Your Cart

Need help? Call +91 9535015489

📖 Print books shipping available only in India. ✈ Flat rate shipping

ಕುವೆಂಪು : ಯುಗದ ಕವಿ

G. S. Amur
£0.88

Product details

Category

Critical Books

Author

G. S. Amur

Publisher

Manohara Granthamala

Language

Kannada

ISBN

978-93-81822-56-2

Book Format

Ebook

Pages

182

Year Published

2015

ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳ ಸಾಹಿತ್ಯ, ಸಾಹಿತ್ಯತತ್ವ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಚೆನ್ನಾಗಿ ಬಲ್ಲ, ವಿಮರ್ಶೆಯ ಪರಂಪರೆಯನ್ನು ಗೌರವಿಸುತ್ತಲೇ ಸಿದ್ಧ ಮಾದರಿಗಳನ್ನು ಮುರಿಯುವ ಧೈರ್ಯವನ್ನು ಹೊಂದಿರುವ ಜಿ.ಎಸ್.ಆಮೂರ ಅವರು ನಮ್ಮೆಲ್ಲರ ಪ್ರೀತಿಯ ಹಿರಿಯರು, ಅವರು ಅಪ್ಪಟ ಸಾಹಿತ್ಯ ‘ವಿಮರ್ಶಕರು’. ಆ ಮೂಲಕವೇ ಸಂಸ್ಕೃತಿ ಚಿಂತನೆಗೂ ಕೊಡುಗೆ ನೀಡಿದವರು.
ಅವರು ಈಗಾಗಲೇ ಬೇಂದ್ರೆ, ಶ್ರೀರಂಗ, ಅ.ನ.ಕೃ., ಯು.ಆರ್.ಅನಂತಮೂರ್ತಿ ಮುಂತಾದವರ ಬಗ್ಗೆ ಮಾಡಿದ್ದ ‘ಸಮಗ್ರ ಅಧ್ಯಯನ’ವನ್ನು ಕು.ವೆಂ.ಪು. ಅವರನ್ನು ಕುರಿತ ಈ ಪುಸ್ತಕದಲ್ಲಿಯೂ ಮುಂದುವರಸಿದ್ದಾರೆ. ಇದು ಅತಿರೇಕ ಮತ್ತು ಒಳನೋಟಗಳ ನಡುವೆ ಲಾಳಿ ಹೊಡೆಯುತ್ತಿದ್ದ ‘ಕುವೆಂಪು ವಿಮರ್ಶೆ’ಗೆ ಸಮತೋಲನವನ್ನು ತಂದುಕೊಡುವ ಉದ್ದೇಶ ಹೊಂದಿದೆ. ಕುವೆಂಪು ಅವರ ಬಗ್ಗೆ ಬಂದ ಹಲವು ತಪ್ಪು ಮತ್ತು ಅನುದಾರ ವಿಮರ್ಶೆಗಳಿಗೆ ಉತ್ತರಿಸುತ್ತಲೇ, ಬೇರೆ ಬೇರೆ ಪ್ರಕಾರಗಳಲ್ಲಿ ಅವರ ಸಾಧನೆ ಮತ್ತು ಇತಿಮಿತಿಗಳನ್ನು ಗುರುತಿಸಲಾಗಿದೆ.
ಕುವೆಂಪು ಅವರ ವ್ಯಕ್ತಿತ್ವದ ಮೂಲನೆಲೆಯಾಗಿ ಆಧ್ಯಾತ್ಮಿಕತೆ, ಅವರ ಬರವಣಿಗೆಯು ಸ್ಥಳೀಯ ಮತ್ತು ವೈಶ್ವಿಕಗಳನ್ನು ಹೆಣೆಯುವ ಬಗೆ, ಅವರು ಲೌಕಿಕ ಮತ್ತು ಆಗಮಿಕಗಳ ನಡುವೆ ಸಾಧಿಸಿರುವ ಸಹಯೋಗದ ಸ್ವರೂಪ, ಅವರ ನಾಟಕಗಳ ಸಮಕಾಲೀನತೆ ಮತ್ತು ಸಾಮಾಜಿಕತೆ, ಕಾದಂಬರಿಗಳ ದಾರ್ಶನಿಕ ನೆಲೆಗಟ್ಟು ಮುಂತಾದ ಸಂಗತಿಗಳು ಇಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿವೆ.