Your Cart

Need help? Call +91 9535015489

📖 Print books shipping available only in India. ✈ Flat rate shipping

ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ

Jaya Mehta, Shukla S P, Siddanagouda Patil, Vineet Tiwari
$0.27

Product details

Author

Jaya Mehta, Shukla S P, Siddanagouda Patil, Vineet Tiwari

Publisher

Nava Karnataka

Book Format

Ebook

Language

Kannada

Pages

40

Year Published

2021

Category

Critical Book

ಜೋಶಿ-ಅಧಿಕಾರಿ ಸಮಾಜ ಅಧ್ಯಯನ ಸಂಸ್ಥೆಯನ್ನು ನಿರ್ವಹಿಸುತ್ತಿರುವ ಯೋಜನಾ ಆಯೋಗದ ನಿಕಟಪೂರ್ವ ಸದಸ್ಯರಾಗಿದ್ದ ಎಸ್.ಪಿ.ಶುಕ್ಲಾ, ಹಿರಿಯ ಆರ್ಥಿಕ ತಜ್ಞೆ ಜಯಾ ಮೆಹ್ತಾ ಮತ್ತು ಸಾಮಾಜಿಕ ಹೋರಾಟಗಾರ ವಿನೀತ್ ತಿವಾರಿಯವರು ದಶಕಗಳಿಂದ ರೈತರ ಮತ್ತು ಕೃಷಿ ಕೂಲಿಕಾರರ ಬದುಕಿನ ಜೊತೆ ನೇರ ಒಡನಾಟದಲ್ಲಿದ್ದು ಭಾರತದ ಕೃಷಿ ಕ್ಷೇತ್ರದ ಅಧ್ಯಯನ ಕೈಗೊಂಡಿದ್ದಾರೆ. ನಾಡಿನ ಖ್ಯಾತ ಸಾಹಿತಿ ಹಾಗೂ ಹೋರಾಟಗಾರರಾದ ಡಾ||ಸಿದ್ದನಗೌಡ ಪಾಟೀಲರು ತಮ್ಮ ಲೇಖನದಲ್ಲಿ ರೈತ ಸಮುದಾಯದ ನಿನ್ನೆ-ನಾಳೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕೃತಿಯು ದೇಶವನ್ನು ಬಾಧಿಸುತ್ತಿರುವ ಕೃಷಿ ಬಿಕ್ಕಟ್ಟಿಗೆ ಮೂಲ ಕಾರಣಗಳನ್ನು ಹುಡುಕುತ್ತ, ಇರುವ ವ್ಯವಸ್ಥೆಯೊಳಗೇ ಪರಿಹಾರಗಳನ್ನು ಸೂಚಿಸುತ್ತದಲ್ಲದೆ, ಕೃಷಿ ಚಟುವಟಿಕೆಯಲ್ಲಿ ಬದುಕನ್ನೇ ಸವೆಸಿದರೂ ಕೃಷಿಕಳೆನಿಸಿಕೊಳ್ಳದ ಕೃಷಿ ಕ್ಷೇತ್ರದಲ್ಲಿನ ಮಹಿಳೆಯ ಬವಣೆಗಳನ್ನು ಚರ್ಚಾವಸ್ತುವಾಗಿ ಮುನ್ನೆಲೆಗೆ ತಂದಿರುವುದು ವಿಶೇಷ.
ನಾಡನ್ನು ಪ್ರೀತಿಸುವ, ಅನ್ನದಾತರ ನೋವಿಗೆ ದನಿಗೂಡಿಸುವ, ಬಿಕ್ಕಟ್ಟು ನಿವಾರಿಸಬೇಕೆಂದು ಆಲೋಚಿಸುವ ಎಲ್ಲರಿಗೂ ಈ ಹೊತ್ತಗೆ ಕೈಪಿಡಿಯಾಗಲಿದೆ. ಅಂಕಿಅಂಶಗಳ ಸಹಿತ ವಸ್ತುನಿಷ್ಠವಾಗಿ ಓದುಗರ ಮುಂದಿಟ್ಟಿರುವ ವಿಚಾರಗಳು ಆರೋಗ್ಯಕರ ಚರ್ಚೆ-ಸ್ವಾದ-ಕ್ರಿಯೆಗಳಿಗೆ ದಾರಿಯಾಗಲಿ.