತ್ತು ಅಪೂರ್ಣ ಮಾಹಿತಿಯನ್ನು ಆಧರಿಸಿದ ಇತಿಹಾಸವಾಗಿದ್ದರಿಂದ, ಇಲ್ಲಿಯ ಸಮಾಜದಲ್ಲಿ ಬಲಗೊಂಡ ಕೆಟ್ಟ ಪ್ರವೃತಿಯನ್ನು ನಿರ್ಮೂಲನೆ ಮಾಡಬೇಕಾದರೆ, ಈ ದೇಶದ ಖರೆ ಖರೆ, ಸಾಧಾರವಾಗಿದ್ದು ಸ್ವಾಭಿಮಾನ ಜಾಗೃತಗೊಳ್ಳುವ ಚರಿತ್ರೆಯನ್ನು ಬರೆಯಬೇಕು ಎಂಬ ಅರಿವಿನಿಂದ ಚರಿತ್ರೆಕಾರರ ಒಂದು ಉಜ್ವಲ ಪರಂಪರೆಯು ಭಾರತದಲ್ಲಿ ಮುಂದೆ ಬಂದಿತು. ರಾಜವಾಡೆಯವರದ್ದು ಸಾಮ್ರಾಜ್ಯವಾದಿ ವಿರೋಧಿ ರಾಷ್ಟ್ರವಾದಿ ಚಿಂತನೆಯಿಂದ ಪ್ರಭಾವಿತವಾದ ವ್ಯಕ್ತಿತ್ವವಾಗಿತ್ತು. ಆದರೂ ಅವರು ರಾಷ್ಟ್ರವಾದಿಗಳ ಮರ್ಯಾದೆಯನ್ನು ದಾಟಿ, ಸಾಮಾಜಿಕ ಪ್ರಕ್ರಿಯೆಗಳ ಸ್ಥಿತಿಗತಿಯ ಕಾರಣ ಮೀಮಾಂಸೆಯನ್ನು ಇಹಲೌಕಿಕ-ಭೌತಿಕ ಆಧಾರದ ಮೇಲೆ ಕೈಕೊಂಡಿದ್ದು ಅತ್ಯಂತ ಮಹತ್ವದ್ದು.

ರಾಜವಾಡೆಯವರ ಸಾಮಾಜಿಕ ವಿಷಯಗಳ ಲೇಖನಗಳ ಕೇಂದ್ರವು ಜಾತಿ ಸಂಸ್ಥೆಯ ಉಪಪತ್ತಿ ಮತ್ತು ಉಪಯುಕ್ತತೆಗೆ ಸಂಬಂಧಿಸಿದ ಪ್ರತಿಪಾದನೆಯಾಗಿದ್ದರೂ, ಅವರು ಉಳಿದ ಹಲವು ಪ್ರಶ್ನೆಗಳಿಗೂ ಕೈ ಹಾಕಿದ್ದಾರೆ. ವಿವಿಧ ಜಾತಿಗಳು ನಾಲ್ಕು ವರ್ಣಗಳಿಂದ ನಿರ್ಮಾಣವಾಗಿದ್ದು ಹೇಗೆ, ಯಾವ ಪ್ರಕ್ರಿಯೆಯ ಮೂಲಕ ‘ಬಾಹ್ಯ’ ಜನರು ಸೇರಿಕೊಳ್ಳುತ್ತಾರೆ – ಚಾತುರ್ವರ್ಣ್ಯದಲ್ಲಿ ಶೂದ್ರರು ಪ್ರವೇಶವಾಗಿದ್ದರಿಂದ ಯಾವ ಸಾಮಾಜಿಕ-ಆರ್ಥಿಕ ಪರಿಣಾಮವಾಯಿತು, ವಿವಿಧ ಜಾತಿಗಳ ಮೂಲಸ್ಥಾನ ಯಾವುದು, ಸ್ಥಳಾಂತರ ಆಗಿದ್ದು ಹೇಗೆ, ಜಾತಿ-ಜಾತಿಗಳ ಗುಣವೈಶಿಷ್ಟ್ಯವೇನು ಮತ್ತು ಪರಸ್ಪರ ಸಂಬಂಧ ಹೇಗಿತ್ತು, ಜಾತಿ-ಉಪಜಾತಿಯ ಅಡ್ಡ ಹೆಸರು, ಗ್ರಾಮನಾಮ, ಅವುಗಳ ಭಾಷಾಶಾಸ್ತ್ರೀಯ ಉತ್ಪತ್ತಿ – ಮುಂತಾದ ಹಲವು ಸಮಾಜಶಾಸ್ತ್ರೀಯ ವಿಷಯಗಳ ಕುರಿತು ಬರೆದಿದ್ದಾರೆ. ಪಾಶ್ಚಾತ್ಯರಲ್ಲಿ ಹೊಸದಾಗಿ ಉದಯಕ್ಕೆ ಬಂದ ಸಮಾಜಶಾಸ್ತ್ರದ ಬಗೆಗೆ ಅವರಿಗೆ ಆಸಕ್ತಿಯಿತ್ತು.

Additional information

Category

Translator

Chandrakant Pokale

Publisher

Book Format

Ebook

Pages

96

Language

Kannada

Reviews

There are no reviews yet.

Only logged in customers who have purchased this product may leave a review.